ಬೆಳೆ ವಿಮೆ: ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಕೆ ಬೆಳೆಗಾರರಿಗೆ ಲಭ್ಯವಾಗಬೇಕು

Upayuktha
0

                      ಪ್ರೀಮಿಯಂ ಪಾವತಿಗೂ ಸಮಯಾವಕಾಶ ಬೇಕು

ಪುತ್ತೂರು: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಅನುಕೂಲವಾಗುವಂತೆ ಹವಾಮಾನ ಆಧಾರಿತ ಫಸಲು ಭೀಮಾ ಯೋಜನೆಗೆ ಪ್ರೀಮಿಯಂ  ಪಾವತಿಯ ದಿನ ಮುಕ್ತಾಯವಾಗುತ್ತಿದ್ದರೂ ಇದುವರೆಗೂ ಯಾವುದೇ ರೀತಿಯ ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. ಹೀಗಾಗಿ ತಕ್ಷಣವೇ ಸರ್ಕಾರ ಗಮನಹರಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ. 


ಅಡಿಕೆ ಬೆಳೆಯು ಹವಾಮಾನ ಆಧಾರಿತವಾಗಿಯೇ ನಿರ್ಧಾರವಾಗುತ್ತದೆ. ಭಾರೀ ಮಳೆಯಾದರೆ ಅಡಿಕೆಗೆ ಕೊಳೆರೋಗ ಬಂದು ಇಡೀ ಫಸಲು ನಾಶವಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆಗಾರರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೊಳೆರೋಗ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಬೇಕಾಗುತ್ತದೆ. ಆದರೆ ಇಂತಹ ವಿಮಾ ಯೋಜನೆಗಳು ಜಾರಿಯಾದರೆ ಸ್ವಲ್ಪಮಟ್ಟಿನ ಬೆಂಬಲ ಅಡಿಕೆ ಬೆಳೆಗಾರರಿಗೆ ಸಿಕ್ಕಿದಂತಾಗುತ್ತದೆ. ಹೀಗಾಗಿ ಉಪಯುಕ್ತವಾಗಿರುವ  ಹವಾಮಾನ ಆಧಾರಿತ ಫಸಲು ಭೀಮಾ ಯೋಜನೆ ಅಡಿಕೆ ಬೆಳೆಗಾರರಿಗೂ ಅನ್ವಯವಾಗಬೇಕು. ಆದರೆ ಇದುವರೆಗೆ ಈ ಯೋಜನೆಗೆ ಪ್ರೀಮಿಯಂ ಪಾವತಿ ಮಾಡಲು ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. 


ತಕ್ಷಣವೇ ಈ ಬಗ್ಗೆ ಸರ್ಕಾರ ಗಮನಹರಿಸಿ, ಸೂಕ್ತವಾದ ಸಮಯಾವಕಾಶದೊಂದಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಕೆ ಬೆಳೆಗಾರರಿಗೆ ಜಾರಿಯಾಗಬೇಕು ಹಾಗೂ ಪ್ರೀಮಿಯಂ ಪಾವತಿಗೆ ಕಾಲಾವಕಾಶ ಸಿಗುವಂತಾಗಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತಿದೆ.


ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಅನುಕೂಲವಾಗುವಂತೆ ಹವಾಮಾನ ಆಧಾರಿತ ಫಸಲು ಭೀಮಾ ಯೋಜನೆಗೆ ಪ್ರೀಮಿಯಂ  ಪಾವತಿಯ ದಿನ ಮುಕ್ತಾಯವಾಗುತ್ತಿದ್ದರೂ ಇದುವರೆಗೂ ಯಾವುದೇ ರೀತಿಯ ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. ಹೀಗಾಗಿ ತಕ್ಷಣವೇ ಸರ್ಕಾರ ಗಮನಹರಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ.  ಅಡಿಕೆ ಬೆಳೆಯು ಹವಾಮಾನ ಆಧಾರಿತವಾಗಿಯೇ ನಿರ್ಧಾರವಾಗುತ್ತದೆ. ಭಾರೀ ಮಳೆಯಾದರೆ ಅಡಿಕೆಗೆ ಕೊಳೆರೋಗ ಬಂದು ಇಡೀ ಫಸಲು ನಾಶವಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆಗಾರರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೊಳೆರೋಗ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಬೇಕಾಗುತ್ತದೆ. ಆದರೆ ಇಂತಹ ವಿಮಾ ಯೋಜನೆಗಳು ಜಾರಿಯಾದರೆ ಸ್ವಲ್ಪಮಟ್ಟಿನ ಬೆಂಬಲ ಅಡಿಕೆ ಬೆಳೆಗಾರರಿಗೆ ಸಿಕ್ಕಿದಂತಾಗುತ್ತದೆ. ಹೀಗಾಗಿ ಉಪಯುಕ್ತವಾಗಿರುವ  ಹವಾಮಾನ ಆಧಾರಿತ ಫಸಲು ಭೀಮಾ ಯೋಜನೆ ಅಡಿಕೆ ಬೆಳೆಗಾರರಿಗೂ ಅನ್ವಯವಾಗಬೇಕು. ಆದರೆ ಇದುವರೆಗೆ ಈ ಯೋಜನೆಗೆ ಪ್ರೀಮಿಯಂ ಪಾವತಿ ಮಾಡಲು ಮಾಹಿತಿ ಅಡಿಕೆ ಬೆಳೆಗಾರರಿಗೆ ಲಭ್ಯವಾಗಿಲ್ಲ. 


ತಕ್ಷಣವೇ ಈ ಬಗ್ಗೆ ಸರ್ಕಾರ ಗಮನಹರಿಸಿ, ಸೂಕ್ತವಾದ ಸಮಯಾವಕಾಶದೊಂದಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಕೆ ಬೆಳೆಗಾರರಿಗೆ ಜಾರಿಯಾಗಬೇಕು ಹಾಗೂ ಪ್ರೀಮಿಯಂ ಪಾವತಿಗೆ ಕಾಲಾವಕಾಶ ಸಿಗುವಂತಾಗಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತದೆ ಎಂದು ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top