ಬ್ರಹ್ಮ ಕಲಶ ಸಮಾಜದ ಅಭಿವೃದ್ಧಿಗೆ ಕಲಶಾಭಿಷೇಕವಾಗಿದೆ: ಮಾಣಿಲ ಶ್ರೀ

Upayuktha
0

ಶ್ರೀ ವೀರನಾರಾಯಣ ಕ್ಷೇತ್ರದ ಬ್ರಹ್ಮ ಕಳಸದ ಅಭಿನಂದನ ಸಭೆ


ಮಂಗಳೂರು: ಗ್ರಾಮದ ದೇವಸ್ಥಾನ ಅಭಿವೃದ್ಧಿಗೊಂಡಾಗ ಊರು ಅಭಿವೃದ್ಧಿಗೊಳ್ಳುತ್ತದೆ, ಜನ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಮತ್ತಷ್ಟು ಪ್ರೇರಣೆ ಶಕ್ತಿಯಾಗುತ್ತದೆ. ಕುಲಾಲ ಸಮಾಜದ ಬಂಧುಗಳು ಶ್ರದ್ದೆಯಿಂದ ತ್ಯಾಗದ ಭಾವನೆಯಿಂದ ಸೇವೆಯನ್ನು ಮಾಡಿ ದೇವರಿಗೆ ಬ್ರಹ್ಮಕಲಶವನ್ನು ಮಾಡಿದ್ದಾರೆ. ಇದು ಸಮಾಜದ ಅಭಿವೃದ್ಧಿಗೆ ಕಳಸ ಅಭಿಷೇಕವಾಗಿದೆ, ಕ್ಷೇತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಡೀ ಸಮಾಜಕ್ಕಿದೆ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.


ಅವರು ಜೂನ್ 11ರಂದು ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ 12 ದಿನಗಳು ಪರ್ಯಂತ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಯಶಸ್ವಿಗೆ ಶ್ರಮಿಸಿದ ಭಕ್ತರಿಗೆ ಅಭಿನಂದನೆ ಸಲ್ಲಿಸುವ ಅಭಿನಂದನ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.


ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಕುಲಾಲ್ ಕಲ್ಪಾವಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮಾಜ ಬಂಧುಗಳಲ್ಲಿ ಆಧ್ಯಾತ್ಮಿಕದ ಬೆಳಕು ಪ್ರಕಾಶಮಾನವಾಗಿದೆ, ಸಂಘಟನೆ ಬಲಿಷ್ಠಗೊಂಡಿದೆ ಕಾರ್ಯಕರ್ತರ ಶ್ರಮ ಯಶಸ್ವಿಯಾಗಿದೆ ಎಂದು ನುಡಿದರು.


ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡುತ್ತಾ, ಬ್ರಹ್ಮಕಲಶದಲ್ಲಿ ಪಾಲ್ಗೊಂಡ ಭಕ್ತರೆಲ್ಲರೂ ಕುಲಾಲ ಸಮಾಜದ  ತ್ಯಾಗದ ಸೇವಾ ಕಾರ್ಯಗಳನ್ನು ಪ್ರಶಂಸಿಸಿದ್ದಾರೆ ಎಂದರು. ಬ್ರಹ್ಮಕಲಕೋತ್ಸವ ಸಮಿತಿಯ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಮಾತನಾಡುತ್ತಾ ಲಕ್ಷಾಂತರ ಭಕ್ತರನ್ನು ಸಂತೃಪ್ತಿಗೊಳಿಸಿದ ಎಲ್ಲಾ ಸೇವಕರು ತಾಳ್ಮೆ ಮತ್ತು ಶಿಸ್ತಿನಿಂದ ಸೇವೆ ಮಾಡಿದ್ದಾರೆ ಎಂದು ನುಡಿದರು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ಎ. ಮಾತನಾಡಿ, ಸೇವಾಕರ್ತರೆಲ್ಲರೂ ಸೇವೆಯಲ್ಲಿಯೇ ಭಗವಂತನನ್ನು ಸಾಕ್ಷಾತ್ಕರಿಸಿದ್ದಾರೆ. ಇದರಿಂದಾಗಿ ಎಲ್ಲಾ ಕಾರ್ಯಗಳು ಯಶಸ್ವಿಗೊಂಡಿದೆ ಎಂದು ನುಡಿದರು. ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ.ಪಿ. ಬಂಗೇರ ಬಿಜೈ, ಕುಲಾಲರ ಮಾತೃಸಂಘದ ಕಾರ್ಯದರ್ಶಿ ಸದಾಶಿವ ಕುಲಾಲ್, ದೇವಸ್ಥಾನದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮನೋಜ್, ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಿ. ಬ್ರಹ್ಮಕಲಶದ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ಜೆ. ಮೂಲ್ಯ, ಕುಲಾಲರ ಮಾತೃಸಂಘದ  ಸೇವಾದಳದ ದಳಪತಿ ಕಿರಣ್ ಅಟ್ಲೂರು, ಬೆಂಗಳೂರು ಸಮಿತಿಯ ಪುರುಷೋತ್ತಮ್ ಚೆಂಡೇಲ್, ಮುಂಬೈ ಸಮಿತಿಯ ಅಧ್ಯಕ್ಷ, ಬಿ. ದಿನೇಶ್ ಕುಲಾಲ್ ಉಪಸ್ಥಿತರಿದ್ದರು.


ಬ್ರಹ್ಮಕಲಶದ ಸಾಂಸ್ಕೃತಿಕ ಸಮಿತಿಯ ಪ್ರವೀಣ್ ಬಸ್ತಿ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು. ಗಿರಿಧರ ಮೂಲ್ಯ ಧನ್ಯವಾದ ನೀಡಿದರು, ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ದೇವರಿಗೆ ಸಲ್ಲಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top