ರಾಜ್ಯದ 250 ಕಡೆ ಈಗ ಜಿಯೋ ಟ್ರೂ 5ಜಿ ಲಭ್ಯ

Upayuktha
0

ಮಂಗಳೂರು: ರಿಲಯನ್ಸ್ ಜಿಯೋ ಟ್ರೂ 5ಜಿ ಈಗ ಕರ್ನಾಟಕದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 250ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಅಲ್ಲದೆ, ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳು ಸಹ ಈಗ ಜಿಯೋ ಟ್ರೂ 5ಜಿ ಪ್ರಯೋಜನಗಳನ್ನು ಪಡೆಯುತ್ತಿವೆ.


ಈ ಎಲ್ಲ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಜಿಯೋ ಬಳಕೆದಾರರನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯಲು  ಜಿಯೋ ವೆಲ್‌ಕಮ್ ಆಫರ್‌ಗಾಗಿ ಆಹ್ವಾನಿಸಲಾಗಿದೆ. 


ಎಲ್ಲ ಪ್ರಮುಖ ಸ್ಥಳಗಳು, ಪ್ರವಾಸಿ ತಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‍ಗಳು ಮತ್ತು ಮಾರುಕಟ್ಟೆಗಳು, ವಸತಿ ಪ್ರದೇಶಗಳು, ಆಸ್ಪತ್ರೆಗಳು, ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳು, ಸರ್ಕಾರಿ ಕಟ್ಟಡಗಳು ಹಾಗೂ ಈ ಎಲ್ಲ ಪ್ರದೇಶಗಳಲ್ಲಿನ ಇತರ ಪ್ರಮುಖ ವಾಣಿಜ್ಯ ಸಂಸ್ಥೆಗಳನ್ನು ಜಿಯೋದ ಟ್ರೂ-5ಜಿ ನೆಟ್‍ವರ್ಕ್ ಒಳಗೊಂಡಿದೆ ಎಂದು ಜಿಯೊ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.


ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಸೇವಾ ಪೂರೈಕೆದಾರ ಜಿಯೋ ಆಗಿದೆ. ಕರ್ನಾಟಕದಾದ್ಯಂತ ಟ್ರೂ 5ಜಿ ಸೇವೆಗಳನ್ನು ಶೀಘ್ರವಾಗಿ ಜಾರಿಗೆ ತರುವ ಮೂಲಕ ಕರ್ನಾಟಕದಲ್ಲಿ ತನ್ನ ಟ್ರೂ 5ಜಿ ವ್ಯಾಪ್ತಿಯನ್ನು ಬಲಪಡಿಸುವ ಮತ್ತು ಜಿಯೋ ಬಳಕೆದಾರರಿಗೆ ತಂತ್ರಜ್ಞಾನ ರೂಪಾಂತರದ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಜಿಯೋ ಹೊಂದಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top