ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ದಿಗಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿರುವ ಮುಂಬಯಿಯಲ್ಲಿ ನೆಲೆಸಿದ ಕರ್ನಾಟಕದ ಕರಾವಳಿಯ ಎಲ್ಲಾ ಜಾತೀಯ ಹಾಗೂ ವಿವಿಧ ಭಾಷಿಕ ಸಂಘಟನೆಗಳನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ಮಾರ್ಗದರ್ಶಕರಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾರ್ಮಿಕ ಮುಂದಾಳು ಮಂಗಳೂರಿನವರೇ ಆದ ದಿ. ಜಾರ್ಜ್ ಫೆರ್ನಾಂಡಿಸ್ ಅವರ 94ನೇ ಜನ್ಮದಿನಾಚರಣೆ ಅಂಗವಾಗಿ ಜೂನ್ 3 ರಂದು ಅವರ ಸ್ಮರಣಾರ್ಥ ರಾಷ್ಟೀಯ ಪ್ರಶಸ್ತಿ ಪ್ರದಾನ ಸಮಾರಂಭ ರಂಜನಿ ಸುಧಾಕರ ಹೆಗ್ಡೆ ಸಭಾಗೃಹ, ಬಂಟರ ಭವನ ಅನೆಕ್ಸ್ ಹಾಲ್, ಕುರ್ಲಾ ಪೂರ್ವ ಇಲ್ಲಿ ನಡೆಯಲಿದೆ.
ಪದ್ಮವಿಭೂಷಣ ಡಾ. ಬಿ.ಎಂ. ಹೆಗ್ಡೆ ಯವರು ಗೌರವ ಅಧ್ಯಕ್ಷರಾಗಿರುವ, ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಸಮಾರಂಭವು ಸಮಿತಿಯ ಅಧ್ಯಕ್ಷರಾದ ಎಲ್.ವಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉತ್ತರ ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿಯವರು ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್‌ಸಿ ಹಾಗೂ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಎಂಎಲ್‌ಸಿ ಹಾಗೂ ಬಿಜೆಪಿ ಕರ್ನಾಟಕ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉಡುಪಿ ಶಾಸಕರು ಹಾಗೂ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಯಶಪಾಲ್ ಎ.ಸುವರ್ಣ, ತುಂಗಾ ಗ್ರೂಪ್ ಆಫ್ ಹೋಟೆಲ್‌ನ ಸಿಎಂಡಿ ಸುಧಾಕರ ಎಸ್ ಹೆಗ್ಡೆ ಅವೆರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ, ಪ್ರತಿ ವರ್ಷ ನೀಡಲಾಗುವ ಭಾರತದ ಮಾಜಿ ರಕ್ಷಣಾ ಸಚಿವ, ಜಾರ್ಜ್ ಫೆರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಅರಣ್ಯ ಸೃಷ್ಟಿಕರ್ತರು ಹಾಗೂ ಭಾರತದ ಹಸಿರು ಹೀರೋ ಸಹ ಸಂಸ್ಥಾಪಕರಾದ ಡಾ. ರಾಧಾಕೃಷ್ಣ ನಾಯರ್ ಇವರಿಗೆ ನೀಡಿ ಸನ್ಮಾನಿಸಲಾಗುವುದು.
ಸದಸ್ಯರೆಲ್ಲರೂ ಸರಿಯಾದ ಸಮಯದಲ್ಲಿ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ ಐ ಆರ್ ಶೆಟ್ಟಿ, ಜಿ. ಟಿ. ಆಚಾರ್ಯ, ಚಂದ್ರಶೇಖರ್ ಬೆಳ್ಚಡ, ಹಿರಿಯಡ್ಕ ಮೋಹನ್ ದಾಸ್, ಕೆ. ಎಲ್. ಬಂಗೇರ, ಡಾ. ಆರ್, ಕೆ, ಶೆಟ್ಟಿ, ನ್ಯಾ. ಆರ್.ಎಂ. ಭಂಡಾರಿ, ಗಿರೀಶ್ ಬಿ ಸಾಲ್ಯಾನ್, ಜಿತೇಂದ್ರ ಗೌಡ, ಡಾ. ಫ್ರಾಂಕ್ ಫೆರ್ನಾಂಡೀಸ್, ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡ, ಎಡ್ವಕೇಟ್ ಸುಭಾಷ್ ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ ಮತ್ತು ಧರ್ಮಪಾಲ ದೇವಾಡಿಗ, ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿ’ಸೊಜಾ, ನ್ಯಾ. ಮೊಯಿದ್ದೀನ್ ಮುಂಡ್ಕೂರು, ಗೌ. ಕಾರ್ಯದರ್ಶಿ ಪ್ರೊ. ಶಂಕರ್, ಜೊತೆ ಕಾರ್ಯದರ್ಶಿಗಳಾದ ಸುರೇಂರ ಮೆಂಡನ್, ಶೇಖರ ಗುಜ್ಜರಬೆಟ್ಟು, ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ಪ್ರಭಾಕರ್ ಶೆಟ್ಟಿ ಬೋಳ, ಎಂ. ಎನ್. ಕರ್ಕೇರ, ದಯಾಸಾಗರ ಚೌಟ, ಶ್ಯಾಮ್ ಎಸ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಕರುಣಾಕಎಅ ಹೆಜ್ಮಾಡಿ, ಬಾಲಕೃಷ್ಣ ಭಂಡಾರಿ, ವಾಸು ಎಸ್ ದೇವಾಡಿಗ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಉತ್ತಮ್ ಶೆಟ್ಟಿಗಾರ್, ಶ್ರೀನಿವಾಸ್ ಸಾಪಲ್ಯ, ಚಿತ್ರಾಪು ಕೆ. ಎಂ. ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ನ್ಯಾ. ಶಶಿಧರ ಕಾಪು, ಜಿ.ಎಸ್. ಗಣೇಶ್ ಎಸ್ ಶೆಟ್ಟಿ, ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಗೌರವ ಪ್ರಧಾನ ಕಾರ್ಯದರ್ಶಿಯಾದ ಸುರೇಂದ್ರ ಸಾಲ್ಯಾನ್ ಮುಂಡ್ಕೂರು, ಗೌರವ ಕಾರ್ಯದರ್ಶಿಗಳಾದ ರವಿ ಎಸ್ ದೇವಾಡಿಗ, ಹ್ಯಾರಿ ಸಿಕ್ಕೇರ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ಕೋಶಾಧಿಕಾರಿ ತುಳಸಿದಾಸ್ ಅಮೀನ್, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ