ಚಿಕ್ಕಬಳ್ಳಾಪುರ: ಭಾವೈಕ್ಯ ಯುವಜನ ಸಂಘದಿಂದ ಪರಿಸರ ದಿನಾಚರಣೆ

Upayuktha
0

ಶಿಡ್ಲಘಟ್ಟ: ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಘಟಕ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳ್ಳೂರು ಸಹಯೋಗದಲ್ಲಿ ಸೋಮವಾರ (ಜೂ.5) ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಳ್ಳೂರಿನಲ್ಲಿ "ಪರಿಸರದರಿವು ಕಾರ್ಯಕ್ರಮ" ಹಾಗೂ ಜಾಥಾವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಆರ್&ಸಿ ತಂಡ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನಾಗರೀಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಕೆ.ಎನ್. ರಮೇಶ್ ಕುಮಾರ್ ರವರು ಹಾಗೂ ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ಡಿವೈಎಸ್‌ಪಿ ಕೆ.ಎನ್ ರಮೇಶ್ ಕುಮಾರ್ ರವರು ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ನಾವೆಲ್ಲರೂ ಗಿಡಗಳನ್ನು ನೆಟ್ಟು ಬೆಳೆಸಬೇಕು ಪರಿಸರ ಕಾಳಜಿವಹಿಸಬೇಕು ಎಂದು ಮಾತಾಡಿದರು. ಅಧ್ಯಕ್ಷರು ಶ್ರೀದರ್ ರವರು ನಾವೆಲ್ಲರೂ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದೇವೆ. ಹಸಿರಿನಿಂದಲೇ ನಮ್ಮ ಉಸಿರು, ಇಂದು ಆಕ್ಸಿಜನ್ ಮಟ್ಟದಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದೆ ಇದರಿಂದ ಉಸಿರಾಟ ಸಂಬಂದಿಸಿದ ಕಾಯಿಲೆಗಳು ಮನುಷ್ಯನಿಗೆ ಬರುತ್ತಿದೆ ಈಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು ಇಂದು ಪ್ರತಿ ಮನೆಗೆ ಒಂದು ಒಂದು ಗಿಡವನ್ನು ನೆಟ್ಟು ಪೋಷಿಸಬೇಕು ರಕ್ಷಿಸಬೇಕು ಎಂದು ತಿಳಿಸಿದರು.


ಮುಖ್ಯೋಪಾಧ್ಯಾಯಿನಿ ಅರುಣಾರವರು ಮಾತನಾಡಿ, ಊರಿಗೊಂದು ವನ ಅದು ದೇಶಕ್ಕೊಂದು ವರ, ಹಿಂದೆ ಹಿರಿಯರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಆದರೆ ಇಂದು ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿದ್ದಾರೆ ಇದರಿಂದಾಗುವ ಅನಾಹುತವನ್ನು ನಾವು ಅನುಭವಿಸಬೇಕಾಗುತ್ತದೆ. ಹಾಗಾಗಿ ಈಗಲೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.


ಮಳ್ಳೂರು ಗ್ರಾಮದ ಯುವ ವಕೀಲರು ಆದ ಅಶೋಕ್ ರವರು ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಮಣ್ಣಿನ ಮಾಲಿನ್ಯ, ವಿಕಿರಣ ಶೀಲಾ ಮಾಲಿನ್ಯವನ್ನು ನಾವು ತಡೆಗಟ್ಟಬೇಕು ಎಂದು ಹೇಳಿದರು. ಗ್ರಾಮದ ಯುವಕ ವೇಣುಗೋಪಲ್ ರವರು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಇದು ಪರಿಸರದ ಮೇಲೆ ತುಂಬಾ ಪರಿಣಾಮ ಬೀರುತ್ತಿರುವುದಲ್ಲದೆ ಮನುಷ್ಯನ ಮೇಲೂ ಗಂಭೀರವಾಗಿ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.


ಭಾವೈಕ್ಯ ಯುವಜನ ಸಂಘದ ಅಧ್ಯಕ್ಷರಾದ ಪ್ರಜ್ವಲ್ ಕೆ ವಿ ರವರು ಪರಿಸರ ದಿನಾಚರಣೆ ಕುರಿತು ವಿಚಾರಗಳನ್ನು ಹಂಚಿಕೊಂಡರು ಹಾಗೂ ಈ ಸುಸಂದರ್ಭದಲ್ಲಿ ಇಂದು ನಾವು ಡಾಕ್ಟರ್ ಎಚ್ ನರಸಿಂಹಯ್ಯ ಅವರನ್ನು ಜನುಮ ದಿನದ ಪ್ರಯುಕ್ತ ನೆನಪಿಸಿಕೊಳ್ಳಬೇಕಾಗಿದೆ. ಭೌತಶಾಸ್ತ್ರಜ್ಞ, ಶಿಕ್ಷಣತಜ್ಞ, ಸ್ವಾತಂತ್ರ್ಯ ಹೋರಾಟಗಾರರಾದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ 6 ಜೂನ್ 1920 ರಲ್ಲಿ ಜನಿಸದ ಡಾ.ಎಚ್.ಎನ್ ನರಸಿಂಹಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬಸವನಗುಡಿ ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡು ತದನಂತರ ಕಾಲೇಜಿನ ಪ್ರಾಂಶುಪಾಲರಾದರು. ಇವರ ವೈಚಾರಿಕತೆ ಇವರನ್ನು ದೊಡ್ಡ ಸ್ಥಾನಕ್ಕೆ ಕರೆದೊಯ್ಯಿತು.ಇವರು ತೆರೆದ ಮನ ಹಾಗೂ ಹೋರಾಟದ ಹಾದಿ (ಆತ್ಮಕಥನ) ಎಂಬ ಎರಡು ಪ್ರಸಿದ್ಧ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.


ವಿದ್ಯಾರ್ಥಿಗಳು ಪರಿಸರದ ಕುರಿತು ಹಾಡು ಹಾಡಿದರು ಹಾಗೂ ನಾಟಕ ದೃಶ್ಯಗಳನ್ನು ಅಭಿನಯಿಸಿದರು. ಗ್ರಾಮದ ಹಿರಿಯರು ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಗಿಡಗಳನ್ನು ಬೆಳೆಸಿ ಪೋಷಿಸಿ ಸಂರಕ್ಷಿಸಬೇಕೆಂದು ಸೂಚಿಸಿದರು. ಕಾರ್ಯಕ್ರಮದ ಆಯೋಜಕರು ಹಾಗೂ ಭಾವೈಕ್ಯ ಯುವಜನ ಸಂಘದ ಉಪಾಧ್ಯಕ್ಷರು ಆದ ಕೃಪ ಅವರು ಮತ್ತು ಲಿಯೋ ಕ್ಲಬ್ ಕಾರ್ಯದರ್ಶಿ ಲೋಕೇಶ್ ರವರು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಯುವಕರು ಗ್ರಾಮಸ್ಥರು ಉತ್ಸಾಹದಿಂದ ಚಿತ್ತದಿಂದ ಆಲಿಸುತ್ತಾ ವಿಚಾರಗಳನ್ನು ತಿಳಿದುಕೊಂಡರು. ನಂತರ ವಿದ್ಯಾರ್ಥಿಗಳು ಗ್ರಾಮದಲ್ಲಿ ಜಾಥಾ ಹೋಗುವುದರ ಮೂಲಕ ಜನರಿಗೆ ಪರಿಸರದ ಜಾಗೃತಿಯನ್ನು ಮೂಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top