ಮಂಗಳೂರು: ಭಾರತದ ಸಣ್ಣ ವಾಣಿಜ್ಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸರದಾರನಾಗಿ ಹೊರಹೊಮ್ಮಿರುವ ಮಹೀಂದ್ರಾ & ಮಹೀಂದ್ರಾ ಇಂದು ಹೊಸ ಸುಪ್ರೊ ಸಿಎನ್‍ಜಿ ಡ್ಯುಯೊ ಸಣ್ಣ ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸಣ್ಣ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಚೊಚ್ಚಲ ಡ್ಯುಯಲ್ ಫ್ಯೂಯಲ್ ಇಂಜಿನ್ ಹೊಂದಿರುವ ವಾಣಿಜ್ಯ ವಾಹನ ಇದಾಗಿದೆ. ಸುಪ್ರೊ ಸಿಎನ್‍ಜಿ ಡ್ಯುಯೊ ಅತ್ಯುತ್ತಮ ಭಾರ ಹೊರುವ ಸಾಮಥ್ರ್ಯದ ಪೇಲೋಡ್ ಮತ್ತು ಶ್ರೇಷ್ಠ ಮಟ್ಟದ ಮೈಲೇಜ್ ಒದಗಿಸುತ್ತದೆ. ಗ್ರಾಹಕರಿಗೆ ಗರಿಷ್ಠ ಲಾಭದೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಕಂಪನಿಯ ಭರವಸೆಯನ್ನು ಈಡೇರಿಸುತ್ತದೆ ಎಂದು ಎಂ&ಎಂ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರೂ. 6.32 ಲಕ್ಷ ಆರಂಭಿಕ ಬೆಲೆ (ಎಕ್ಸ್ ಶೋರೂಂ ದೆಹಲಿ) ಯ ಹೊಸ ಸುಪ್ರೊ ಸಿಎನ್‍ಜಿ ಡ್ಯುಯೊ ಹಲವು ವೈಶಿಷ್ಟ್ಯಗಳ ಗೆಲುವಿನ ಸಂಯೋಜನೆ ನೀಡುತ್ತದೆ. ಈ ವಾಹನವನ್ನು ಸಿಎನ್‍ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಾಯಿಸಹುದು.ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಜತೆಗೆ ವಾಹನ ನಿರ್ವಾಹಕರಿಗೆ ಪ್ರಮುಖವಾಗಿ ಇಂಧನ ಉಳಿತಾಯ (ದಕ್ಷತೆ) ವನ್ನು ಇದು ಒದಗಿಸುತ್ತದೆ.
ಹೊಸ ಸುಪ್ರೊ ಸಿಎನ್‍ಜಿ ಡ್ಯುಯೊ ವಾಹನ ಉದ್ಯಮದಲ್ಲೇ ಮೊದಲು ಎನ್ನಬಹುದಾದ ವೈಶಿಷ್ಟ್ಯಗಳೊಂದಿಗೆ ಸಿಎನ್‍ಜಿ ಡೈರೆಕ್ಟ್-ಸ್ಟಾರ್ಟ್ ವೈಶಿಷ್ಟ್ಯ ರೂಪಿಸಲಾಗಿದೆ. ಇದು ಸಿಎನ್‍ಜಿ ಮೋಡ್‍ನಲ್ಲಿರುವಾಗ ವಾಹನವನ್ನು ಆನ್ ಮಾಡಲು ಅನುಮತಿಸುತ್ತದೆ, ಗ್ರಾಹಕರಿಗೆ ಉನ್ನತ ಉಳಿತಾಯ ಒದಗಿಸುತ್ತದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ