ಗುರುವಿಜಯಗೀತೆ- ಕಿರು ಚಿತ್ರ ಬಿಡುಗಡೆ
ಬೆಂಗಳೂರು: ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 70ನೇ ಜನ್ಮನಕ್ಷತ್ರ ಮಹೋತ್ಸವದ ಪ್ರಯುಕ್ತ ಜೂನ್ 25 ಮತ್ತು 26ರಂದು ‘ವಿದ್ಯೇಶ ನಾದೋತ್ಸವ’ ವಿಶೇಷ ಕಾಯಕ್ರಮ ಆಯೋಜನೆಗೊಂಡಿದೆ. ಬೆಂಗಳೂರಿನ ಗಿರಿನಗರದ 2ನೇ ಹಂತದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಎರಡು ದಿನಗಳ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಂಗಮಿಸಲಿದ್ದಾರೆ.
25ರ ಸಂಜೆ 5ಕ್ಕೆ ಹಿಂದುಸ್ತಾನಿ ಗಾಯಕ ಪಂಡಿತ್ ರಾಘವೇಂದ್ರ ಗುಡಿ ಅವರು ನಾದೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಗೀತ ಪ್ರಿಯರಿಗಾಗಿಯೇ ಮಠ ಆಯೋಜಿಸಿದ್ದ ಶ್ರೀ ವಿದ್ಯೇಶತೀರ್ಥ ವಿರಚಿತ ಕೃತಿಗಳ ಆನ್‌ಲೈನ್ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
26ರ ಸಂಜೆ 5ಕ್ಕೆ ‘ಗುರುವಿಜಯಗೀತೆ’ ಕಿರುಚಿತ್ರ (ಪರಿಕಲ್ಪನೆ ಮತ್ತು ನಿರ್ದೇಶನ: ವಿದುಷಿ ಶುಭಾ ಸಂತೋಷ್ )ಬಿಡುಗಡೆಗೊಳ್ಳಲಿದೆ. ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು, ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು, ಮಾಧವತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ತೀರ್ಥರು, ಕಿರಿಯ ಶ್ರೀ ವಿದ್ಯಾವಲ್ಲಭ ತೀರ್ಥರು ‘ಗುರುವಿಜಯಗೀತೆ’ ಯನ್ನು ಯು ಟ್ಯೂಬ್‌ಗೆ ಸಮರ್ಪಿಸಲಿದ್ದಾರೆ. ಕಿರುಚಿತ್ರ ನಿರ್ಮಾಣ ತಂಡದ ಕಲಾವಿದರು, ತಂತ್ರಜ್ಞರರಿಗೆ ಸನ್ಮಾನ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ