ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

Upayuktha
0

ಶಾಲಾ ನಾಯಕನಾಗಿ ಜಸ್ವಿತ್, ನಾಯಕಿಯಾಗಿ ಅರುಂಧತಿ ಎಲ್. ಆಚಾರ್ಯ ಆಯ್ಕೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದಲ್ಲಿ ಸೋಮವಾರ ಶಾಲಾಮಂತ್ರಿಮಂಡಲದ ಚುನಾವಣೆ ನಡೆಯಿತು.  ಶಾಲಾ ನಾಯಕನಾಗಿ ೧೦ನೇ ತರಗತಿ ವಿದ್ಯಾರ್ಥಿ ಜಸ್ವಿತ್ ಹಾಗೂ ಶಾಲಾ ನಾಯಕಿಯಾಗಿ ಅರುಂಧತಿ ಎಲ್. ಆಚಾರ್ಯ ಆಯ್ಕೆಯಾದರು. 

ಶಿಕ್ಷಣ ಮಂತ್ರಿಯಾಗಿ ಎಂಟನೇ ತರಗತಿಯ ವಿದ್ಯಾರ್ಥಿನಿ ರಕ್ಷಾ ಎಸ್.ಎಸ್ ಆರೋಗ್ಯ ಮಂತ್ರಿಯಾಗಿ ಎಂಟನೇ ತರಗತಿಯ ಪರೀಕ್ಷಿತ್, ಕ್ರೀಡಾ ಮಂತ್ರಿಯಾಗಿ ಎಂಟನೇ ತರಗತಿಯ ತನ್ವಿ ಎ.ರೈ ಆಯ್ಕೆಯಾದರೆ, ಸಾಂಸ್ಕೃತಿಕ ಮಂತ್ರಿಯಾಗಿ  ೯ನೇ ತರಗತಿಯ ವಿದ್ಯಾರ್ಥಿನಿ ಅನಘ ವಿ. ಪಿ, ಶಿಸ್ತು ಪಾಲನಾ ಮಂತ್ರಿಯಾಗಿ ೯ನೇ ತರಗತಿ ವಿದ್ಯಾರ್ಥಿನಿ ನಿಯತಿ ಭಟ್ ಆಯ್ಕೆಯಾದರು. 9ನೇ ತರಗತಿಯ ವಿದ್ಯಾರ್ಥಿ ಬಿ. ಅರ್ ಸೂರ್ಯ ಗೃಹಮಂತ್ರಿ ಯಾಗಿ ಆಯ್ಕೆಯಾದರು. ಆಹಾರ ಸಚಿವನಾಗಿ ಏಳನೇ ತರಗತಿಯ ವಿದ್ಯಾರ್ಥಿ ಭಾರ್ಗವ್, ಸಂವಹನ ಮಂತ್ರಿಯಾಗಿ ೭ನೇ ತರಗತಿ ವಿದ್ಯಾರ್ಥಿನಿ ದೃಶಾನ, ನೀರಾವರಿ ಮಂತ್ರಿಯಾಗಿ ಏಳನೇ ತರಗತಿ ವಿದ್ಯಾರ್ಥಿ ಚೇತನ್ ಸುರುಳಿ ಆಯ್ಕೆಯಾದರು.

ಅಂತೆಯೇ ವಿರೋಧ ಪಕ್ಷ ಮಂಡಳಿಯ ಸದಸ್ಯರಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿ ಸುರುಳಿ, ಸಾಹಿತ್, ೯ನೇ ತರಗತಿ ವಿದ್ಯಾರ್ಥಿಗಳಾದ ಸಾನ್ವಿ, ಆಕರ್ಷ್, ಎಂಟನೇ ತರಗತಿ ವಿದ್ಯಾರ್ಥಿಗಳಾದ ಮಂದಿರ ಕಜೆ, ನಿಧಿ ಎಂ.ಯು, ಹಿಮಾಂಶು, ಸುಧನ್ವ ಅಂತೆಯೇ ೭ನೇ ತರಗತಿಯ ವಿದ್ಯಾರ್ಥಿಗಳಾದ ಸಾತ್ವಿಕ್ ಯಶಸ್ ಬಿ.ಜೆ, ವಂಶಿಕಾ ಆಯ್ಕೆಯಾದರು.

ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಮಾತನಾಡಿ  ಮತ ಚಲಾಯಿಸುವುದು ನಮ್ಮ ಹಕ್ಕು ಅಂತೆಯೇ ಮತ ಚಲಾಯಿಸುವಾಗ ಅರ್ಹ ಅಭ್ಯರ್ಥಿಯನ್ನು ನೇಮಕ ಮಾಡುವುದು ನಮ್ಮ ಕರ್ತವ್ಯ. ಅಷ್ಟೇ ಅಲ್ಲ ಆಯ್ಕೆಗೊಂಡ ಪ್ರತಿಯೊಬ್ಬ ಮಂತ್ರಿಯೂ ಕೂಡ ತನ್ನ ಕಾರ್ಯವನ್ನು ಸರಿಯಾಗಿ ನಿಭಾಯಿಸಬೇಕು, ತಾನು ಆಯ್ಕೆಯಾದ ಸ್ಥಾನಕ್ಕೆ ನ್ಯಾಯವನ್ನು ದೊರಕಿಸಬೇಕು  ಎಂದು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top