ಶಾಸಕ, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ

Upayuktha
0

ನಮ್ಮೂರ ಧ್ವನಿ ಸೇವಾ ಸಂಘ ಮತ್ತು ಪೌರ ಸಮಿತಿ ಅಳೇಕಲ ವತಿಯಿಂದ



ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಮತ್ತು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಯು.ಟಿ. ಖಾದರ್ ಅವರಿಗೆ ನಮ್ಮೂರ ಧ್ವನಿ ಸೇವಾ ಸಂಘ (ರಿ.) ಮತ್ತು ಪೌರ ಸಮಿತಿ ಅಳೇಕಲ, ಉಳ್ಳಾಲ ವತಿಯಿಂದ ಸನ್ಮಾನ ಕಾರ್ಯಕ್ರಮ ಅಳೇಕಲ  ಮದನಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಅಳೇಕಲ, ಮಾರ್ಗತಲೆ, ಮಂಚಿಲ, ಹಳೆಕೋಟೆ, ಪಾಂಡೆಲ್ ಪಕ್ಕ ಈ ಪ್ರದೇಶದ ಜನರು ಒಗ್ಗೂಡಿಕೊಂಡು ಪೌರ  ಸಮಿತಿಯ ಮುಖಾಂತರ ಕರ್ನಾಟಕ ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಸನ್ಮಾನಿಸಿದರು.

ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ ಯಾವುದೇ ಅಪೇಕ್ಷೆಯಿಲ್ಲದೆ ಆಸೆ ವ್ಯಕ್ತಪಡಿಸದೆ ನಿಯತ್ತಿನಿಂದ ಕೆಲಸ ಮಾಡಿದರೆ ಜೀವನದಲ್ಲಿ ಗೆಲುವು ಖಚಿತ, ಅದಕ್ಕೆ ನಾನೇ ಉದಾಹರಣೆ, ಹಿರಿಯರ ಮಾರ್ಗದರ್ಶನ ಮುಖಾಂತರ ಮುಂದೆ ಹೋಗಬೇಕು, ಅಭಿವೃದ್ಧಿಯ ಕರ್ನಾಟಕ ಬಲಿಷ್ಟ ಭಾರತ ನಿರ್ಮಿಸಲು ಎಲ್ಲರೂ ಸಹಕರಿಸ ಬೇಕೆಂದು ಹೇಳಿದರು.

ನಮ್ಮೂರ ಧ್ವನಿ ಸೇವಾ ಸಂಘ ಮತ್ತು ಪೌರ ಸಮಿತಿ‌ ಅಳೇಕಲ ಅಧ್ಯಕ್ಷ ಉಮ್ಮರ್ ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಅಳೇಕಲ ಮಸೀದಿ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ, ಹಳೆಕೋಟೆ ಮಸ್ಜಿದುಲ್ ಕರೀಂ ಮಸೀದಿ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಮಂಚಿಲ ಮಸೀದಿ ಅಧ್ಯಕ್ಷ ಮೊಹಮ್ಮದ್ ಅಶ್ರಫ್, ಅಳೇಕಲ ಅಲ್ ಫುರ್ಕಾನ್ ಮಸೀದಿ ಅಧ್ಯಕ್ಷ ಅರಬಿ, ಮದನಿ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಫತ್ತಾಕ್, ಪೆರ್ಮನ್ನೂರು ಸಂತ ಸಬೆಸ್ಟಿಯನ್ ಪುಣ್ಯಕೇಂದ್ರದ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಣ್ ಡಿಸೋಜ, ಸಮಾಜ ಸೇವಕ ಲಾರೆನ್ಸ್ ರೂಡಿ ಡಿಸೋಜ, ಪೆರ್ಮನ್ನೂರು ಕೆಥೋಲಿಕ್ ಸಭಾ ಅಧ್ಯಕ್ಷ ನವೀನ್ ಡಿಸೋಜ, ರಾಜೇಶ್ ಗುರಿಕಾರ, ಬಿ.ಬಾಯ್ಸ್ ಅಧ್ಯಕ್ಷ ಸಲೀಮ್, ಉಪಾಧ್ಯಕ್ಷ ತ್ವಾಹ,  ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ನಝೀರ್ ಹುಸೈನ್, ಉದ್ಯಮಿ ನಝೀರ್ ಆರ್.ಕೆ, ನಮ್ಮೂರ ಧ್ವನಿಸೇವಾ ಸಂಘದ ಇಜಾಝ್, ಅಶ್ಪಾಕ್ ಮೊದಲಾದವರು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಯು.ಎಸ್ ಹಂಝ, ಆರ್.ಕೆ ಯಾಕೂಬ್, ಯು.ಪಿ ಅರಬಿ, ಅಬ್ದುಲ್ ಖಾದರ್ ಸಾದಿಹಿತ್ಲು, ಅಹ್ಮದ್ ಬಾವ ಮಂಚಿಲ, ಅಬ್ಬಾಸ್ ಮಾರ್ಗತಲೆ, ರಾಜು ಬಂಡಸಾಲೆ, ಲಾರೆನ್ಸ್ ರೂಡಿ ಡಿಸೋಜ, ಅಲ್ತಾಫ್ ಯು.ಎಚ್   ಇವರನ್ನು ಸನ್ಮಾನಿಸಲಾಯಿತು.

ನಮ್ಮೂರ ಧ್ವನಿ ಸೇವಾ ಸಂಘದ  ಸಮೀರ್ ಆರ್.ಕೆ ಸ್ವಾಗತಿಸಿದರು, ಉಳ್ಳಾಲ ನಗರ ಸಭೆಯ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿ  ಪ್ರಾಸ್ತಾವಿಕವಾಗಿ ಮಾತನಾಡಿ ದರು, ಉಳ್ಳಾಲ ನಗರ ಸಭೆ ಸದಸ್ಯ ಯು.ಎ ಇಸ್ಮಾಯಿಲ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top