ನಿಟ್ಟೆ: ಜಪಾನ್ ದೇಶದ ಪ್ರತಿಷ್ಟಿತ ಕಂಪೆನಿಗಳಲ್ಲೊಂದಾದ ಕೋಬಯಾಶಿ ಕ್ರಿಯೇಟ್ ಕೋ.ಲಿ. ನ ಅಧ್ಯಕ್ಷ ತೊಮೊನರಿ ಕೋಬಯಾಶಿ ಹಾಗೂ ಎಕ್ಸಿಕ್ಯೂಟಿವ್ ಆಫೀಸರ್ ಕೋಜಿ ಸುಜುಕಿ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮೇ.29ರಿಂದ ಜೂ.1ರವರೆಗೆ 4 ದಿನಗಳ ಭೇಟಿಗೆ ಆಗಮಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನೊಂದಿಗಿನ ಬಾಂಧವ್ಯವರ್ಧನೆ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಿಟ್ಟೆ-ಕೋಬಯಾಶಿ ಸೆಂಟರ್ ಆಫ್ ಎಕ್ಸಲೆನ್ಸ್ ನ ಕಾರ್ಯವೈಖರಿಯ ಬಗೆಗೆ ವಿವಿಧ ಹಂತದ ಸಮಾಲೋಚನೆಗಳು ಈ ಸಂದರ್ಭದಲ್ಲಿ ನಡೆದವು. ಈ ಭೇಟಿಯು ತಮಗೆ ಸಂತಸ ಹಾಗೂ ಹೊಸ ಅನುಭವವನ್ನು ನೀಡಿದೆ ಎಂದು ಕೋಬಯಾಶಿ ಸಂಸ್ಥೆಯ ಅತಿಥಿಗಳು ಅಭಿಪ್ರಾಯಪಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

