ಮಂಗಳೂರು: ನೂರು ವರ್ಷ ಇತಿಹಾಸ ಇರುವ ಮಂಗಳೂರಿನ ಹೃದಯ ಭಾಗದಲ್ಲಿರುವ ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಅವರು ಕಲಿತ ಶಾಲೆಯನ್ನು ಮರೆಯದೆ ನಿರಂತರ ವಿದ್ಯಾರ್ಥಿಗಳಿಗೆ ಪುಸ್ತಕ ಯುನಿಫಾರ್ಮ್ ನೀಡುವ ಕಾರ್ಯ ಸುತ್ಯರ್ಹ ಎಂದು ಡಿ ವೇದವ್ಯಾಸ ಕಾಮತ್ ಹೇಳಿದರು.
ಅವರು ನಗರದ ಬಲ್ಮಠ ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವನೆಗೈದರು. ಮಫತ್ ಲಾಲ್ ರೆಡಿ ಮೆಡ್ ಸಂಸ್ಥೆಯ ಬಾಬ್ಬಿ, ವಿದ್ಯಾ ರಘು ಶೆಟ್ಟಿ, ನಿರ್ಮಲಾ ಎಸ್, ಶೆಟ್ಟಿ, ಕನಕ, ವಸಂತಿ ಜೆ. ಪೂಜಾರಿ, ನಾಗರಾಜ್ ರಾವ್, ದೇವದತ್ತ, ಸೂರ್ಯಕಾಂತ್ ಶೇಟ್, ವೆಂಕಟೇಶ್ ಎಂ, ವಿವೇಕ್ ಶೇಟ್, ಲತಾ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವನೆಗೈದರು. ಹೆಡ್ ಮಿಸ್ ಶಶಿಕಲಾ ಸ್ವಾಗತಿಸಿದರು. ಲತಾ ವಂದಿಸಿದರು. ಶಾಲೆಯ ಮುಖ್ಯ ಉಪಾಧ್ಯಾಯಿನಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.
ವರದಿ: ಸುಜೀರ್ ವಿನೋದ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ