ಈ ಆತ್ಮ ಪರಾಮರ್ಶೆ ಮಾಡಿಕೊಳ್ಳಬೇಕಾದವರು ನಾವಲ್ಲ ಸೇೂತ ಗೆದ್ದ ಪಕ್ಷಗಳು. ಮೊದಲಿಗೆ ಆಡಳಿತ ರೂಢ ಬಿಜೆಪಿ ಅತ್ಯಂತ ಹೀನಾಯವಾದ ಸೇೂಲು ಕಾಣಲು ಕಾರಣವೇನು?
1. ಆಡಳಿತ ವಿರೇೂಧಿ ಅಲೆ.ಇದನ್ನು ಸ್ವತಃ ಬಿಜೆಪಿ ಸಚಿವರೇ ಒಪ್ಪಿಕೊಂದ್ದಾರೆ. ಇದನ್ನು ಮೊದಲು ಒಪ್ಪಿಕೊಂಡು ಸುಧಾರಣೆ ಮಾಡಿಕೊಳ್ಳಬೇಕಿತ್ತು. ಅದನ್ನು ಅಲ್ಲಗಳೆಯುತ್ತಾ ಬಂದರು. ಉದಾ: ಅಂಗನವಾಡಿ ಕಾರ್ಯಕರ್ತರು ತಮ್ಮ ಕನಿಷ್ಠ ವೇತನಕ್ಕೆ ಇಟ್ಟ ಬೇಡಿಕೆ; ಅದೇ ರೀತಿಯಲ್ಲಿ ಸುಮಾರು ಮೂರು ಲಕ್ಷ ಸರಕಾರಿ ನೌಕರರು ತಮಗೆ ಹಳೆ ಪಿಂಚಣಿ ನೀಡಿ ಅನ್ನುವ ತಿಂಗಳುಗಟ್ಟಲೆ ಹೇೂರಾಟವನ್ನು ಹೆಂಗಸರು ಮಕ್ಕಳನ್ನು ಕೂಡಿಸಿ ಕೊಂಡು ಬೆಂಗಳೂರಿನ ಫ್ರೀಡಂ ಪಾಕ೯ನಲ್ಲಿ ಕೂತು ರೇೂಧಿಸಿದರೂ ಕೂಡಾ ಸತ್ತಿದ್ದಾರಾ ಇದ್ದರಾ ಅನ್ನುವುದನ್ನು ವಿಚಾರಿಸಲು ಬಾರದ ಸರಕಾರಕ್ಕೆ ಅಂದೇ ಈ ನೌಕರರು ಮನ ನೊಂದು ಶಾಪ ಕೊಟ್ಟು ಹೇೂಗಿದ್ದು ಮನ ಕಲುಕವಂತಿತ್ತು. ಇವರ ಸುಮಾರು ಆರು ಏಳು ಲಕ್ಷ ಮತಗಳು ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ದೇಣಿಗೆ ನೀಡಿದೆ.
2. ಮೀಸಲಾತಿ ವಿಷಯ ಬಂದಾಗ ಕೂಡಾ ಯಾವ ಸಮುದಾಯವೇ ಇರಲಿ ಅವರಿಗೆ ಕೊಟ್ಟ ಮೀಸಲಾತಿ ವಾಪಾಸು ತೆಗೆದುಕೊಂಡಿದ್ದು ಅತ್ಯಂತ ಅನ್ಯಾಯ. ಇದು ಕೂಡ ಬಿಜೆಪಿ ಸೇೂಲಿಗೆ ಬ್ರಹ್ಮಾಸ್ತ್ರ ವಾಗಿ ಬಳಕೆಯಾಗಿದೆ.
3. ಭ್ರಷ್ಟಾಚಾರದ ವಿಷಯ ಬಂದಾಗ ಕೂಡಾ ಕಾಂಗ್ರೆಸ್ 40% ಲೇಬಲ್ ಅನ್ನು ನಿರಂತರವಾಗಿ ಬಿಜೆಪಿ ಸರ್ಕಾರದ ಮೇಲೆ ಅಂಟಿಸಿದಾಗ ಕೂಡ ಅದನ್ನು ಹೊತ್ತು ತಿರುಗಿದರೆ ಅದಕ್ಕೆ ಪ್ರತಿ ಉತ್ತರ ಕೊಡುವ ಗೌಜಿಗೆ ಹೇೂಗಲೇ ಇದು ಶಾಶ್ವತವಾಗಿ ತೆಗೆಯಲಾರದ ಲೇಬಲಾಗಿ ಮುಂದುವರಿಯಿತು.
4. ನಾವು ಏನುಮಾಡಿದರು ನಡೆಯುತ್ತದೆ ಮೇೂದಿ ಬಂದು ಹೇೂದರೆ ಸಾಕು ನಮ್ಮ ಜೀವ ಉಳಿಯುತ್ತದೆ ಅನ್ನುವ ಬಲವಾದ ನಂಬಿಕೆ. ಆದರೆ ಇದು ಹೆಚ್ಚು ಕಾಲ ನಡೆಯುವುದಿಲ್ಲ ಜನ ಬುದ್ಧಿವಂತರಿದ್ದಾರೆ ಅನ್ನುವುದನ್ನು ತಿಳಿಯದೇ ಈಗ ಬುದ್ಧಿ ಕಲಿಯುವ ಕಾಲ ಈ ಚುನಾವಣಾ ಫಲಿತಾಂಶ ಸ್ವಷ್ಟವಾಗಿ ಹೇಳಿದೆ.
5. ರಾಜಕೀಯದ ವಾಸ್ತವಿಕತೆಯನ್ನು ತಿಳಿಯದ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಿಲ್ಲದವರ ಮಾಗ೯ದಶ೯ನ ಫಲವಾಗಿ ಬಿಜೆಪಿ ಹಲವರು ಸೀಟುಗಳು ಕಳೆದುಕೊಳ್ಳಬೇಕಾದ ಪರಿಸ್ಥಿತಿ.
ಕಾಂಗ್ರೆಸ್ ಯಾಕೆ ಗೆದ್ದಿದೆ ಅಂದು ಕೇಳಿದರೆ-
1. ಸೇೂಲಿನ ಮೇಲೆ ಸೇೂಲಿನಿಂದ ಬದುಕಿನಪಾಠವನ್ನು ಕಲಿತಿದೆ ಅನ್ನುವುದು ಸ್ಬಷ್ಟ. ಜನರ ಮೂಲಭೂತ ಬೇಡಿಕೆಗಳೇನು? ಬಡತನದ ವಿಷಯಗಳು ಭಾವನಾತ್ಮಕ ವಿಷಯಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದು ಅನ್ನುವ ವಾಸ್ತವಿಕ ಸತ್ಯವನ್ನು ಅರ್ಥಮಾಡಿಕೊಂಡಿದೆ.
2. ರಾಜ್ಯದ ಜನರಿಗೆ ರಾಜ್ಯ ನಾಯಕರೇ ಬೇಗನೇ ಹತ್ತಿರವಾಗ ಬಲ್ಲರು ಅನ್ನುವ ಚುನಾವಣಾ ತಂತ್ರಗಾರಿಕೆಗಳು ಕಾಂಗ್ರೆಸ್‌ನ ಜಯಕ್ಕೆ ಕಾರಣವೂ ಆಯಿತು. ಆದರೆ ಈ ಕೊರತೆ ಎದ್ದು ಕಂಡಿದ್ದು ಬಿಜೆಪಿಯಲ್ಲಿ. ಸಿದ್ದಾಪುರ ಮೂಲ್ಕಿ ಅಂತಹ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರದ ಪ್ರಧಾನಿ ಗೃಹ ಸಚಿವರು ಹೊರ ರಾಜ್ಯದ ಮುಖ್ಯ ಮಂತ್ರಿಗಳು ಬಂದು ರೇೂಡ್ ಶೇೂ ಭಾಷಣ ಮಾಡಿ ಎಬ್ಬಿಸಬೇಕಾದ ಪರಿಸ್ಥಿತಿ. ಬರೇ ರೇೂಡ್ ಷೇೂ. ರಾಲಿಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಅನ್ನುವುದು ಈ ಚುನಾವಣಾ ಸೇೂಲು ಗೆಲುವಿನ ಸಂದೇಶವೂ ಹೌದು.
3 .ಕೊಟ್ಟ ಗ್ಯಾರಂಟಿಗಳನ್ನು ಪೂರೈಕೆ ಮಾಡಿದರೆ ಮಾತ್ರ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ ಇಲ್ಲವಾದರೆ ಬಿಜೆಪಿಗೆ ಇಂದು ಬಂದ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ