ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ತವರೂರಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ

Upayuktha
0

ಸುರೇಶ್ ಕಾಂಚನ್ ರಂತಹ ಸೇವಾ ಮನೋಭಾವನೆಯುಳ್ಳವರು ಮೊಗವೀರ ಸಮಾಜದಲ್ಲಿ ಮತ್ತಷ್ಟು ಬೆಳೆಯಲಿ: ಡಾ ಜಿ ಶಂಕರ್


ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ: ಮುಂಬಯಿಯ ಉದ್ಯಮಿ, ಮೊಗವೀರ ಬ್ಯಾಂಕಿನ ನಿರ್ದೇಶಕ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಮತ್ತು  ಯಶೋದಾ ಎಸ್ ಕಾಂಚನ್ ಇವರ ಪ್ರಾಯೋಜಕತ್ವದಲ್ಲಿ ಉಪ್ಪಿನ ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪರಿಸರದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಮಾಡಲಾಯಿತು. ಉಪ್ಪಿನ ಕುದ್ರು ಯುವಕ ಮಂಡಲದ ಆಶ್ರಯದಲ್ಲಿ ಮೇ 28 ರಂದು ಭಾನುವಾರ ಸಂಜೆ ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮ ನಡೆಯಿತು.

 

ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿ ಮಾತನಾಡುತ್ತಾ, ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ನಮಗೆ ಬಹಳಷ್ಟು ಕಷ್ಟವಾಗಿತ್ತು. ಅಂದಿನ ದಿನಗಳ ಕಷ್ಟಗಳನ್ನು ನೆನಪಿಸಿ, ಸುರೇಶ್ ಕಾಂಚನ್ ರವರು ಈ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪುಸ್ತಕ ವಿತರಣಾ ಗಳೊಂದಿಗೆ ಉಪ್ಪಿನ .ಕುದ್ರು ಜನರಿಗೆ ಉತ್ಸಾಹದ ಸಂಭ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಅವರ ದುಡಿಮೆಯ ಬಹುಪಾಲನ್ನು ಸಮಾಜಕ್ಕೆ ನೀಡುತ್ತಾ ಋಣ ಸಂದಾಯವನ್ನು ಮಾಡುತ್ತಾ ಬಂದಿದ್ದಾರೆ, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಸುರೇಶ್ ಕಾಂಚನರಂತೆ ಮನೋಭಾವನೆಯನ್ನು ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಾಯ ಹಸ್ತವನ್ನು ನೀಡಬೇಕು ಹಾಗಾದಾಗ ಮಾತ್ರ ಈ ಊರು ಜನರು ಅಭಿವೃದ್ಧಿಗೊಳ್ಳುತ್ತಾರೆ ಎಂದು ನುಡಿದರು.


ಬೈಂದೂರಿನ ನೂತನ ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಬಹಳ ವರ್ಷಗಳಿಂದ ಈ ಪರಿಸರದ ಅಭಿವೃದ್ಧಿಯ ಕನಸು ಕಂಡವರು ಸುರೇಶ್ ಕಾಂಚನ್ ರವರು ಈ ಗ್ರಾಮದ ಹಲವಾರು ಸಮಸ್ಯೆಗಳಿಗೆ ಸ್ವಂತ ಹಣವನ್ನು ನೀಡಿದರು. ಅಲ್ಲದೆ  ವಿದ್ಯಾರ್ಥಿಗಳ ಭವಿಷ್ಯರೂಪಿಸುವುದಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ನಾನು ಶಾಸಕನಾಗಿ ನನ್ನಿಂದ ಗ್ರಾಮದ ಅಭಿವೃದ್ಧಿಗೆ ಆಗುವ ಪ್ರಯತ್ನಗಳನ್ನ ಎಲ್ಲವನ್ನು ಮಾಡುತ್ತೇನೆ ಎಂದರು.


ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ಉನ್ನತ ವ್ಯಾಸಂಗ ಮಾಡುವುದಕ್ಕೆ ಸರಕಾರ ವಿಶೇಷವಾದ ಸೌಲಭ್ಯಗಳನ್ನು ಮಾಡುತ್ತಾ ಬಂದಿದೆ. ಮೆರಿಟಿನಿಂದ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಆಗುತ್ತಿದ್ದಾರೆ. ಇದರ ಪರಿಣಾಮವಾಗಿ ಬಡವರ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ, ವಿದ್ಯಾರ್ಥಿಗಳು ತಾವು ಹೇಗೆ ಬೆಳೆ ಬೇಕು ಎನ್ನುವುದು ಅವರು ನಿರ್ಧಾರ ಮಾಡುವ ಬೇಕು, ಸರಕಾರ ಯಾವುದೇ ಬಂದರೂ ಕೂಡ ನಮ್ಮೂರಿನ ಜಿ ಶಂಕರ್ ಅವರ ಮಾತುಗಳನ್ನು ಕೇಳುತ್ತಾರೆ ಅಷ್ಟು ಪ್ರಭಾವಿತರಾಗಿದ್ದಾರೆ ಆದ್ದರಿಂದ ಅವರಿಂದ ಮತ್ತು ಅವರ ಸರಕಾರದಿಂದ ಸಮಾಜ ಅಭಿವೃದ್ಧಿಗೊಂಡಿದೆ ಅದೇ ಹಾದಿಯಲ್ಲಿ ನಮ್ಮೂರಿನ ಉದ್ಯಮಿ ಸುರೇಶ್ ಕಾಂಚನ್ ಅವರು ಮುಂಬೈಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ಗ್ರಾಮದ ಅಭಿವೃದ್ಧಿಗೆ ಉಪಯೋಗಿಸುತ್ತಿದ್ದಾರೆ ಅವರು ಕನಸುಗಳು, ಸಹಕಾರ ಆಗುವುದಕ್ಕೆ ನಾವೆಲ್ಲರೂ ಸದಾ ಬೆಂಬಲಿಗರಾಗೋಣ ಎಂದು ನುಡಿದರು.


ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡುತ್ತಾ ಜಿ ಶಂಕರ್ ಮತ್ತು ಸುರೇಶ್ ಕಾಂಚನ್ ಅವರ ಮೂಲಕ ಈ ಊರಿನ ಅಭಿವೃದ್ಧಿ ಇನ್ನಷ್ಟಾಗಲಿ ಇಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ದೇಶಕ್ಕೆ ಆದರ್ಶವನ್ನು ಪ್ರಜೆಗಳಾಗಲಿ ಎಂದು ನುಡಿದರು.

ಪತ್ರಕರ್ತ ಕೆ. ಸಿ. ರಾಜೇಶ್ ಮಾತನಾಡುತ್ತಾ ಜಿ ಶಂಕರ್ ಮತ್ತು ಸುರೇಶ್ ಕಾಂಚನ್ ರವರ ಶಾಲಾ ದಿನಗಳಲ್ಲಿ ಪುಸ್ತಕ ಪಡೆಯುವುದಕ್ಕೆ ಶಾಲೆಗೆ ಹೋಗುವುದಕ್ಕೆ ತುಂಬಾ ಕಷ್ಟವಾಗು ತ್ತಿತ್ತು ಎನ್ನುವುದನ್ನು ಅರಿತು ಅವರ ಉದ್ಯಮದ ಆದಾಯದ ಪಾಲನ್ನು ಸಮಾಜಕ್ಕೆ ನೀಡುತ್ತಾ ನಮ್ಮ ವಿದ್ಯಾರ್ಥಿ ಜೀವನದ ಕಷ್ಟ ಈ ಗ್ರಾಮದ ವಿದ್ಯಾರ್ಥಿಗಳಿಗೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಲಕ್ಷಾಂತರ ರೂಪಾಯಿಯನ್ನು ಸುರೇಶ್ ಕಾಂಚನ್ ರವರು ನೀಡುತ್ತಿದ್ದಾರೆ ಸಮಾಜ ಅಭಿವೃದ್ಧಿಯಾಗಬೇಕು ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕೆನ್ನುವರು ಅವರ ಕನಸಿಗೆ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಶಾಲೆಗೆ ಮನೆಗೆ ಕೀರ್ತಿ ತರಬೇಕು ಎಂದರು.

ಪ್ರಸಿದ್ಧ ನ್ಯಾಯವಾದಿ, ಟಿ.ಬಿ. ಶೆಟ್ಟಿ, ಮಾತನಾಡುತ್ತಾ ಸರಕಾರದ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳಿಗೆ ಕೆಲವೊಂದು ತೊಂದರೆಗಳು ಆಗುತ್ತಿದೆ ಇದನ್ನು ಸರಕಾರಕ ಗಮನಹರಿಸಬೇಕು, ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ನೀಡುತ್ತಾ ಪ್ರಚಾರವನ್ನು ಪಡೆಯುತ್ತಿರುವ ಜನರು ಈ ಸಮಾಜದಲ್ಲಿ ಬಹಳಷ್ಟು ಇದ್ದಾರೆ ಆದರೆ ಕಷ್ಟಪಟ್ಟು ದುಡಿದ ಸಂಪಾದಿಸಿದ ಹಣದಿಂದ ಊರ ಅಭಿವೃದ್ಧಿಗೆ ವಿನಯೋಗಿಸುತ್ತಿರುವ ಸುರೇಶ್ ಕಾಂಚನ್ ರಂತ ಜನ ಈ ಸಮಾಜದಲ್ಲಿ ವಿರಳ ಎಂದು ನುಡಿದರು.


ವೇದಿಕೆಯಲ್ಲಿ ಯಶೋದ ಸುರೇಶ್ ಕಾಂಚನ್, ಮೊಗವೀರ ಯುವಕ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಯುವಕ ಮಂಡಲದ ಗೌರವಾಧ್ಯಕ್ಷ ಸದಾನಂದ ಶೇರುಗಾರ್, ರಾಜೇಶ್ ಕಾರಂತ್, ಗಿರೀಶ್ ಎಸ್ ನಾಯ್ಕ್, ಮಂಜುನಾಥ ಎಂ., ಜಿ, ಮಾಲತಿ, ರತ್ನಾಕರ ಶೆಟ್ಟಿ, ಯುವಕ ಮಂಡಲ ಉಪ್ಪಿನ ಕುದ್ರು ಇದರ ಅಧ್ಯಕ್ಷರಾದ ಗಿರೀಶ್ ಮೊಗವೀರ, ಉಪಾಧ್ಯಕ್ಷ ಮಂಜುನಾಥ ಶಿವಾಜಿಬೆಟ್ಟು, ಕಾರ್ಯದರ್ಶಿ ಆದರ್ಶ ಶೇರುಗಾರ್, ಪ್ರಧಾನ ಸಂಚಾಲಕರಾದ ಚಂದ್ರ ಕುಂದರ್ ಮತ್ತು ಗೋಪಾಲ ಉಪಸ್ಥರಿದ್ದರು.


ಈ ಸಂದರ್ಭದಲ್ಲಿ ಗ್ರಾಮದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳದ ಮೈಮ ಮತ್ತು ಚೇತನ್ ಪ್ರತಿಭಾ ಪುರಸ್ಕಾರ, ಸಮಾಜ ಸೇವಕ ಮಂಜುನಾಥ್ ಶಿವಾಜಿ  ಭೇಟಿ ಅವರನ್ನು ಸನ್ಮಾನಿಸಲಾಯಿತು.


ಸಂಜೆ ಮನೋರಂಜನಾ ಕಾರ್ಯಕ್ರಮ ಅಂಗವಾಗಿ ರಘು ಪಾಂಡೇಶ್ವರ ಸಾರಥ್ಯದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಳ್ಳಲಿದೆ, ಸುರೇಶ್ ಕಾಂಚನ್ ಅವರು ಕಳೆದ 17 ವರ್ಷಗಳಿಂದ ತನ್ನ ಹುಟ್ಟೂರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪುಸ್ತಕ ವಿತರಣೆಗಳಿಗೆ ಲಕ್ಷಾಂತರ ರೂಪಾಯಿ ಯನ್ನು ನೀಡುತ್ತಾ ಬಂದಿದ್ದಾರೆ, ತವರೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆಯ ಶುಭ ಸಮಾರಂಭಗಳಿಗೆ ಆರ್ಥಿಕ ನರವನ್ನು ನೀಡುತ್ತಾ ಬಂದಿದ್ದಾರೆ, ಮುಂಬೈ ನಗರದಲ್ಲೂ ಕೂಡ ವಿವಿಧ ಸಂಘ ಸಂಸ್ಥೆಗಳಿಗೆ ಸಾಮಾಜಿಕ ಸೇವಾಕಾರಿಗಳಿಗೆ ಧಾರ್ಮಿಕ ಕಾರ್ಯಗಳಿಗೆ ದಾನ ರೂಪದನೆಗೆಯನ್ನು ನೀಡುತ್ತಾ, ಉದ್ಯಮದ ಬಹುಪಾಲುಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷರಾಗಿ ಮೊಗವೀರ ಸಮಾಜದ ಅಭಿವೃದ್ಧಿಗೆ ಮತ್ತು ಮಾಜ ಬಂಧುಗಳಿಗೆ ಸದಾ ನೆರವನ್ನು ನೀಡುತ್ತಾ ಬಂದಿದ್ದಾರೆ.


-----------

ವಿದ್ಯಾರ್ಥಿ ಜೀವನದಲ್ಲಿ ಪಡೆದ ಕಷ್ಟ ಗ್ರಾಮಸ್ಥರು ಮಕ್ಕಳು ಪಡೆಬಾರದು ಉದ್ದೇಶ ನನ್ನದಾಗಿದೆ: ಸುರೇಶ್ ಕಾಂಚನ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರೇಶ್ ಕಾಂಚನ್ ರವರು ಮಾತನಾಡುತ್ತಾ ಜಿ ಶಂಕರ್ ರಂತಹ ಸಾಮಾಜಿಕ ಕಳಕಳಿ ಉಳ್ಳವರು ಈಗ ಗ್ರಾಮಕ್ಕೆ ಬಂದಾಗ ನಮಗೆಲ್ಲರಿಗೂ ಸಂತೋಷ ಸಂಭ್ರಮವಾಗದೆ, ನಮ್ಮ ಗ್ರಾಮದ ಶಾಲೆಗೆ ಪ್ರತಿ ವರ್ಷ ನೂರರಷ್ಟು ಫಲಿತಾಂಶ ಬರಬೇಕು ಅದನ್ನು ಶಾಲಾ ಅಧ್ಯಾಪಕವರಿಂದ ನೋಡಿಕೊಳ್ಳಬೇಕು, ಕಡಿಮೆ ಅಂಕವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾ ನೀಡುವ ಕೆಲಸ ಆಗಬೇಕು, ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಾಗ ಗ್ರಾಮಕ್ಕೆ ಮತ್ತು ನಮಗೂ ಬಹಳ ಅಭಿಮಾನವಾಗುತ್ತೆ, ತಲ್ಲೂರಿನಿಂದ  ಉಪ್ಪಿನ ಕುದ್ರು ವರೆಗೆ ರಸ್ತೆ ವಿಸ್ತರಣೆ ಆಗುವಲ್ಲಿ ನಮ್ಮ ಶಾಸಕರು ಪ್ರಯತ್ನ ಮಾಡಬೇಕು, ಅದಕ್ಕೆ ಬೇಕಾಗಿದ್ದರೆ ನಾನು ಮತ್ತು ಜಿ ಶಂಕರ್ ಅವರು ಸಹಕಾರ ನೀಡಲು ಸಿದ್ದರಿದ್ದೇವೆ, ಗ್ರಾಮದ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರು ಕೊರತೆ ಇದೆ ಅದನ್ನು ಸರಕಾರ ನಿಭಾಯಿಸಬೇಕು ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ವೇತನವನ್ನು ಸ್ವಂತ ನಾನು ನೀಡುತ್ತಾ ಬಂದಿದ್ದೇನೆ, ಸರಕಾರ ಅಧ್ಯಾಪಕರನ್ನು ನೇಮಕ ಮಾಡುವಂತೆ ಆಗಬೇಕು, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕೆನ್ನುವ ಕಲ್ಪನೆ ನನ್ನದು ,ನಮ್ಮ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ತೊಂದರೆಗಳನ್ನು ಅನುಭವಿಸಿದ್ದೇನೆ. ಅದನ್ನು ಇಂದಿನ ವಿದ್ಯಾರ್ಥಿಗಳಿಗೆ ಆಗಬಾರದು ಎನ್ನುವ ಸಂಕಲ್ಪ ನನ್ನದು ಎಂದು ನುಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top