ನಿಟ್ಟೆ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ಸೆಂಟರ್ ನಲ್ಲಿ 9 ನೇ ವಿಶ್ವ ಯೋಗ ದಿನಾಚರಣೆ

Upayuktha
0

ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ಆಚರಿಸಲಾಯಿತು. 752 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನದ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯೋಗ ಗುರುಗಳು ಹಾಗೂ ಅಂತರಾಷ್ಟ್ರೀಯ ಯೋಗ ತೀರ್ಪುದಾರ ಶ್ರೀ ಕೆ. ನರೇಂದ್ರ ಕಾಮತ್ ಭಾಗವಹಿಸಿದ್ದರು. ಶ್ರೀಯುತರು ಅಷ್ಟಾಂಗ ಯೋಗದ ಪರಿಚಯ  ಹಾಗೂ ಯೋಗಾಭ್ಯಾಸದ ಪ್ರಯೋಜನ, ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮನುಷ್ಯನ ಸಾಧನೆಗಳಿಗೆ ಶರೀರವೇ ಮಾಧ್ಯಮ, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ಶರೀರದ ಸ್ವಾಸ್ಥ್ಯದ ಬಗ್ಗೆ ಗಮನ ಹರಿಸಬೇಕು ಎಂದು  ತಿಳಿಸಿದರು,  ಹಾಗೂ  ಯೋಗ ದಿನಾಚರಣೆ ಆಯೋಜನೆಯ ಬಗ್ಗೆ ಸಂತಸ  ವ್ಯಕ್ತಪಡಿಸಿದರು. ಎನ್.ಎಮ್.ಎ.ಎಮ್.ಐ.ಟಿ. ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೊಂಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.


ಯೋಗ ದಿನಾಚರಣೆಯ ಪ್ರಯುಕ್ತ ಇಂಜನಿಯರಿಂಗ್ ಕಾಲೇಜಿನ ಯೋಗ ಕ್ಲಬ್ ನ  ವಿದ್ಯಾರ್ಥಿಗಳು ಆಕರ್ಷಕ ಯೋಗ ಪ್ರದರ್ಶನವನ್ನು ನೀಡಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಅಜಿತ್  ಹೆಬ್ಬಾಳೆ ಸಾಮೂಹಿಕ ಯೋಗ ಪ್ರದರ್ಶನವನ್ನು ಸಂಯೋಜಿಸಿದರು. ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಯೋಗೀಶ್ ಹೆಗ್ಡೆ, ನಿರ್ದೇಶಕರು ಸಿಎಂ &ಡಿ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯದ  ಆಫ್ ಕ್ಯಾಂಪಸ್ ನ ವಿವಿಧ ಸಂಸ್ಥೆಗಳ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಿದ್ಯಾರ್ಥಿನಿಲಯಗಳ ಮುಖ್ಯ ಪಾಲಕರು ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಮಹಿಳಾ ವಿದ್ಯಾರ್ಥಿನಿ ನಿಲಯದ ಮಖ್ಯ ನಿಲಯಪಾಲಕಿ ಡಾ. ವೀಣಾದೇವಿ ಶಾಸ್ತ್ರಿಮಠ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಶೇಖರ್ ಪೂಜಾರಿ ಧನ್ಯವಾದ ಸಮರ್ಪಿಸಿದರು ಹಾಗೂ ಕಾರ್ಯಕ್ರಮವನ್ನು ಸಿ.ಎಸ್.ಇ. ವಿಭಾಗದ ಉಪನ್ಯಾಸಕಿ ಕುಮಾರಿ ಕೀರ್ತನಾ  ಬಿ.ಸಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Advt Slider:
To Top