ವಿದ್ಯುತ್ ದರ ಏರಿಕೆಗೆ ಕೆಪಿಎಫ್‌ಬಿಎ ವಿರೋಧ

Upayuktha
0

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯುನಿಟ್‌ಗೆ 2.89 ರೂ.ಗೆ ಏರಿಕೆಯಾಗಿರುವುದ್ದರಿಂದ ಅನೇಕ ಕೋಳಿ ಸಾಕಣೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ನಡೆಸಲು ಸಾಧ್ಯವಿಲ್ಲವೆಂದು ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್‌ ಮತ್ತು ಬ್ರೀಡರ್ಸ್‌ ಅಸೋಸಿಯೇಶನ್ (ಕೆಪಿಎಫ್‌ಬಿಎ) ವಿದ್ಯುತ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದೆ.


ಕೆಪಿಎಫ್‌ಬಿಎ ಅಧ್ಯಕ್ಷ ಡಾ. ಸುಶಾಂತ್ ಬಿ.ರೈ ಮಾತನಾಡಿ, ವಿದ್ಯುತ್ ದರದ ಹೆಚ್ಚಳವು ಈಗಾಗಲೇ ಅತ್ಯಂತ ಕಡಿಮೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಳಿ ಫಾರಂಗಳಿಗೆ ಹೆಚ್ಚುವರಿ ಹೊರೆಯಾಗಲಿದ್ದು, ಕೋಳಿ ಘಟಕಗಳು ಮತ್ತು ಫೀಡ್ ತಯಾರಿಕೆಯ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಗ್ರಾಹಕರಿಗೂ ಖರೀದಿಯಲ್ಲಿಯೂ ದರ ಏರಿಕೆಯಾಗುವುದರಿಂದ ಸಮಸ್ಯೆಯಾಗುತ್ತದೆ. ಇದರೊಂದಿಗೆ ಅನೇಕ ಘಟಕಗಳು ತಮಿಳುನಾಡಿನ ಹೊಸೂರಿಗೆ ಮತ್ತು ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಇತರ ಗಡಿ ಪ್ರದೇಶಗಳಿಗೆ ವಲಸೆ ಹೋಗುತ್ತವೆ ಇದರಿಂದ ರಾಜ್ಯದ ಆದಾಯ ಜತೆಗೆ ಉದ್ಯೋಗ ಸೃಷ್ಟಿಯಲ್ಲೂ ನಷ್ಟವಾಗುತ್ತದೆ. ಕೋಳಿ ಮತ್ತು ಮೇವು ತಯಾರಿಕಾ ವಲಯದ ಹಿತಾಸಕ್ತಿಯಿಂದ ಮಾತ್ರವಲ್ಲದೆ ಹೂಡಿಕೆಯ ತಾಣವಾಗಿರುವ ಹಿನ್ನೆಲೆ ರಾಜ್ಯದ ಹೆಚ್ಚಿನ ಹಿತಾಸಕ್ತಿಯಲ್ಲಿ ವಿದ್ಯುತ್ ದರದ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೆಪಿಎಫ್‌ಬಿಎ ಸರ್ಕಾರವನ್ನು ಒತ್ತಾಯಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top