ಮಂಗಳೂರು: ಬೆಂಗಳೂರಿನ ಗೋಪಿನಾಥದಾಸ ನ್ಯಾಸ ಜೂನ್ 17ರಂದು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೀನಿಯರ್ ವಿಭಾಗದ ಏಕವ್ಯಕ್ತಿ ಭರತನಾಟ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಮಹತಿ ಪವನಸ್ಕರ್ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮೈಸೂರಿನ ಭಾರತೀಯ ನೃತ್ಯ ಕಲಾ ಪರಿಷತ್ ಜೂನ್ 25ರಂದು ಆಯೋಜಿಸಿದ್ದ ಸಮೂಹ ಭರತನಾಟ್ಯ ಸ್ಪರ್ಧೆಯಲ್ಲೂ ಈಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಈಕೆ ನಗರದ ಹೆಸರಾಂತ ಭಟ್ಸ್ ಆಟೋ ಕೇರ್‍ನ ಮಾಲೀಕರಾದ ಹರೀಶ್ ಪವನಸ್ಕರ್ ಮತ್ತು ಮಾಲಿನಿ ಪವನಸ್ಕರ್ ದಂಪತಿಗಳ ಪುತ್ರಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ