ಮುಂಬಯಿ: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜುಲೈ 2ರಂದು ಭಾನುವಾರ ಅಪರಾಹ್ನ 3:30ರಿಂದ 'ಮದುವೆ, ಪರಿವಾರ ಹಾಗೂ ಸಂಸ್ಕಾರ' ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ.
ಘಾಟ್‌ಕೋಪರ್‍ನ ನ್ಯೂಪಂತ್ ನಗರ, ವಲ್ಲಭ್ ಬಾಗ್ ಕ್ರಾಸ್ ಲೇನ್‌ನ ಸುನಿಲ್ ಹೋಟೆಲ್ ಬಳಿಯಿರುವ ಕನ್ನಡ ವೆಲ್‌ಫೇರ್ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಭಂಡಾರಿ ಕಡಂದಲೆ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಘಟಕರಾದ ಚಂದ್ರಶೇಖರ ಶೆಟ್ಟಿ, ಲೇಖಕಿ ಶ್ರೀಮತಿ ಶರೋನ ಶೆಟ್ಟಿ ಐಕಳ, ಮಾಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ, ಲೇಖಕಿಯರಾದ ಶಾರದಾ ಅಂಚನ್ ಮತ್ತು ಶಾಂತಾ ಶಾಸ್ತ್ರಿ ಅವರು ವಿಚಾರ ಮಂಡನೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ವೆಲ್‌ಫೇರ್ ಸೊಸೈಟಿಯ ಮಹಿಳಾ ವಿಭಾಗದ ವತಿಯಿಂದ ಗೀತಗಾಯನ ಆಯೋಜಿಸಲಾಗಿದೆ. ಶ್ರೀಮತಿ ಉಮಾ ಭಟ್ ಮತ್ತು ಸಂಗಡಿಗರು ಹಾಗೂ ಶ್ರೀಮತಿ ಮಾಲತಿ ಪುತ್ರನ್ ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಗುರು ಪೂರ್ಣಿಮೆ ನಿಮಿತ್ತ ಶ್ರೀಮತಿ ಶೈಲಜಾ ಹೆಗಡೆ ಉಪನ್ಯಾಸ ನೀಡಲಿದ್ದಾರೆ. ಸುರೇಶ್ ಶೆಟ್ಟಿ ಕಣಂಜಾರು ನಿರೂಪಣೆ ಮಾಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ