"ನೃತ್ಯ ನೀರಾಜನ" ಕಾರ್ಯಕ್ರಮ - ಮುದನೀಡಿದ ನೃತ್ಯ ದಿಶಾ ಟ್ರಸ್ಟ್ ಪ್ರದರ್ಶನ

Upayuktha
0

ಬೆಂಗಳೂರು: ಜೂನ್ 2ರಂದು ಕಿರಿಯರ ನೃತ್ಯೋತ್ಸವ "ನೃತ್ಯ ನೀರಾಜನ" ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 'ಕಲಾಭೂಷಿಣಿ' ಗುರು. ಶ್ರೀಮತಿ ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು|| ಚಂದನ ಎಸ್. ಎಸ್., ಕು||ಚಾರಿತ್ಯ ರೆಡ್ಡಿ ಪಿ. ಕು|| ದಿಶಾ, ಕು|| ಪದ್ಮಪ್ರಿಯಾ ಎನ್. ಭರತನಾಟ್ಯ ಕಾರ್ಯಕ್ರಮ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಾಯಿ ವೆಂಕಟೇಶ್ ಹಾಗೂ ಶ್ರೀ ಡಾ|| ಎಸ್ ನಂಜುಂಡರಾವ್ ರವರು ವಹಿಸಿದ್ದರು.


ನೃತ್ಯ ನೀರಾಜನ  ವಿದುಷಿ ಭಾರತಿ ವೇಣು ಗೋಪಾಲ್ ಹಾಗೂ ವಿದ್ವಾನ್ ಜಿ. ಗುರುಮೂರ್ತಿ ರವರ ವಿರಚಿತ ಆದಿತಾಳದ ಶ್ರೀರಂಜಿನಿ ರಾಗದ  ಪುಷ್ಪಾಂಜಲಿಯೊಂದಿಗೆ ಪ್ರಾರಂಭವಾಗಿ ಮುಂದುವರೆಸುತ್ತಾ, ಶ್ರೀ ಪಾಪನಾಶo ಶಿವಂ ವಿರಚಿತ ಕೃತಿ ಗಜವದನ ಕರುಣಾ ಸಾಧನ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ರವರ ಸಂಯೋಜನೆಯಲ್ಲಿ ಮೂಡಿ ಬಂತು. ತದನಂತರ ಭರತನಾಟ್ಯ ಮಾರ್ಗದ ತಿಶ್ರ ಹಾಗೂ ಚತುರಶ್ರ ಅಲರಿಪು, ತಂಜಾವೂರು ಸಹೋದರರು ರಚಿಸಿರುವ ರೂಪಕ ತಾಳದ ಜತಿಸ್ವರ ಮೂಡಿಬಂತು. ಮುಂದುವರೆಸುತ್ತ ಕು|| ಚಂದನ ನಾರಾಯಣ ನಿನ್ನ ನಾಮದ ಸ್ಮರಣೆಯ ದೇವರ ನಾಮದಲ್ಲಿ ಪ್ರಹ್ಲಾದ- ಹಿರಣ್ಯಕಶಿಪುವಿನ ಕಥಾ ಪ್ರಸಂಗ ಅಮೋಘವಾಗಿ ಅಭಿನಯಿಸಿದರು. 


ಕು|| ಚಾರಿತ್ಯ ರೇವತಿ ರಾಗದ ದೇವಿ ಕೃತಿಯಲ್ಲಿ ಮಹಿಷಾಸುರ ಮರ್ಧಿನಿ ಅಭಿನಯ ಅಮೋಘವಾಗಿತ್ತು. ಕು| ದಿಶಾ ಶ್ರೀವಲ್ಲಿ ದೇವಸೇನಪತೆ ಕೃತಿಯಲ್ಲಿ ವಲ್ಲಿ ಹಾಗೂ ಸುಬ್ರಹ್ಮಣ್ಯ ಮದುವೆಯ ಸನ್ನಿವೇಶವನ್ನು ಸುಂದರವಾಗಿ ಅಭಿನಯಿಸಿದಳು. ಕು|| ಪದ್ಮಪ್ರಿಯಾ ದೇವರನಾಮ ಚಂದ್ರಚೂಡ ಶಿವ ಶಂಕರ ದಲ್ಲಿ ಅಮೃತಮಂಥನ, ಮಾರ್ಕಂಡೇಯ ಕಥೆ, ಶಿವ ನಂಜುಂಡೇಶ್ವರ ನದ ಪ್ರಸಂಗ, ಮನ್ಮಥ ದಹನ ಅದ್ಬುತವಾಗಿ ಅಭಿನಹಿಸಿ ನೃತ್ತ ಹಾಗೂ ಅಭಿನಯ  ಪ್ರದರ್ಶನದಲ್ಲಿ ಯಶಸ್ವಿ ಆದಳು.


ಕಾರ್ಯಕ್ರಮ ಮೆಲ್ಲಮೆಲ್ಲನೆ ಬಂದನೆ ದೇವರನಾಮ ಹಾಗೂ ಬೃಂದಾವನಿ ರಾಗದ ತಿಲ್ಲಾನದೊಂದಿಗೆ ಸಂಪೂರ್ಣಗೊಂಡಿತು. ಈ ಎಲ್ಲ ನೃತ್ಯಗಳ ಸಂಯೋಜನೆಗೆ ನೆರದಂತಹ  ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.

ನೃತ್ಯ ದಿಶಾ ಸಂಸ್ಥೆಯ ನೃತ್ಯ ನೀರಾಜನ ಯಶಸ್ವಿಯಾಗಿ ಮೂಡಿಬಂತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top