ಸ್ವಯಂ ಅರಿವಿನ ಪ್ರಕ್ರಿಯೆಯೇ ಧ್ಯಾನವಾಗಿದೆ: ಧ್ಯಾನಗುರು ಚಂದ್ರಪುಲಮರಸೆಟ್ಟಿ

Upayuktha
0


ಸುರತ್ಕಲ್‌:
ಸ್ವಯಂ ಅರಿವಿನ ಪ್ರಕ್ರಿಯೆಯೇ ಧ್ಯಾನವಾಗಿದೆ. ನಮ್ಮ ಮನಸ್ಸನ್ನು ಶಾಂತಗೊಳಿಸುವುದರಿಂದಿಗೆ ನಮ್ಮ ವಾಸ್ತವತೆಯನ್ನು ಅನ್ವೇಷಿಸಲು ಧ್ಯಾನ ಸಹಕಾರಿಯಾಗಿರುತ್ತದೆ ಎಂದು ಬುದ್ಧ- ಸಿಇಒ ಕ್ವಾಂಟಮ್ ಫೌಂಡೇಶನ್‍ನ ಸ್ಥಾಪಕ ಹಾಗೂ ಧ್ಯಾನಗುರು ಚಂದ್ರಪುಲಮರಸೆಟ್ಟಿ ನುಡಿದಿದ್ದಾರೆ. ಅವರು ಗೋವಿಂದದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಗೋವಿಂದದಾಸಕಾಲೇಜು ಅಲ್ಯುಮ್ನಿ ಅಸೋಸಿಯೇಶನ್, ಬುದ್ಧ - ಸಿಇಒ ಕ್ವಾಂಟಮ್ ಫೌಂಡೇಶನ್, ಶ್ರೀ ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಮತಿ ಸುಮತಿ ಫೌಂಡೇಶನ್ ವತಿಯಿಂದಗೋವಿಂದದಾಸಕಾಲೇಜಿನಲ್ಲಿ ನಡೆದಆತ್ಮವಿಶ್ವಾಸ, ಸ್ಪಷ್ಟತೆ ಹಾಗೂ ಅಭಿವ್ಯಕ್ತಿಗಾಗಿ ಧ್ಯಾನ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಧ್ಯಾನದಿಂದ ಜ್ಞಾನೋದಯ, ಅರಿವು ಹಾಗೂ ಅಂತಿಮವಾಗಿ ಜೀವನದ ಸವಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳು ಎಳವೆಯಲ್ಲಿಯೇ ಧ್ಯಾನದ ಅಭ್ಯಾಸವನ್ನು ನಡೆಸಿ ನಾಯಕರಾಗಲು ಸಾಧ್ಯಎಂದರು.


ಬುದ್ಧ - ಸಿಇಒ ಕ್ವಾಂಟಮ್ ಫೌಂಡೇಶನ್‍ನ ರಾಕೇಶ್ ಬೆಂಗಳೂರು ಸಹ ಸಂಪನ್ಮೂಲ ವ್ಯಕ್ತಿಯಾಗಿದ್ದರು.


ಶ್ರೀ ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಹಾಗೂ ಇಂಡಿಯನ್ ಓವರ್‍ಸೀಸ್ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಎಂ. ಆಶಯ ಮಾತುಗಳನ್ನಾಡಿ ಧನಾತ್ಮಕ ಚಿಂತನೆಯಿಂದ ಯಶಸ್ಸು ಲಭ್ಯವಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ವಹಿಸಿದ್ದರು. ಗೋವಿಂದದಾಸ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಪ್ರಶಾಂತ್ ಸ್ವಾಗತಿಸಿದರು. ಅಲ್ಯುಮ್ನಿ ಅಸೋಸಿಯೇಶನ್‍ನ ಅಧ್ಯಕ್ಷ ರಮೇಶ್‍ರಾವ್ ಎಂ. ವಂದಿಸಿದರು. ಅಲ್ಯುಮ್ನಿ ಅಸೋಸಿಯೇಶನ್‍ನ ಸದಸ್ಯರಾದ ಜಗದೀಶ್ ಪಣಂಬೂರು, ಶ್ರೀಮತಿ ರಾವ್ ಉಪಸ್ಥಿತರಿದ್ದರು. ಕ್ಯಾಪ್ಟನ್ ಸುಧಾಯು. ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top