ಮಂಗಳೂರು ವಿವಿ ಕಾಲೇಜು: ಸೋಮವಾರ 'ಅಟಿಲ್- 2K23' ಆಹಾರ ಮೇಳ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿ.ಎ ಮತ್ತು ಬಿಬಿಎ, ಪ್ರವಾಸೋದ್ಯಮ ವಿಭಾಗ, ಆಂತರಿಕ ಗುಣಮಟ್ಟ ಮೌಲ್ಯಮಾಪನಾ ಕೋಶದ (ಐಕ್ಯೂಎಸಿ)ದ ಸಹಯೋಗದೊಂದಿಗೆ ಕಾಲೇಜಿನ ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಬ್ಲಾಕ್‌ನ ಮೊದಲ ಮಹಡಿಯಲ್ಲಿ 'ಅಟಿಲ್- 2K23' ಆಹಾರಮೇಳವನ್ನು ಜೂನ್ 5ರಂದು (ಸೋಮವಾರ)  ಆಯೋಜಿಸಿದೆ. 


ಖಂಡಿಗೆ ಬೀಡಿನ ಶ್ರೀಧರ್ಮ ಅರಸು ಉಲ್ಲಾಯ ಕ್ಷೇತ್ರದ ಗಡಿ ಪ್ರಧಾನರಾದ ಶ್ರೀ ಆದಿತ್ಯ ಮುಕ್ಕಾಲ್ದಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ಶೇಖರ್ ನಾಯ್ಕ್ ಮುಖ್ಯ ಅತಿಥಿಯಾಗಿರಲಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎ (ಪ್ರವಾಸೋದ್ಯಮ) ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ. ಎಂ ಮತ್ತು ಬಿಬಿಎ ಮುಖ್ಯಸ್ಥ ಡಾ. ಯತೀಶ್ ಕುಮಾರ್ ಮೊದಲಾದವರು ಉಪಸ್ಥಿತರಿರಲಿದ್ದಾರೆ. 


ಗೋಳಿಬಜೆ, ಪತ್ರೋಡೆ, ಹಲಸಿನ ಗಟ್ಟಿಯಂತಹ ಕರಾವಳಿಯ ಹೆಸರಾಂತ ಸಸ್ಯಾಹಾರ ಖಾದ್ಯಗಳೊಂದಿಗೆ ಕೋರಿರೊಟ್ಟಿ, ಸೇಮೆದಡ್ಯೆ ಚಿಕನ್ ಕರಿ, ಮರ್ವಾಯಿ ಸುಕ್ಕದಂತಹ ಮಾಂಸಹಾರಿ ಖಾದ್ಯಗಳು, ವಿಶೇಷ ಊಟ (ಪ್ರಿ-ಆರ್ಡರ್), ಚಾಟ್‌ಗಳು, ಬೇಕರಿ ಐಟಂಗಳು, ಮಾವು, ಹಲಸು ಮೊದಲಾದ ಹಣ್ಣುಗಳು, ಸಿಹಿಖಾದ್ಯಗಳು, ಜ್ಯೂಸ್‌ಗಳು, ವಿವಿಧ ಡೆಸರ್ಟ್ ಗಳು ಹೀಗೆ ಆಹಾರ ವೈವಿಧ್ಯ ಲಭ್ಯವಿದೆ, ಎಂದು ವಿಭಾಗದ ಪ್ರಕಟಣೆ ತಿಳಿಸಿದೆ. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top