ಮಂಗಳೂರು: ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಬಹುನಿರೀಕ್ಷಿತ ತನ್ನ `ಬಿಗ್ ಎಂಡ್ ಆಫ್ ಸೀಸನ್ ಸೇಲ್' ಕಾರ್ಯಕ್ರಮವನ್ನು ಘೋಷಣೆ ಮಾಡಿದೆ.
ಇದರಲ್ಲಿ ದೇಶದ ಎಲ್ಲೆಡೆಯ 2,00,000 ಕ್ಕೂ ಅಧಿಕ ಮಾರಾಟಗಾರರು ಫ್ಯಾಶನ್, ಬ್ಯೂಟಿ, ಲೈಫ್ ಸ್ಟೈಲ್ ಸೇರಿದಂತೆ 10,000 ಕ್ಕೂ ಅಧಿಕ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. 2023 ರ ಜೂನ್ 1ರಂದು ಈ ಬಹುದೊಡ್ಡ ಮಾರಾಟ ಮೇಳಕ್ಕೆ ಚಾಲನೆ ದೊರಕಿದೆ.
ಇಮೇಜ್ ಸರ್ಚ್, ವಿಡಿಯೋ ಕೆಟಲಾಗ್, ವರ್ಚುವಲ್ ಟ್ರೈ-ಆನ್ಸ್, ವಿಡಿಯೋ ಕಾಮರ್ಸ್ ಮತ್ತು ಟಾಪ್ ಫಿಲ್ಟರ್ ಗಳು ಸೇರಿದಂತೆ ಇನ್ನಿತರ ತಂತ್ರಜ್ಞಾನಗಳನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ಒಂದು ವಾರ ಪೂರ್ತಿ ನಡೆಯಲಿರುವ ಈ ಮೇಳವು ಗ್ರಾಹಕರಿಗೆ ವೈಶಿಷ್ಟ್ಯಪೂರ್ಣವಾದ ಶಾಪಿಂಗ್ ಅನುಭವವನ್ನು ನೀಡಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಫ್ಲಿಪ್ ಕಾರ್ಟ್ ತನ್ನ ಡಿಜಿಟಲ್ ಫಸ್ಟ್ ಬ್ರ್ಯಾಂಡ್ ಗಳನ್ನು ಪರಿಚಯಿಸುತ್ತಿದೆ ಎಂದು ಫ್ಲಿಪ್ ಕಾರ್ಟ್ ಫ್ಯಾಶನ್ ನ ಹಿರಿಯ ನಿರ್ದೇಶಕ ಅಭಿಷೇಕ್ ಮಲೂ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಫ್ಲಿಪ್ ಕಾರ್ಟ್ ಸ್ಪ್ರಿಂಗ್ ಸಮ್ಮರ್ ಸೀಸನ್‍ನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಆರ್ಡರ್ ಗಳನ್ನು ಮಾಡುತ್ತಿದೆ. ಇದು ಫ್ಯಾಶನ್ ವಿಭಾಗದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಫ್ಯಾಶನ್ ಇಂದು ಫ್ಲಿಪ್ ಕಾರ್ಟ್ ನಲ್ಲಿ ಅತ್ಯಂತ ವೇಗವಾಗಿ ಮತ್ತು ಬೇಡಿಕೆ ಇರುವ ವಿಭಾಗವಾಗಿ ಮುಂದುವರಿದಿದೆ. ಈ ವಿಭಾಗದ ಮೂಲಕ ಶೇ.40 ಕ್ಕಿಂತಲೂ ಅಧಿಕ ಹೊಸ ಗ್ರಾಹಕರು ಸೇರ್ಪಡೆಯಾಗು ತ್ತಿದ್ದಾರೆ. ವ್ಯಾಪಕ ಶ್ರೇಣಿಯ ಫ್ಯಾಶನ್ ಮತ್ತು ಜೀವನ ಶೈಲಿ ಅಂದರೆ ಲೈಫ್ ಸ್ಟೈಲ್ ಉತ್ಪನ್ನಗಳನ್ನು ಪಡೆಯಲು ಲಕ್ಷಾಂತರ ಗ್ರಾಹಕರು ಈ `ಬಿಗ್ ಎಂಡ್ ಆಫ್ ಸೀಸನ್ ಸೇಲ್'ಗಾಗಿ ಕಾಯುತ್ತಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ