ಗಾಯಕರಿಗೆ ಆಸಕ್ತಿ ಮುಖ್ಯ-ವಾಣಿ ನಾಗೇಂದ್ರ

Upayuktha
0


ಹಾಸನ:
ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ)ಹೂವಿನ ಹಡಗಲಿ ಇವರು ಆಯೋಜಿಸಿದ ವಾಯ್ಸ್ ಆಪ್ ಕರ್ನಾಟಕ ಸಂಚಿಕೆ-೦೨ರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶ್ರೀಮತಿ ವಾಣಿ ನಾಗೇಂದ್ರ ಹಾಸನ ಇವರು ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದರು.ಗಾಯಕರಿಗೆ ತಾಳ್ಮೆ, ಆಸಕ್ತಿ, ಕಲಿಯುವ ಛಲ ಬಹಳ ಮುಖ್ಯ ಜೊತೆಗೆ ರಾಗ ತಾಳ, ಸ್ಪಷ್ಟವಾದ ಉಚ್ಚಾರಣೆ ಮುಖ್ಯ ಹಾಗೂ ಭಕ್ತಿಗೀತೆಗಳನ್ನು ಹಾಡುವಾಗ ಭಕ್ತಿಗೆ ಪ್ರಾಧಾನ್ಯತೆ ಕೊಡುವುದು ಬಹುಮುಖ್ಯ ಎಂದು ಸಲಹೆ ನೀಡಿದರು.


ವಾಯ್ಸ್ ಆಫ್ ಕರ್ನಾಟಕ ೨ ನೇ ಸಂಚಿಕೆಯಲ್ಲಿ ಬೇರೆಬೇರೆ ಜಿಲ್ಲೆಯ ಹಾಗೂ ಹೊರರಾಜ್ಯದ ಹೊರದೇಶದ ೪೦ ಕನ್ನಡಿಗರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕಲಾಶ್ರೀ ಮ ಹಾದಿಮನಿ ವಹಿಸಿಕೊಂಡು ಭಕ್ತಿಯೆಂದರೇನು ಇಂದಿನ ಮಕ್ಕಳಿಗೆ ಅದರ ಅವಶ್ಯಕತೆ ಏನು ಎಂಬುದನ್ನು ತಿಳಿಸಿದರು.ಕಾರ್ಯಕ್ರಮದ ನಿರೂಪಣೆ ಶ್ರೀ ಗೋಪಾಲನಾಯ್ಕ ಕುಷ್ಟಗಿ ಇವರು ತುಂಬಾ ತಾಳ್ಮೆಯಿಂದ ನಡೆಸಿಕೊಟ್ಟರು.ಪ್ರಾರ್ಥನೆ ಕು.ಮಾನಸ ಮಂಜುನಾಥ ಲಕ್ಕಣ್ಷನವರ ನೆರವೇರಿಸಿದರು ಸ್ವಾಗತ ಶ್ರೀ ಮೂರ್ತಿ ಎಲ್ ಇವರು ನಡೆಸಿಕೊಟ್ಟರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top