ಹಾಸನ: ಮನೆ ಮನೆ ಕವಿಗೋಷ್ಠಿ ಸಂಘಟನೆ ವತಿಯಿಂದ 307ನೇ ಕಾರ್ಯಕ್ರಮವನ್ನು ಜು.7ರಂದು ಆಯೋಜಿಸಲಾಗಿದ್ದು, ಜನಪದ ವಿದ್ವಾಂಸ ಡಾ. ಎಸ್.ಕೆ ಕರೀಂ ಖಾನ್ ಅವರ ಬದುಕು-ಬರಹ ಕುರಿತ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಮೈಸೂರಿನ ವೃತ್ತ ವಾಣಿಜ್ಯ ತೆರಿಗೆ ಉಪ ಆಯುಕ್ತ, ರಂಗಕರ್ಮಿ ಹಾಗೂ ಪ್ರಕಾಶಕರಾದ ಎಚ್.ಎಸ್. ಗೋವಿಂದಗೌಡರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಕವಿಗೋಷ್ಠಿ, ಗಾಯಕರು ಕಲಾವಿದರಿಂದ ಜನಪದಗೀತೆ ರಂಗಗೀತೆ ಕಾರ್ಯಕ್ರಮ ನಡೆಯಲಿದೆ.
ಸಮಾಜ ಸೇವಕ ಕಟ್ಟೆಮನೆ ನಾಗೇಂದ್ರ ಇವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಥಳ: ಜಯಸೂರ್ಯ ಸಭಾಂಗಣ, ಅನುಗ್ರಹ ನಿಲಯ, ಕಟ್ಟೆಮನೆ ವಠಾರ, ಕಲ್ಪತರು ರಸ್ತೆ (ಮಯೂರ ಹೋಟೆಲ್/ಎನ್.ಕೆ. ಸ್ವಾಮಿ ಪೆಟ್ರೋಲ್ ಬಂಕ್ ಪಕ್ಕ) ಹಾಸನ; ಸಮಯ: ಅಪರಾಹ್ನ 3:30.
ಸಾಹಿತ್ಯಾಸಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಚಾಲಕ ಗೊರೂರು ಅನಂತರಾಜು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ