'ಭಾವನೆಯ ಅಭಿವ್ಯಕ್ತಿಯೇ ಭಾಷೆʼ

Upayuktha
0

ವಿವಿ ಕಾಲೇಜು: ಬ್ಯಾರಿ ಅಧ್ಯಯನ ಪೀಠದ ಉಪನ್ಯಾಸದಲ್ಲಿ ಪ್ರೊ. ಹೈದರಾಲಿ ಅಭಿಮತ 



ಮಂಗಳೂರು: ಸ್ಥಳದಿಂದ ಸ್ಥಳಕ್ಕೆ ಭಾಷೆಯು ಸಂಸ್ಕೃತಿಗೆ ಅನುಗುಣವಾಗಿ ಬದಲಾವಣೆ ಆಗುತ್ತದೆ. ಬ್ಯಾರಿ ಭಾಷೆಯು ಮೊದಲು ಒಂದು ಜನಾಂಗದ ಭಾಷೆಯಾಗಿತ್ತು. 1980 ರ ದಶಕದ ಹಿಂದೆ ಬ್ಯಾರಿ ಅನ್ನಲು ಹಿಂಜರಿಕೆಯಾಗಿತ್ತು. ಆದರೀಗ ಬ್ಯಾರಿ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ, ಎಂದು ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಹೈದರಾಲಿ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ  ಗುರುವಾರ, ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠ ವತಿಯಿಂದ ಆಯೋಜಿಸಲಾಗಿದ್ದ "ಬ್ಯಾರಿ ಭಾಷೆ,ಸಂಸ್ಕೃತಿ ಮತ್ತು ಸಾಹಿತ್ಯ" ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾವನೆಯ ಅಭಿವ್ಯಕ್ತಿಯೇ ಭಾಷೆ. ಭಾವನೆಯಿಂದ ಭಾಷೆ, ಭಾಷೆಯಿಂದ ಸಾಹಿತ್ಯ. ಇಂತಹ ಸಾಹಿತ್ಯಕ್ಕೆ ಬ್ಯಾರಿ ಸಾಹಿತಿಗಳಿಂದ ಸಾಕಷ್ಟು ಕೊಡುಗೆ ಸಿಕ್ಕಿದೆ ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು. 

ವಾಣಿಜ್ಯ ವಿಭಾಗ ವಿದ್ಯಾರ್ಥಿ ಮಹಮ್ಮದ್ ಇತಿಶಾಂ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅದ್ಯಯನ ಪೀಠ ಸಂಯೋಜಕ ಪ್ರೊ. ಎ ಸಿದ್ದಿಕ್  ಸ್ವಾಗತಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹಾಜಿ ಇಬ್ರಾಹಿಂ ಕೊಡಿಜಾಲ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಶುದ್ದೀನ್ ಮಡಿಕೇರಿ, ಅಹ್ಮದ್ ಬಾವಾ ಮೊಯಿದ್ದೀನ್, ಬಶೀರ್ ಬೈಕಂಪಾಡಿ, ಅಬ್ದುಲ್ ಖಾದರ್ ಕುತ್ತೆತ್ತೂರ್, ಅಬ್ದುಲ್ ಸಿದ್ದಿಕ್, ಕಾಲೇಜಿನ ಭೋದಕ- ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top