ಮೂಡುಬಿದಿರೆ: ಮೂಡುಬಿದಿರೆ ಹವ್ಯಕ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಹನುಮಗಿರಿ ಮೇಳದ ಭಾಗವತರಾದ ಚಿನ್ಮಯ್ ಭಟ್ ಅವರಿಂದ ಯಕ್ಷಗಾನದ ಆಯ್ದ ಹಾಡುಗಳ ಗಾಯನವಿತ್ತು.
ಮದ್ದಲೆಯಲ್ಲಿ ಎಂ.ಎಸ್ಸಿ ವಿದ್ಯಾರ್ಥಿ ಅಭಿರಾಮ ಹೊಸಹಿತ್ಲು, ಚೆಂಡೆಯಲ್ಲಿ ಎಲ್. ಎಲ್.ಬಿ ವಿದ್ಯಾರ್ಥಿ ಅಜೇಯ ಸುಬ್ರಹ್ಮಣ್ಯ. ಎಂ. ಮೂಡುಬಿದಿರೆ ಸಹಕರಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಅಭಿಜ್ಞಾ ಎಸ್. ಎಂ. ಮೂಡುಬಿದಿರೆ ನಾಟ್ಯ ಪ್ರದರ್ಶಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ತರಗತಿಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸಾಧಕರಿಗೆ ಮತ್ತು ವೃತ್ತಿ ನಿವೃತ್ತರಿಗೆ ಗೌರವ ಸಮರ್ಪಣೆ ನಡೆಯಿತು.
ಹವ್ಯಕ ಸಭಾದ ಅಧ್ಯಕ್ಷರಾದ ವಿನೋದ್ ಕುಮಾರ್, ಕಾರ್ಯದರ್ಶಿ ಕೆ. ಶಂಕರ ಭಟ್ ಸೇರಿದಂತೆ ಎಲ್ಲ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ







