ವಿದ್ಯಾರ್ಥಿ ಚಿರಾಗ್ ಸಂದೇಶ್ ಶೆಟ್ಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 233 ನೇ ರಾಂಕ್ ಹಾಗೂ ಬಿ & ಡಿ ಫಾರ್ಮಾ ವಿಭಾಗದಲ್ಲಿ 661 ರಾಂಕ್ ಗಳಿಸಿರುತ್ತಾರೆ. ವಿದ್ಯಾರ್ಥಿ ಸ್ವರೂಪ್ ಶೆಟ್ಟಿ ಎಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 1078 ನೇ ರಾಂಕ್, ಬಿ.ಎನ್.ವೈ.ಎಸ್ ವಿಭಾಗದಲ್ಲಿ 1951, ಇಂಜಿನಿಯರಿಂಗ್ ವಿಭಾಗದಲ್ಲಿ 2534 ನೇ ರಾಂಕ್ ಗಳಿಸಿರುತ್ತಾರೆ. ವಿದ್ಯಾರ್ಥಿನಿ ವಿಶಿತಾ ಇಂಜಿನಿಯರಿಂಗ್ ವಿಭಾಗದ ಸಿಇಟಿಯಲ್ಲಿ 1474 ನೇ ರಾಂಕ್ ಪಡೆದಿರುತ್ತಾರೆ.
ನಿಟ್ಟೆ ಪದವಿಪೂರ್ವ ಕಾಲೇಜಿನ ಇನ್ನೂ ಹಲವಾರು ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಯಶಸ್ಸಿಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ







