ಪುತ್ತೂರು ಸುದಾನದಲ್ಲಿ ಶಾಲಾ ಪ್ರಾರಂಭೋತ್ಸವ
ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ 2023-24ನೇ ಸಾಲಿನ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಮೇ 29ರಂದು ಆಯೋಜಿಸಲಾಯಿತು. ದೀಪೋಜ್ವಲನೆಯನ್ನು ಮಾಡುವ ಮೂಲಕ ಉದ್ಘಾಟನೆಯನ್ನು ಮಾಡಿದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ರವರು “ ಶಿಕ್ಷಣವು ಸಮೃದ್ದ ಜೀವನಕ್ಕೆ ಅತ್ಯಗತ್ಯ. ಎಲ್ಲರೂ ಶ್ರದ್ಧೆಯಿಂದ ಅಭ್ಯಾಸ ನಿರತರಾಗಿ” ಎಂದು ಮಕ್ಕಳಿಗೆ ಕರೆ ನೀಡಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಡಾ. ರಾಜೇಶ್ ಬೆಜ್ಜಂಗಳ, ಹಾಗೂ ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ರವರು ಶುಭಾಶಂಸನೆಗೈದರು.
ಉಪಮುಖ್ಯ ಶಿಕ್ಷಕಿ ಲವೀನ ಹನ್ಸ್, ವಿವಿಧ ಶಾಲಾ ವಿಭಾಗಗಳ ಸಂಯೋಜಕಿಯರಾದ ಪ್ರತಿಮಾ, ಗಾಯತ್ರಿ ಕೆ, ಅಮೃತವಾಣಿ ರವರು ಉಪಸ್ಥಿತರಿದ್ದರು. ಕು. ಶ್ರೀವಿಭಾ (8ನೇ ತರಗತಿ) ದೇಶಭಕ್ತಿ ಗೀತೆಗಳ ಮೂಲಕ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿದರು. ಕು. ಇಶಿತಾ ನಾಯರ್ (10ನೇ ತರಗತಿ) ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
