
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು 'ಫ್ರೇಮ್ವರ್ಕ್ ಫಾರ್ ಲೈಫ್-ಸ್ಟೈಲ್ ಮ್ಯಾನೇಜ್ಮೆಂಟ್ ಎಮಾಂಗ್ ಜೆಂಡರ್ಸ್ ಫಾರ್ ಇನ್ಸ್ಟಿಟ್ಯೂಶನಲ್ ಬಿಲ್ಡಿಂಗ್' ಎಂಬ ವಿಷಯದ ಬಗೆಗೆ ಜೂನ್ 2-6 ರವರೆಗೆ 5 ದಿನಗಳ ಪ್ರಾಧ್ಯಾಪಕ ಜ್ಞಾನಾಭಿವೃದ್ದಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಈ ಕಾರ್ಯಾಗಾರವು ಹೈಬ್ರಿಡ್ ಮೋಡ್ ನಲ್ಲಿ ನಡೆಯಲಿದ್ದು ಆರ್ಥಿಕ ಸಂಪನ್ಮೂಲಗಳ ಸಮಾನ ಹಕ್ಕುಗಳನ್ನು ನೀಡುವ ಸುಧಾರಣೆಗಳ ಬಗೆಗೆ ಚಿಂತಿಸಲಿ, ಸಮಾಲೋಚಿಸಲು ಒಂದು ವೇದಿಕೆಯಾಗಲಿದೆ ಹಾಗೂ ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಭೂಮಿ ಮತ್ತು ಇತರ ರೀತಿಯ ಆಸ್ತಿ, ಹಣಕಾಸು ಸೇವೆಗಳು, ಆನುವಂಶಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಾಲೀಕತ್ವಗಳ ಬಗೆಗೆ ಮಾಹಿತಿ ನೀಡಲಿದೆ. ಪ್ರತಿಯೋರ್ವ ಮಾನವನ ಸಬಲೀಕರಣವನ್ನು ಉತ್ತೇಜಿಸಲು ತಂತ್ರಜ್ಞಾನ ಮತ್ತು ಸಂವಹನ ಕ್ಷೇತ್ರದಲ್ಲಿ ಉತ್ತಮ ಕೆಲಸಗಳಾಗಬೇಕಿದೆ ಎಂಬ ಹಿನ್ನಲೆಯಲ್ಲಿ ಈ ಕಾರ್ಯಾಗಾರವನ್ನು ರೂಪಿಸಲಾಗಿದೆ.
ಈ ಕಾರ್ಯಾಗಾರವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲುಂಕರ್ ಹಾಗೂ ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಸೂರ್ಯನಾರಾಯಣ ಕೆ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿದ್ದು ಇನ್ಫಾರ್ಮೇಶನ್ ಸೈನ್ಸ್ ವಿಭಾಗದ ಪ್ರೊ.ಕರುಣಾ ಪಂಡಿತ್ ಮತ್ತು ಇಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕಿ ಡಾ.ಅನಿತಾ ಮರೀನಾ ಕೊಲಾಕೊ ಅವರು ಸಂಯೋಜಿಸಲಿರುವರು. ಹೈದರಾಬಾದ್, ತೆಲಂಗಾಣ, ಮುಂಬೈ, ಬೆಂಗಳೂರು, ಮುರ್ರೆ ಸ್ಟೇಟ್ ಯೂನಿವರ್ಸಿಟಿಯ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಗೋಷ್ಠಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ