ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಅಧಿಕ ಮತದ ಮೂಲಕ ಕಾಂಗ್ರೆಸ್ ಪಕ್ಷವು ಜಯಭೇರಿ ಎನಿಸಿಕೊಂಡಿದೆ ಎಂದು ನಮಗೆಲ್ಲರಿಗೂ ತಿಳಿದಿರುವಂತದ್ದೇ. ಕಾಂಗ್ರೆಸಿಗರು ಗೆಲ್ಲುವ ಮೊದಲು ಕೆಲವು 5 ಯೋಜನೆಗಳನ್ನು ಮುಂದಿಟ್ಟಿದರು. ಅದರಂತೆಯೇ ಮಹಿಳೆಯರ ಉಚಿತ ಬಸ್ ಯೋಜನೆಯನ್ನು ಮೊದಲಿಗೆ ಜಾರಿಗೆ ತಂದರು.
ಈ ಮಹಿಳೆಯರ ಉಚಿತ ಬಸ್ ಎನ್ನುವುದು ಕರ್ನಾಟಕದೆಲ್ಲೆಡೆ ಬಹು ಉತ್ತಮವಾಗಿ ಹುರಿದುಂಬಿಸುವಂತಿದ್ದರೂ ಒಂದೆಡೆ ಬಹಳ ಕಿರುಚಾಟ ರೇಗಾಟ ಪ್ರಾರಂಭವಾಯಿತು. ಇನ್ನೂ ಕೆಲವು ಕಡೆಯ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿಗೆ ಹೋಗಲು ಆಗದೆ ಒದ್ದಾಟ ಪ್ರಾರಂಭವಾಗಿದೆ.
ಉಚಿತ ಬಸ್ ಎಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಮಹಿಳೆಯರೆ ತುಂಬಿ ಕಾಣುತ್ತಿದ್ದಾರೆ.
ಮಾದ್ಯಮಗಳಲ್ಲಿ ಅಂತು ಮಹಿಳೆಯರದ್ದೇ ಚಿತ್ರಣ ಹಾಗೂ ವೀಡಿಯೋ ವೈರಲ್ ಆಗುತ್ತಿದ್ದವು ಮಹಿಳೆಯರದ್ದು ಒಂದೇ ರೀತಿಯ ಉತ್ತರ ಬರುತ್ತಿತ್ತು. ನಮಗೆಲ್ಲ ಹೆಚ್ಚಿನ ಹಣ ಕೊಟ್ಟು ಹೋಗುವಷ್ಟು ಶ್ರೀಮಂತರಲ್ಲಾ ಈ ಯೋಜನೆ ನಮಗೆ ಬಹಳ ಉಪಯೋಗವಾಯಿತು ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಯಿತು .ಎಂದರೇ ಇತ್ತ ಕಡೆಯಲ್ಲಿ ಕೊಟ್ಟ ಯೋಜನೆಯನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳದೆ ಸರಕಾರಿ ಬಸ್ಸಿನ ಡ್ರೈವರ್ ಕಂಡಕ್ಟರ್ ಗಳ ಮೇಲೆ ಹೊಡೆದಾಟ ಪ್ರಾರಂಭಿಸಿಕೊಂಡು ಬಸ್ಸಿನ ಕಿಟಕಿ ಬಾಗಿಲುಗಳನ್ನು ಎಲ್ಲಾ ಕಿತ್ತೆಸೆದುಕೊಂಡು ಒದ್ದಾಟದಲ್ಲಿ ಬಸ್ಸಿನ ಒಳಗೆ ಹೋಗಲು ಪ್ರಾರಂಭಿಸುತ್ತಾರೆ.
ವಿದ್ಯಾರ್ಥಿಗಳದ್ದು ಒಂದೇ ಚೀರಾಟ ನಮಗೆ ಬಸ್ ಉಚಿತ ಕೊಟ್ಟರು ತೊಂದರೆ ಇಲ್ಲ. ಆದರೇ ನಮಗೆ ತರಗತಿಗೆ ಹೋಗಲು ಇಲ್ಲ ಪರೀಕ್ಷೆ ಹೋಗಲು ಅನುಕೂಲ ಮಾಡಿಕೊಡಿ ಎಂದೇ ಆಗಿತ್ತು.
ಉಚಿತ ಬಸ್ಸಿಗೆ ಶಕ್ತಿ ಯೋಜನೆ ಎಂದು ಕಾರ್ಡ್ ಮಾಡಿಲ್ಲದೆ ಇದ್ದುದರಿಂದ ಪ್ರತಿಯೊಂದು ಮಹಿಳೆಯು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಇಂತಹದ್ದನ್ನು ತೋರಿಸಿ ಪ್ರಯಾಣ ನಡೆಸುವಂತೆ ಮಾಡಲಾಗಿತ್ತು.
ಇನ್ನು ಇದರಿಂದ ಬಹಳ ಖಾಸಗಿ ವಾಹನದ ಸವಾರರಿಗೆ ನಷ್ಟವಾಗಿದೆ ಎನ್ನಬಹುದು. ಖಾಸಗಿ ಬಸ್ಸುಗಳಲ್ಲಿ ಮಹಿಳೆಯರ ಪ್ರಯಾಣ ನಡೆಸುವುದು ಒಂದು ಹತ್ತು ಶೇಕಡದಷ್ಟು ಎನ್ನಬಹುದು. ಮಿಕ್ಕಿದೆಲ್ಲವೂ ಉಚಿತ ಬಸ್ಸಿನ ಕಡೆಗೆ ನೇತಾಡಲು ಮುಂದಾಗುತ್ತಿದ್ದರು. ಪ್ರಯೋಜನ ಪಡೆಯುತ್ತಿರುವ ಜನ ಬೆರಳೆಣಿಕೆಯಷ್ಟಿದ್ದರೂ ಇದರಿಂದ ದುರುಪಯೋಗ ಅನುಮಾನ, ಅವಮಾನ ಎದುರಿಸುತ್ತಿರುವವರೇ ಹೆಚ್ಚು ಎನ್ನಲು ಬಹಳ ದುಃಖವಾಗುತ್ತದೆ.
ಯೋಜನೆಗಳೆಲ್ಲವೂ ಉಚಿತವಾಗಿ ಸಿಗುತ್ತಿದೆ ಎಂದು ಹಾರಾಡಿದ ಮಹಿಳೆಯರಿಗೆ ತಮ್ಮದೆ ತೆರಿಗೆಗಳನ್ನು ಇಟ್ಟುಕೊಂಡು ಈ ರೂಪದಲ್ಲಿ ನೀಡುತ್ತಿರುವುದು ಎಂದು ಅರಿವಾಗಲೇ ಇಲ್ಲ.ಅಷ್ಟರಲ್ಲಿ ಪ್ರತಿಯೊಂದು ವಸ್ತುಗಳಲ್ಲಿ ಬೆಲೆ ಏರಿಕೆಯ ಸುದ್ದಿಯನ್ನು ಕೇಳುವಂತಾಯಿತು . ವಿದ್ಯುತ್ ಉಚಿತ ಎಂದರು ಯೂನಿಟ್ ಗೆ ಇಷ್ಟು ಬೆಲೆ ಎಂದು ಮೊದಲಿನಿಂದಲೂ ಏರಿಕೆ ಮಾಡಲಾಗಿದೆ . ಅದೇ ರೀತಿ ಇತ್ತ ತರಕಾರಿಗಳ ಬೆಲೆಯತ್ತ ಕಣ್ಣಾಯಿಸಿದರೆ ಚಿನ್ನವ ಎಂದು ಅನುಮಾನ ಪಡುವಂತಾಗಿದೆ . ಕರ್ನಾಟಕದೆಲ್ಲೆಡೆಯೂ ಒಂದೆರಡು ವಾರದಲ್ಲಿ ಸಂಪೂರ್ಣವಾಗಿ ಉಚಿತ ಬಸ್ಸಿನ ಹಾವಳಿಯೊಂದಿಗೆ ನಿಧಾನವಾಗಿ ಮಹಿಳೆಯರ ಪ್ರಯಾಣ ಕಡಿಮೆಯಾಗುತ್ತಾ ಬರುತ್ತಿವೆ.ಇಷ್ಟೆಲ್ಲಾ ಬೆಲೆ ಏರಿಕೆಯಾದಾಗಲಾದರೂ ಮಹಿಳೆಯರು ಅರ್ಥೈಸಿಕೊಂಡು ಖಚಿತವೆಂದು ಹಾರಾಡುವುದನ್ನು ನಿಲ್ಲಿಸಿ ಸ್ವಲ್ಪ ಆರ್ಥಿಕತೆಯತ್ತಾ ಗಮನಹರಿಸುವುದು ಉತ್ತಮ.
-ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ