ನಮ್ಮ ಮಾತುಗಳನ್ನು ದೇವರು ಏಕೆ ಕೇಳುವುದಿಲ್ಲ...? ಉತ್ತರ ಸಹಜ, ದೇವರ ಮಾತನ್ನು ನಾವು ಕೇಳುವದಿಲ್ಲ." ನಾವು ಯಾರ ಮಾತು ಕೇಳುತ್ತೇವೆ, ಅವರು ನಮ್ಮ ಮಾತು ಕೇಳುತ್ತಿರುತ್ತಾರೆ. ದೇವರ ಮಾತು ನಾವು ಕೇಳುವುದಿಲ್ಲ. ನಮ್ಮ ಮಾತು ಅವನು ಕೇಳುವುದಿಲ್ಲ.
ದೇವರ ಯಾವ ಮಾತು ಕೇಳಿಲ್ಲ...?
"ನಿತ್ಯ ಸಂಧ್ಯಾವಂದನೆ ಮಾಡು", ಆಗುವುದಿಲ್ಲ. "ನಿತ್ಯ ದೇವರ ಪೂಜೆ ಮಾಡು" ಸಮಯವಿಲ್ಲ. "ಅರ್ಧಗಂಟೆ ಅಧ್ಯಯನ ಮಾಡು" ಓದು ನಮಗೆ ಅಲ್ಲ. ಹದಿನೈದು ದಿನಕ್ಕೊಮ್ಮೆ ಏಕಾದಶೀ ಮಾಡು. ಅದೂ ಸಹ ಅಸಾಧ್ಯದ ಮಾತು. ಹೀಗೆ ಯಾವ ಮಾತೂ ಕೇಳಲು ಆಗುವುದೇ ಇಲ್ಲ. ಎಲ್ಲ ಮಾತುಗಳನ್ನೂ ಕೇಳಿದ್ದರೆ ಇಂದು ಇಲ್ಲಿ ಇರುತ್ತಿದ್ದಿಲ್ಲ.
ವರ್ಷದ ಇಪ್ಪತ್ತು ನಾಲ್ಕು ಏಕಾದಶಿ ಉಪವಾಸ ಮಾಡಿದ ಫಲ ಬರತ್ತೆ. ಆದರಿಂದ ಪ್ರಥಮ ಏಕಾದಶೀ ಉಪವಾಸ ಮಾಡು ಎಂದು ಹೇಳಿದ್ದಕ್ಕಾಗಿ ಇಂದು ಒಂದು ದಿನ ಉಪವಾಸ ಮಾಡುವ ಮುಖಾಂತರ ದೇವರ ಮಾತು ಕೇಳುವ ಪ್ರಸಂಗ ಬಂದಿದೆ. ಅದಕ್ಕೇ ನಾವು ಖುಶಿ ಪಡಬೇಕಷ್ಟೆ...
ಪ್ರತೀಬಾರಿಯ ಏಕಾದಶೀ...
ಆ ದೇಶ- ಕಾಲ- ಸಂಪ್ರದಾಯಕ್ಕನುಗುಣ ಉಪವಾಸ ಮಾಡೋಣ. ಉಪವಾಸ ತಪ್ಪಿಲ್ಲ ಅಷ್ಟು ಸಾಕು. ತಪ್ಪದೇ ಆಚರಿಸೋಣ ಇದುವೇ ನಿತ್ಯ.
ಉಪವಾಸ ಮಾಡಬೇಕು ಯಾಕೆ?:
ಏಕಾದಶೀ ದಿನ ಮಾಡುವ ಉಪವಾಸ, ಅಂದು ಅನುಭವಿಸುವ ಹಸಿವೆಯ ಕ್ಷಣ ಕ್ಷಣದ ಕಷ್ಟ, ನಮ್ಮ ನೂರಾರು ಜನ್ಮದ ಪಾಪ ಪರಿಹರಿಸುತ್ತದೆ. ಅಪಾರ ಪುಣ್ಯರಾಶಿಯನ್ನು ಒದಗಿಸುತ್ತದೆ. ಜೊತೆಗೆ ಇಂದಿನ ಒಂದೊಂದು ತುತ್ತಿನ ಅನ್ನದ ಮಹತ್ವವನ್ನೂ ತಿಳಿಸುತ್ತದೆ.
ಏಕಾದಶೀ ದಿನದಂದು ತಿನ್ನುವ ಪ್ರತೀ ಅಗಳಿನಲ್ಲೂ ಎಲ್ಲ ಪಾಪಗಳು, ಪಾಪಾಭಿಮಾನಿ ದೈತ್ಯರೂ ಸೇರಿಕೊಂಡಿರುತ್ತಾರೆ. ಏಕಾದಶಿಯಂದು ತಿನ್ನುವುದು ಎಂದರೆ ಆ ಎಲ್ಲ ಪಾಪಗಳಿಗೂ ಪಾಪಾಭಿಮಾನಿ ದೈತ್ಯರಿಗೂ ನಮ್ಮ ದೇಹವೆಂಬ ಮನೆಗೆ welcome ಸ್ವಾಗತ ಮಾಡಿದ ಹಾಗೆಯೇ. ಹೀಗೆ ಎರಡು ಕಾರಣಗಳಾದರೆ ಇನ್ನೊಂದು ಕಾರಣ "ದೇವರು ತನಗೋಸ್ಕರ ಇಟ್ಟುಕೊಂಡ ದಿನ ಇಂದಿನ ಈ ದಿನದ ಏಕಾದಶೀವ್ರತ" ಇಂದು ಉಪವಾಸ ವ್ರತ ಮಾಡದಿದ್ದರೆ ಸ್ಪಷ್ಟವಾಗಿ ನಾನು ನಿನ್ನ ಮಾತು ಕೇಳುವದಿಲ್ಲ ಎಂದು ದೇವರನ್ನು ತಿರಸ್ಕರಿದಂತೆಯೇ ಸರಿ" ಈ ಎಚ್ಚರ ಇಟ್ಟುಕೊಂಡೇ ನಿರ್ಣಯಿಸೋಣ. ನಾಳೆ ಇರುವ ಉಪವಾಸ ಮಾಡೋಣವೇ ಬೇಡವೆ ಎನ್ನುವದನ್ನೂ ನಿರ್ಧರಿಸೋಣ.
ಉಪವಾಸದ ದಿನದಂದು ಏನೇನು ಮಾಡಬೇಕು:
ಹರಿವಾಸರ ಹರಿದಿನ ನಾಳೆ ಆದ್ದರಿಂದ ಇಂದಿನ ಪ್ರತಿಕ್ಷಣ ಪ್ರತಿ ಉಸಿರು ದೇವರಿಗೇ ಮೀಸಲು. ಸ್ನಾನ/ ಸಂಧ್ಯಾವಂದನ/ ಜಪ/ಪಾರಾಯಣ/ ಭಾಗವತ ಮಹಾಭಾರತ ಶ್ರವಣ/ ಭಜನೆ/ ಜಾಗರಣೆ ಇತ್ಯಾದಿ ಅನೇಕ ಸಾಧನೆಗಳನ್ನು ವಿಧಿಸಿದ್ದಾರೆ. ಎಲ್ಲದರ ಮೇಲೆ ಉಪವಾಸ. ಚಹ ಕಾಫಿ ಕುಡಿದು, ನಾಲ್ಕು ಹೊತ್ತೂ ತಿಂದು, ಉಪವಾಸ ಇದ್ದೇನೆ ಎಂದು ಬೀಗಿ, ಇಂದು ಜಾಗರಣೆ ಮೊದಲು ಮಾಡಿ ಏನು ಮಾಡಿದರೂ ಅದರಿಂದ ಏನೂ ಫಲವಿಲ್ಲ ಇದು ನೂರಷ್ಟು ಸಿದ್ಧ. ಎಲ್ಲದರ ಮೇಲೆ ದೇವರ ಮಾತು ಮೀರಿದಂತೆ ಆಗುವದು.
ದೇವರ ಮಾತು ನೂರು ಕೇಳದಿದ್ದರೂ, "ಇಂದಿನ ಈ ವ್ರತ ಮಾಡುವ ಮುಖಾಂತರ ನಾನು ನಿನ್ನ ಮಾತು ಕೇಳುವವರ ಸಾಲಿನಲ್ಲಿ ಬರುವೆ" ಎಂದು ದೇವರೆದುರಿಗೆ ಸಾಬೀತು ಮಾಡಿ ತೋರಿಸೋಣ. ಅವನೂ ನಾವು ಹೇಳದ ಬೇಡದ ನೂರು ಸಾವಿರ ಅನಂತ ಉಪಯುಕ್ತಗಳನ್ನು ಒದಗಿಸಿದ್ದರೂ "ನಾವು ಕೇಳಿದ ಮೂರ್ನಾಲ್ಕನ್ನೂ ಒದಗಿಸಿಕೊಡುತ್ತಾನೆ" ಎಂಬ ಭರವಸೆಯಿಂದಾದರೂ ಉಪವಾಸ ಮಾಡಿಯೇ ತೀರೋಣ...
✍🏽ನ್ಯಾಸ...
ಗೋಪಾಲ ದಾಸ
ವಿಜಯಾಶ್ರಮ, ಸಿರವಾರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ