ಮುಳಿಯಾರು: ಕೋಟೂರು ಕಾರ್ತಿಕೇಯ ಕಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಆಚರಣೆಯ ಕಾರ್ಯಕಾರೀ ಸಮಿತಿ ಸಭೆಯು ಶಾಲೆಯಲ್ಲಿ ಜರಗಿತು.
ಪಿ ಬಾಲಕೃಷ್ಣನ್ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಕುಮಾರಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು.
ಪಂಚಾಯತ್ ವಾರ್ಡ್ ಮೆಂಬರ್ ಶ್ಯಾಮಲಾ, ಮಾಧವನ್ ಸಿ, ಪಿ ಕುಂಜಿಕಣ್ಣನ್, ಕೇಳು ಮಾಸ್ಟರ್ ಇವರು ಭಾಷಣ ಮಾಡಿದರು. ಗೋಪಾಲನ್ ಕೆ, ಗೋವಿಂದ ಬಳ್ಳಮೂಲೆ, ಅಚ್ಚುತನ್, ಟಿ ಬಾಲಕೃಷ್ಣನ್ ಇವರು ಸಾಂದರ್ಭಿಕ ಮಾತುಗಳನ್ನಾಡಿದರು.
2023 ಆಗಸ್ಟ್ 20 ರಿಂದ ಡಿಸೆಂಬರ್ 31ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ವಜ್ರಮಹೋತ್ಸವವನ್ನು ಆಚರಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿವಿಧ ವಿಭಾಗ ಸಮಿತಿಗಳ ಕಾರ್ಯಗಳನ್ನು ನಡೆಸುವುದು, ಸ್ಮರಣ ಸಂಚಿಕೆ ತಾಯಾರಿ, ವಿವಿಧ ಆಟೋಟ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ವಿಚಾರಗೋಷ್ಠಿ, ಹಳೆವಿದ್ಯಾರ್ಥಿ ಸಂಗಮ, ರಂಗಮಂದಿರ ನಿರ್ಮಾಣ ಮೊದಲಾದ ವಿಷಯಗಳ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಶಿವಶಂಕರನ್ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ