ಮಂಗಳೂರು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮ ವಿದ್ಯಾ ಸಂಸ್ಥೆ ಅರ್ಕುಳ ಫರಂಗಿಪೇಟೆ ಇಲ್ಲಿನ ಮಕ್ಕಳ ಯಕ್ಷಗಾನ ತಂಡ 'ಪಟ್ಲ ಸಂಭ್ರಮ- 2023'ರ ಪ್ರೌಢ ಶಾಲಾ ವಿಭಾಗದ ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರೂ.20,000 ನಗದು ಬಹುಮಾನ ಗಳಿಸಿದೆ.
ವೃತ್ತಿಪರ ಕಲಾವಿದರಂತೆ, ಅಭಿನಯ, ಸ್ಪಷ್ಟ ಉಚ್ಚಾರದೊಂದಿಗೆ ಅರ್ಥಗಾರಿಕೆ, ವೇಷ ಭೂಷಣಗಳ ಒಟ್ಟಂದದಲ್ಲಿ ಅವರು ಅಭಿನಯಿಸಿದ 'ವೀರ ತರಣಿಸೇನ' ಪ್ರಸಂಗಕ್ಕೆ ಈ ಬಹುಮಾನ ಲಭಿಸಿದೆ. ಅಲ್ಲದೆ ರಾವಣ, ವಿಭೀಷಣ ಮತ್ತು ಸರಮೆ ಪಾತ್ರಧಾರಿಗಳು ವೈಯಕ್ತಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಅಭಿನಂದನೆ:
ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅರ್ಕುಳ ಫರಂಗಿಪೇಟೆ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು. ಯಕ್ಷಗಾನವನ್ನು ಸಂಯೋಜಿಸಿ ಯಶಸ್ಸಿಗೆ ಕಾರಣರಾದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಕೆ ಜಯರಾಮ ಶೇಕರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ