ಮಲೆನಾಡ ಬನದ ಮಧ್ಯದಲ್ಲೊಂದು ಅಂದದ ತಂಗುಮನೆ ಹೋಂ ಸ್ಟೇ

Upayuktha
0

Tangu Mane Home stay 

(Your another Home for every Vacation)


ಮಲೆನಾಡ ಬನದ ಮಧ್ಯದಲ್ಲಿ ಒಂದು ಸಾತ್ವಿಕ, ಸರಳ, ಸುಸಜ್ಜಿತ, ಪ್ರಕೃತಿ ಸ್ನೇಹಿ ಹೊಂ-ಸ್ಟೇ ನಿಮ್ಮ ಸೇವೆಗಾಗಿ ಸಜ್ಜುಗೊಂಡಿದೆ.


ಹೌದು, ತಂಗುಮನೆ ಇದು ಸಾತ್ವಿಕ ಹೋಂ ಸ್ಟೇ.  


ಕಾಡು, ಅಡಿಕೆ ತೋಟಗಳ ಮಧ್ಯೆ ನಿರ್ಮಲ ಪ್ರಕೃತಿಯ ನಡುವೆ ಇರುವ ಮೇಲುಕೊಪ್ಪ ಎಂಬ ಪುಟ್ಟ ಹಳ್ಳಿಯಲ್ಲಿರುವ ಈ ತಂಗುಮನೆ ಹೋಂ ಸ್ಟೇ ಯಾವುದೇ ತಾಮಸದ ಮಧ್ಯಪಾನ, ದೂಮಪಾನ, ಜೂಜು, ಮಾಂಸಾಹಾರಗಳ ಗೌಜುಗಳಿಲ್ಲದ ಸಾತ್ವಿಕ ಆದರಾತಿಥ್ಯಗಳಿಂದ ಕೂಡಿದ ನಿಜ ಅರ್ಥದ ತಂಗುವ ಮನೆ. 

(ಮದ್ಯಪಾನ, ಧೂಮಪಾನ, ಜೂಜು, ಮಾಂಸಾಹಾರಗಳು ಇಲ್ಲಿ ಸಂಪೂರ್ಣ ನಿಷಿದ್ಧ)


"ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ" ಎಂದು ಹಾಡಿದ ರಾಷ್ಟ್ರಕವಿ ಕುವೆಂಪುರವರ ಊರು ಕುಪ್ಪಳಿ-ಕವಿಶೈಲದಿಂದ 5 ಕಿಮೀ ದೂರದಲ್ಲಿ ಈ ತಂಗುಮನೆ ಇದೆ.


**


ತಂಗುಮನೆಯ ಸೌಲಭ್ಯಗಳು:

ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ...

ಪ್ರತಿಯೊಂದಕ್ಕೂ ಪ್ರತ್ಯೇಕ ಬಾತ್‌ರೂಂ ವ್ಯವಸ್ಥೆ ಇರುವ, ಮೂರು ಸುಸಜ್ಜಿತ ಕೊಠಡಿಗಳಿವೆ. ಪ್ರತಿಯೊಂದರಲ್ಲೂ ಮೂರು ಜನರ ಒಂದು ಪುಟ್ಟ ಫ್ಯಾಮಿಲಿ ತಂಗಬಹುದು.


ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲಿ...

ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಮಲೆನಾಡಿನ ಸ್ಥಳಿಯ ಕಾಯಿಪಲ್ಯೆಗಳಿಂದ ತಯಾರಿಸಿದ ಸರಳ ಆರೋಗ್ಯಕರ ಊಟ, ಉಪಹಾರ ಮತ್ತು ಪಾನಿಯಗಳು ದೊರೆಯಲಿದೆ. ಕುಳಿತು ಓದುವವರಿಗಾಗಿ ಒಂದು ಪುಟ್ಟ ಲೈಬ್ರರಿ ಇದೆ. ಭೈರಪ್ಪ, ಕಾರಂತ, ಕುವೆಂಪು, ಕೆ.ಟಿ.ಗಟ್ಟಿ, ಶ್ರೀವತ್ಸ ಜೋಶಿ, ಯಂಡಮೂರಿ... ಮುಂತಾದ ಸಾಹಿತಿಗಳ ಅನೇಕ ಕೃತಿಗಳ ಜೊತೆಗೆ ಧಾರ್ಮಿಕ ಹೊತ್ತಿಗೆಗಳು ನಿಮ್ಮ ಒಳ ಹಸಿವಿಗೆ ಓದುವ ಆಹಾರವಾಗಿ ತಂಗುಮನೆ ಯಲ್ಲಿವೆ.

ಆಗುಂಬೆಯಸ್ತಮಯ ದ್ರೋಣಪರ್ವತದುದಯ ತ್ಯಾಗರಾಜನ ಗಾನ ವಾಲ್ಮೀಕಿ ಕವನ ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ ಯೋಗಪುಲಕಾಂಕುರವ? ಮಂಕುತಮ್ಮ- ಡಿವಿಜಿ.


ಕವಿಶೈಲ, ಶೃಂಗೇರಿ, ಕವಲೇದುರ್ಗ, ಹರಿಹರಪುರ, ಕುಂದಾದ್ರಿ, ಶಕಟಪುರ, ಆಗುಂಬೆ, ಚಿಪ್ಪಲುಗುಡ್ಡ,.. ಮುಂತಾದ ಸುಮಾರು 40 ಕ್ಕೂ ಹೆಚ್ಚು ಧಾರ್ಮಿಕ ಮತ್ತು ಪಿಕ್‌ನಿಕ್ ಪ್ರವಾಸಿ ತಾಣಗಳು ತಂಗುಮನೆ ಯಿಂದ 40 ಕಿಮೀ ಸುತ್ತಳತೆಯ ಒಳಗಿನ ದೂರದಲ್ಲಿವೆ.

ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ.

ಬೆಳಗಿನ ಸುಪ್ರಭಾತಕ್ಕೆ ಹಕ್ಕಿಗಳ ಕಲರವ, ಪ್ರಕೃತಿಯ ಜೊತೆ ಮಾತಾಡುವವರೊಂದಿಗೆ ಸಂವಹನ ನೆಡೆಸುವ ಅಡಿಕೆ, ಮೆಣಸು, ಬಾಳೆ, ಮಾವು, ಹಲಸಿನ ಮೌನ ಮಾತಿನ ಮರ ಗಿಡ ಬಳ್ಳಿಗಳ ಉದ್ಯಾನವನವಿದೆ.

ಸುಂದರ ಸುತ್ತಾಟಕ್ಕೆ, ವಾಯುವಿಹಾರಕ್ಕೆ ತೂಟ, ಕಾಡುಗಳಲ್ಲಿ ಕಾಲುದಾರಿಗಳಿವೆ, ಟ್ರಾಫಿಕ್ಕೇ ಇಲ್ಲದ ಹಳ್ಳಿ ರಸ್ತೆಗಳಿವೆ.

**

ಉಚಿತ ವೈಫೈ ಸೌಲಭ್ಯ ಇದೆ. (ಅದು BSNL ರವರದು ನೆನಪಿರಲಿ!!!)

**

ನಗರ ಜೀವನದಿಂದ ಕೆಲ ಸಮಯ ಬಿಡುಗಡೆ ಬೇಕೆಂದು ಬಯಸುವ ನಿಮ್ಮ ಮತ್ತು ನಿಮ್ಮ ಕುಟುಂಬದವರು, ಬಂಧುಗಳು, ಸ್ನೇಹಿತರು ಅತ್ಯಂತ ಕಡಿಮೆ ಖರ್ಚಿನಲ್ಲಿ ಬಂದು ಉಳಿದುಕೊಳ್ಳಲು ತಂಗುಮನೆ ಬಾಗಿಲುಗಳು ತೆರೆದಿವೆ.

**

ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ತಂಗುಮನೆ ಮೊಬೈಲ್/ವಾಟ್ಸಪ್ : 9449631248

8277186406


ತಂಗುಮನೆ ಲ್ಯಾಂಡ್ ಲೈನ್ ದೂರವಾಣಿ:

+918181200732

ವಿಳಾಸ: ತಂಗುಮನೆ, ಮೇಲುಕೊಪ್ಪ, ಮೇಲುಕೊಪ್ಪ ಅಂಚೆ, ಕೊಪ್ಪ ತಾಲೂಕು 577 126, ಚಿಕ್ಕಮಗಳೂರು ಜಿಲ್ಲೆ.

ತಂಗುಮನೆಯ ದಾರಿ 

https://maps.app.goo.gl/r4bF2Xuq2hSXgmui6


-ಅರವಿಂದ ಸಿಗದಾಳ್, ಮೇಲುಕೊಪ್ಪ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top