ಧರ್ಮತ್ತಡ್ಕ ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನೆ

Upayuktha
1

ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾಗಿರುವ ಇ.ಎಚ್ ಗೋವಿಂದ ಭಟ್ ಕಾರ್ಯಕ್ರಮ ಉದ್ಘಾಟಿಸಿ "ಕಲಿಕೆಯ ಪೂರಕ ಜ್ಞಾನಾರ್ಜನೆಗಾಗಿ ಕ್ಲಬ್‌ಗಳ ಚಟುವಟಿಕೆ ಸಹಕಾರಿಯಾಗಿರುತ್ತದೆ" ಎಂದರು. ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.


ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ವಿದ್ಯಾರಂಗ, ಸಂಸ್ಕೃತ, ಐ.ಟಿ, ಆರೋಗ್ಯ, ಆರ್ಟ್ಸ್ ಕ್ಲಬ್, ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್, ಎಂಬೀ ಕ್ಲಬ್‌ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು.


ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ, ಕನ್ನಡ ಅಧ್ಯಾಪಿಕೆಯರಾದ ಈಶ್ವರಿ, ಶ್ವೇತ ಕುಮಾರಿ, ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರದಲ್ಲಿ ಪ್ರವೀಕ್ಷಾ ಸ್ವಾಗತಿಸಿ ತನಿಷ್ ರಾಜ್ ವಂದಿಸಿದನು. ಕು. ಪಲ್ಲವಿ ಕಾರ್ಯಕ್ರಮವನ್ನು ನಿರೂಪಿಸಿದಳು. ಎಲ್ಲಾ ಶಿಕ್ಷಕ, ಸಿಬ್ಬಂದಿ ವರ್ಗದವರು ಸಹಕರಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

1 Comments
Post a Comment
Advt Slider:
To Top