ಮಂಗಳೂರು ವಿವಿ ಕಾಲೇಜಿನಲ್ಲಿ ತಾರಸಿ ತರಕಾರಿ ಉದ್ಯಾನ ಕಾರ್ಯಾಗಾರ
ಮಂಗಳೂರು: ನಮ್ಮ ಆಹಾರಪದ್ದತಿ ನಾವು ಒಂದಲ್ಲಾ ಒಂದು ಖಾಯಿಲೆಯಿಂದ ಬಳಲುವಂತೆ ಮಾಡಿದೆ. ರಾಸಾಯನಿಕ ಮುಕ್ತ ಆಹಾರವನ್ನು ನಾವು ಸೇವಿಸಬೇಕಾದರೆ ನಮ್ಮ ಊಟದ ಬಟ್ಟಲಿಗೆ ನಮ್ಮಮನೆಯಲ್ಲೇ ಬೆಳೆದ ತರಕಾರಿಯ ಅಗತ್ಯವಿದೆ, ಎಂದು ಮಂಗಳೂರಿನ ಕೆನರಾ ಬ್ಯಾಂಕಿನ ನಿವೃತ್ತಅಧಿಕಾರಿ ಪ್ರದೀಪ್ ಸೂರಿ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮಕಾರಂತ ಸಭಾಭವನದಲ್ಲಿ ಮಂಗಳವಾರ ಕಾಲೇಜಿನ ನಿಸರ್ಗ, ವಿಜ್ಞಾನ ಮತ್ತು ಆವಿಷ್ಕಾರ ಸಂಘದ ವತಿಯಿಂದ ನಡೆದ "ತಾರಸಿಯಲ್ಲಿ ತರಕಾರಿ ಉದ್ಯಾನ" ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾರಸಿಯಲ್ಲಿ ಬೆಳೆಯಬಹುದಾದ ವಿವಿಧ ತರಕಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ತಾರಸಿಯಲ್ಲಿ ಸಾವಯವ ಕೃಷಿ ಬೆಳೆಯುವಿಕೆ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಾಯೋಗಿಕ ತರಬೇತಿ ನೀಡಿದರು.
ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಪ್ರಾಂಶುಪಾಲೆ ಡಾ.ಅನಸೂಯ ರೈ,ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ ಇರುವ ಜಾಗವನ್ನು ತರಕಾರಿ ಬೆಳೆಯಲು ಉಪಯೋಗಿಸಿಕೊಳ್ಳಬೇಕು. ತಾರಸಿ ಕೃಷಿ ವಿದ್ಯಾರ್ಥಿ ಜೀವನದಲ್ಲಿ ಹವ್ಯಾಸವಾಗಿ ಬೆಳೆಯಬೇಕು, ಎಂದರು.
ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಉಷಾಕೆ.ಎಂ , ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಇಂದಿರಾ.ಜೆ, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಕೆ ಎ ನಾಗರತ್ನ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅರುಣಾಕುಮಾರಿ, ಸ್ನಾತಕೋತ್ತರ ರಾಸಾಯನಶಾಸ್ತ್ರ ವಿಭಾಗದ ಡಾ. ಲಕ್ಷ್ಮಣ್ ಕೆ, ವಾಣಿಜ್ಯ ವಿಭಾಗದ ಉಪನ್ಯಾಸಕಿ ವಂದನಾ, ಐಕ್ಯೂಎಸಿ ಸಂಯೋಜಕ ಡಾ.ಸಿದ್ದರಾಜು ಎಂ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಎನ್.ಎಸ್.ಐ. ನ ಸಂಯೋಜಕ ಡಾ.ಸಂಜಯ್ ಅಣ್ಣಾರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ವಿದ್ಯಾರ್ಥಿ ತಸ್ಮೈ ವಂದಿಸಿದರು. ವಿದ್ಯಾರ್ಥಿನಿ ಸುಮಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ