ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಆಳ್ವಾಸ್‍ನ 8 ಕ್ರೀಡಾಪಟುಗಳು

Upayuktha
0

      ಈವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 21 ಕ್ರೀಡಾಪಟುಗಳು ಆಯ್ಕೆ 

ವಿದ್ಯಾಗಿರಿ: ಚೀನಾದ ಚಾಂಗ್ಡುನಲ್ಲಿ ಜುಲೈ 28ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ವಲ್ರ್ಡ್ ಯುನಿವರ್ಸಿಟಿ ಗೇಮ್ಸ್ 2021(ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟ-2021)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 8 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ 21 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. 


ಪುರುಷರ ವಿಭಾಗದಲ್ಲಿ ತೀರ್ಥೇಶ್ ಶೆಟ್ಟಿ (400 ಮೀಟರ್ಸ್ ಓಟ ಮತ್ತು 4 x 400 ಮೀಟರ್ಸ್ ರಿಲೇ), ಹರ್‍ದೀಪ್ (20 ಕಿ.ಮೀ ನಡಿಗೆ), ಸ್ಟಾಲಿನ್ ಜೋಸ್ ಎಸ್. (ಡೆಕಾಥ್ಲಾನ್), ಮಹಿಳಾ ವಿಭಾಗದಲ್ಲಿ ಪೂನಮ್ ದಿಂಕೆ ಸೋನುನೆ (5 ಸಾವಿರ ಮೀಟರ್ಸ್ ಮತ್ತು 10 ಸಾವಿರ ಮೀಟರ್ಸ್ ಓಟ), ಬಸಂತಿ ಕುಮಾರಿ (10 ಸಾವಿರ ಮೀಟರ್ಸ್ ಓಟ), ಠಾಕೂರ್ ನಿರ್ಮಾ (ಹಾಫ್ ಮ್ಯಾರಥಾನ್), ಸಿಂಚನಾ ಎಂ.ಎಸ್. (ಹೈಜಂಪ್), ಭವಾನಿ ಯಾದವ್ ಭಾಗಬತಿ (ಲಾಂಗ್ ಜಂಪ್ ಮತ್ತು 4x400 ಮೀಟರ್ಸ್ ರಿಲೇ) ಪಾಲ್ಗೊಳ್ಳಲಿದ್ದಾರೆ. 


ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಈ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‍ಸ್ಟಿಟ್ಯೂಟ್ ಆಪ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ (ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್) ಪ್ರವೇಶ ಪಡೆದಿದ್ದಾರೆ.  


ಈ ಹಿಂದೆ ನಡೆದ ವಲ್ರ್ಡ್ ಯುನಿವರ್ಸಿಟಿ ಗೇಮ್ಸ್‍ಗಳಲ್ಲೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಈ ವರ್ಷ ಸೇರಿದಂತೆ ಈ ವರೆಗೆ 21 ಮಂದಿ ಆಯ್ಕೆಯಾಗಿದ್ದಾರೆ. 


2016ರಲ್ಲಿ ಕ್ರೊವೇಶಿಯಾ ನಡೆದ ಗೇಮ್ಸ್‍ನಲ್ಲಿ ಒಬ್ಬರು, 2017ರಲ್ಲಿ ತೈವಾನ್ ನಡೆದ ಗೇಮ್ಸ್‍ನಲ್ಲಿ ಇಬ್ಬರು, 2019ರಲ್ಲಿ ಇಟಲಿಯಲ್ಲಿ ನಡೆದ ಗೇಮ್ಸ್‍ನಲ್ಲಿ 10 ಜನ ಪಾಲ್ಗೊಂಡಿದ್ದರು.  

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top