ಯಾರು ಹಿಂದೂ ರಾಷ್ಟ್ರದ ಕಾರ್ಯ ಮಾಡುವರೋ, ಅವರೇ ದೇಶವನ್ನು ಆಳುವರು...

Upayuktha
0

ಗೋವಾದಲ್ಲಿ ಏಳು ದಿನಗಳ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ' ಸಂಪನ್ನ



ಳೆದ ಕೆಲವು ವರ್ಷಗಳಿಂದ ದೇಶದಲ್ಲಷ್ಟೇ ಅಲ್ಲ, ವೈಶ್ವಿಕ ಮಟ್ಟದಲ್ಲಿ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿದೆ. ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ಶಕ್ತಿಗಳ ಕನಸುಗಳು ವಿಫಲವಾಗುತ್ತಿವೆ, ಹಿಂದೂಗಳು ಜಾಗೃತರಾಗಿದ್ದಾರೆ. ಹಿಂದೂ ರಾಷ್ಟ್ರವೇ ಜನರ ‘ಮನ್ ಕೀ ಬಾತ್’ ಆಗಿದ್ದು ಯಾರು ಹಿಂದೂ ರಾಷ್ಟ್ರದ ಕಾರ್ಯ ಮಾಡುವರೋ ಅವರೇ ದೇಶದಲ್ಲಿ ಆಡಳಿತ ನಡೆಸುವರು ಈ ಭಾವನೆ ದೃಢವಾಗುತ್ತಿದೆ. ‘ಹಿಂದೂ ರಾಷ್ಟ್ರ ಇದು ಯಾವುದೇ ರಾಜಕೀಯ ಪರಿಕಲ್ಪನೆಯಾಗಿರದೆ ಆಧ್ಯಾತ್ಮಿಕ ಪರಿಕಲ್ಪನೆಯಾಗಿದೆ.


‘ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಇದು ಸಂಕುಚಿತವಲ್ಲ, ವಿಶ್ವಕಲ್ಯಾಣಕಾರಿ ಕಾರ್ಯವಾಗಿದೆ. ಇದರಲ್ಲಿನ ಒಂದು ಹಂತ ಎಂದು ಭಾರತೀಯ ಸಂವಿಧಾನದಲ್ಲಿನ ‘ಸೆಕ್ಯುಲರ್ ಮತ್ತು ‘ಸೋಷಿಯಲಿಸ್ಟ್ ಈ ಪದಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ‘ಸ್ಪಿರಿಚುಯಲ್ ಈ ಪದ ಪ್ರತಿಷ್ಠಾಪಿಸಬೇಕು, ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒಮ್ಮತದಿಂದ ಗೋವಾದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅರ್ಥಾತ್ ಹನ್ನೊಂದನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಬೇಡಿಕೆ ಸಲ್ಲಿಸಲಾಯಿತು. ದೇಶದ ಮೂಲೆ ಮೂಲೆಯಿಂದ ಹಾಗೂ ವಿದೇಶದಿಂದಲೂ 800ಕ್ಕೂ ಅಧಿಕ ಸಂತರು, ಧರ್ಮನಿಷ್ಠರು, ನ್ಯಾಯವಾದಿಗಳು, ವಿಚಾರವಂತರು, ಹಾಗೂ 350ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಈ ಮಹೋತ್ಸವದಲ್ಲಿ ಸಹಭಾಗಿಯಾಗಿದ್ದರು.


‘ಹಿಂದೂ ರಾಷ್ಟ್ರದಿಂದ ಹಿಂದೂ ವಿಶ್ವದವರೆಗೆ ಇದು ಈ ಮಹೋತ್ಸವದ ಟ್ಯಾಗ್‌ಲೈನ್ ಅಂದರೆ ಘೋಷವಾಕ್ಯವಾಗಿತ್ತು. ಈ ಮಹೋತ್ಸವದಲ್ಲಿ ಹಿಂದುತ್ವದ ಮೇಲಿನ ಆಘಾತದ ವಿರುದ್ಧ ಚರ್ಚೆ ನಡೆಸಲಾಯಿತು. ಅದನ್ನು ತಡೆಯಲು ವೈಚಾರಿಕ, ಸಾಂವಿಧಾನಿಕ ಹಾಗೂ ಕೃತಿಯ ಸ್ತರದಲ್ಲಿ ಏನು ಪ್ರಯತ್ನ ಮಾಡಬೇಕು ಎಂಬುದಕ್ಕೆ ದಿಶೆ ನಿಶ್ಚಿತಗೊಳಿಸಲಾಯಿತು. ಹಿಂದುತ್ವನಿಷ್ಠರು ಧರ್ಮಬಂಧುತ್ವದ ಸಂಬಂಧದಲ್ಲಿ ಬೆಸೆದ ಸಂಘಟನೆ, ಹಿಂದೂ ರಾಷ್ಟ್ರ ಕಾರ್ಯಕ್ಕೆ ಉಪಾಸನೆಯ ಅಧಿಷ್ಠಾನ ಮಾಡುವಂತೆ ತೆಗದುಕೊಂಡ ನಿರ್ಧಾರ ಹಾಗೂ ಧರ್ಮಕಾರ್ಯಕ್ಕೆ ವೇಗ ನೀಡಲು ಎಲ್ಲರೂ ಮಾಡಿರುವ ದೃಢ ಸಂಕಲ್ಪ ಇವು ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಫಲನಿಷ್ಪತ್ತಿಯನ್ನಬಹುದು.


ಹಿಂದೂ ರಾಷ್ಟ್ರದ ವಿಚಾರ ಮನೆ ಮನೆಗೆ, ಮನಸ್ಸು ಮನಸ್ಸಿಗೆ ತಲುಪಿಸಲು ಕಾರ್ಯ ಮಾಡುವ ನಿರ್ಧಾರವನ್ನು ಹಿಂದೂ ರಾಷ್ಟ್ರವೀರರು ಮಾಡಿದ್ದಾರೆ. ಅಧಿವೇಶನದಲ್ಲಿ ಹಿಂದೂ ಸಮಾಜ ಮತ್ತು ಸರಕಾರ ಇವರಲ್ಲಿ ಸಮನ್ವಯ ಸ್ಥಾಪಿಸಲು ಗ್ರಾಮ ಸ್ತರದಿಂದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸ್ಥಾಪನೆ ಮಾಡಲು ನಿಶ್ಚಯಿಸಲಾಗಿದೆ. ಇದರೊಂದಿಗೆ ಲವ್ ಜಿಹಾದ್ ಮತ್ತು ಹಲಾಲ್ ಜಿಹಾದ್ ವಿರುದ್ಧ ವರ್ಷವಿಡೀ ಜಾಗೃತಿಯ ಅಭಿಯಾನ ನಡೆಸುವುದು, ಹಾಗೂ ದೇವಸ್ಥಾನ ಸಂಸ್ಕೃತಿಯ ಪುನರುಜ್ಜೀವನಗೊಳಿಸಲು 1000 ದೇವಸ್ಥಾನಗಳಲ್ಲಿ  ವಸ್ತ್ರ ಸಂಹಿತೆ ಜಾರಿ ಮಾಡಲು ‘ಸಮಾನ ಕೃತಿ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಗಿದೆ.


ಗೋವಾದ ಅಧಿವೇಶನದಿಂದ ಪ್ರಾರಂಭವಾಗಿರುವ ಹಿಂದೂ ರಾಷ್ಟ್ರದ ಬೇಡಿಕೆ ಈಗ ಜನತೆಯ ಕೂಗಾಗಿದೆ. ಸಾಧು ಸಂತರು, ರಾಜಕೀಯ ನಾಯಕರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ ಈಗ ಫ್ರೀ ವಿದ್ಯುತ್, ಫ್ರೀ ಪ್ರಯಾಣದಂತಹ ಹುಸಿ ಆಶ್ವಾಸನೆಗಳು ಬೇಡ, ಭಾರತವನ್ನು ಹಿಂದೂ ರಾಷ್ಟ್ರ ಘೋಷಿಸುವಂತೆ ದೃಢ ಘೋಷಣೆ ಮೊಳಗಬೇಕಿದೆ.


**********


ಸಂಪೂರ್ಣ ಭಾರತದಲ್ಲಿ ಗೋಹತ್ಯೆ ನಿಷೇಧ ಕಾನೂನು ಮತ್ತು ಮತಾಂತರ ನಿಷೇಧ ಕಾನೂನು ಜಾರಿಯಾಗಬೇಕು, ಹಿಂದೂಗಳ ದೇವತೆಗಳ ಅಪಮಾನ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಕಾನೂನು ತರುವುದು, ವಕ್ಫ್ ಕಾನೂನು ಮತ್ತು ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ಅಂತಹ ಅನ್ಯಾಯಿ ಕಾನೂನು ರದ್ದುಪಡಿಸುವುದು ಮುಂತಾದ ಹಿಂದೂಹಿತದ ಬೇಡಿಕೆಗಳು ಘೋಷಣಾ ಪತ್ರದಲ್ಲಿ ನೀಡಿ ಅದನ್ನು ಪೂರ್ಣಗೊಳಿಸುವ ಜನಪ್ರತಿನಿಧಿಗಳಿಗೆ ೨೦೨೪ ರಲ್ಲಿ ನಡೆಯುವ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದುಗಳ ಬಹಿರಂಗ ಬೆಂಬಲವಿರುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರು ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಪ್ರತಿಪಾದಿಸಿದರು.


ಹಿಂದೂಗಳು ರಾಜಕೀಯ ದೃಷ್ಟಿಯಿಂದ ಜಾಗೃತವಾಗದಿರುವುದೇ ಹಿಂದೂಗಳ ಪರಾಭವದ ಕಾರಣವಾಗಿದೆ. ಜಾಗೃತ, ಕ್ರಿಯಾಶೀಲ ಮತ್ತು ಸಂಘಟಿತ ನಾಗರಿಕರೇ ಪ್ರಜಾಪ್ರಭುತ್ವದ ಶಕ್ತಿಯಾಗಿದ್ದಾರೆ. ಆದ್ದರಿಂದ ಸ್ವದೇಶ, ಸ್ವಾತಂತ್ರ್ಯ, ಸಮಾಜ ವ್ಯವಸ್ಥೆ ಇವುಗಳ ಬಗ್ಗೆ ಹಿಂದೂಗಳ ಅಜ್ಞಾನ, ಸ್ವಾರ್ಥ ಮತ್ತು ಅಸಂಘಟಿತತೆ ಇದರ ಬಗ್ಗೆ ಗಮನಹರಿಸಿ ಕಾರ್ಯ ಮಾಡುವ ಅವಶ್ಯಕತೆ ಇದೆ. ಹಿಂದೂಗಳ ರಕ್ಷಣೆಗಾಗಿ ಹಿಂದೂಗಳ ಸಕ್ಷಮ ಇಕೋಸಿಸ್ಟಮ್ ಇರಬೇಕು, ಎಂದು ಶ್ರೀ ಕಪಿಲ ಮಿಶ್ರಾ  ಇವರು ಪ್ರತಿಪಾದಿಸಿದರು.


ಇನ್ನು ಜಿಹಾದಿ ಭಯೋತ್ಪಾದಕರಿಂದಾದ ಕಾಶ್ಮೀರಿ ಪಂಡಿತರ ನರಸಂಹಾರವನ್ನು ನಿರ್ಲಕ್ಷಿಸಿದ್ದರಿಂದಲೇ ಇಂದು ಅನೇಕ ಕಡೆಗಳಲ್ಲಿ ‘ಕಾಶ್ಮೀರಿ ಪ್ಯಾಟರ್ನ್ ನಡೆಸಲಾಗುತ್ತಿದೆ, ಎಂದು ‘ಯೂಥ್ ಫಾರ್ ಪನೂನ್ ಕಾಶ್ಮೀರ್‍‌ನ ಅಧ್ಯಕ್ಷ ರಾಹುಲ್ ಕೌಲ್ ಇವರು ಹೇಳಿದರು.


ಭಾರತದಲ್ಲಿ ‘ವಂದೇ ಭಾರತ್ ಎಕ್ಸಪ್ರೆಸ್ ಆರಂಭವಾದಾಗಿನಿಂದ ಅದರ ಮೇಲೆ ದೇಶಾದ್ಯಂತ ಅಲ್ಲಲ್ಲಿ ಕಲ್ಲು ತೂರಾಟ ನಡೆಯುತ್ತಿದೆ. ದಾಳಿಯ ಪದ್ಧತಿ ಕೂಡ ಸಮಾನವಾಗಿದೆ. ‘ವಂದೇ ಮಾತರಮ್ ಗೀತೆಯನ್ನು ದ್ವೇಷಿಸುವವರು ‘ವಂದೇ ಭಾರತ ಎಕ್ಸ್‌ಪ್ರೆಸ್ ಮೇಲೆ ದಾಳಿ ಮಾಡುತ್ತಾರೆ. ಇದು ‘ರೈಲ್ ಜಿಹಾದ್ ಅಲ್ಲವೇ? ಎಂದು ದೆಹಲಿಯ ರಕ್ಷಣಾ ವಿಶೇಷಜ್ಞ ಕರ್ನಲ್ ಆರ್.ಎಸ್.ಎನ್. ಸಿಂಹ ಇವರು ಪ್ರಶ್ನೆ ಮಾಡಿದ್ದಾರೆ.


‘ಹಲಾಲ್ ಮೂಲಕ ನಡೆಯುತ್ತಿರುವ ಆರ್ಥಿಕ ದಾಳಿಗೆ ಉತ್ತರ ನೀಡಲು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕರಾದ ರಣಜಿತ್ ಸಾವರ್ಕರ್ ಇವರು ಕರೆ ನೀಡಿದರು. ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರ ಪ್ರಭಾವಿಯಾಗಿ ವಾದ ಮಂಡಿಸುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಜೈನ ಇವರು ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂದೆ ಮುಕ್ತಿಗಾಗಿ ಹೋರಾಟ ನಡೆಸುವೆವು ಎಂದು ಘೋಷಿಸಿದರು.


ಕಠುವಾ ಬಲಾತ್ಕಾರ ಪ್ರಕರಣದಲ್ಲಿ ಅಭ್ಯಾಸಪೂರ್ವಕ ತಥ್ಯ ಮಂಡಿಸುತ್ತಾ ಪ್ರಾ. ಮಧು ಕಿಶ್ವರ್ ಇವರು ಈ ಪ್ರಕರಣ ಹಿಂದೂಗಳನ್ನು ಜಮ್ಮುವಿನಿಂದ ಹೊರತಳ್ಳುವ ಷಡ್ಯಂತ್ರ ಹೇಗಿತ್ತು ಎಂದು ಎಲ್ಲರೆದರು ಸಾಕ್ಷಿ ಸಮೇತ ಮಂಡಿಸಿದರು. ಈ ಸಮಯದಲ್ಲಿ ‘ದ ರ‍್ಯಾಷನಲಿಸ್ಟ್ ಮರ್ಡರ್ಸ್ ಈ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಪುಸ್ತಕದ ಲೇಖಕ ಡಾ. ಅಮಿತ್ ಥಡಾನಿ ಇವರು ದಾಭೋಲಕರ, ಪಾನ್ಸರೆ, ಗೌರಿ ಲಂಕೇಶ್ ಮುಂತಾದವರ ಹತ್ಯೆಯ ವಿಚಾರಣೆ ಕೇವಲ ರಾಜಕೀಯ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಸಾಕ್ಷಿ ಸಮೇತ ಮಂಡಿಸಿದರು.


ಸಂಕ್ಷಿಪ್ತದಲ್ಲಿ, ಹಿಂದುತ್ವನಿಷ್ಠರ ಅಪೂರ್ವ ಉತ್ಸಾಹದಲ್ಲಿ ಸಂಪನ್ನಗೊಂಡಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ನಡೆಸುವ ಅಭಿಯಾನಗಳಿಗೆ ಗತಿ ನೀಡಲು, ಹಾಗೂ ವ್ಯಾಪಕ ಮಾಡಲು ನಿಶ್ಚಯಿಸಲಾಯಿತು. ಹಿಂದೂ ರಾಷ್ಟ್ರದ ಪರಿಕಲ್ಪನೆ ಕೇವಲ ರಾಜಕೀಯವಲ್ಲ ಅದು ಆಧ್ಯಾತ್ಮಿಕವಾಗಿದೆ, ಅದು ರಾಮ ರಾಜ್ಯದ ಭೂಮಿಯ ಮೇಲಿದೆ. ಅದನ್ನು ಸಾಧ್ಯಗೊಳಿಸಲು ಸತತ ಪ್ರಯತ್ನಿಸುವುದಾಗಿ ಸಮಸ್ತ ಹಿಂದುತ್ವನಿಷ್ಠರು ನಿರ್ಧರಿಸಿದ್ದಾರೆ. ಕಾಲಮಹಾತ್ಮೆಗನುಸಾರ 2025ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಈ ಕಾರ್ಯದಲ್ಲಿ ತನು ಮನ ಧನ ಸಮರ್ಪಿತಗೊಳಿಸುವ ಪ್ರೇರಣೆ ಎಲ್ಲರಿಗೂ ದೊರೆಯಲಿ ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ.

ಸಂಕಲನ: ಶ್ರೀ ರಮೇಶ ಶಿಂದೆ,

ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top