ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ- 6ನೇ ದಿನದ ಧಾರ್ಮಿಕಸಭೆ
ಕುಲಶೇಖರ: ಜನ್ಮ ನೀಡಿದ ತಾಯಿ ಬೇರೆಬೇರೆಯಾಗಿರಬಹುದು. ಆದರೆ ಪರಮಾತ್ಮನನ್ನು ತಾಯಿಯ ರೂಪದಲ್ಲಿ ಆರಾಧನೆ ಮಾಡುತ್ತೇವೆ. ದೇವರು ಮಾಡುತ್ತಿರುವ ಪಾಲನೆ, ಮಮತೆಯ ಮಡಿಲು ಯಾರಿಗೆ ಅರ್ಥವಾಗುತ್ತಿದೆಯೋ ಅಂಥವರು ಮಕ್ಕಳನ್ನು ಸಂಸ್ಕಾರಯುತ ದಾರಿಯಲ್ಲಿ ಮುನ್ನಡೆಸುತ್ತಾರೆ. ಪರಮಾತ್ಮನ ಪರಿಚಯ ನಮಗೆ ಬೇಕು. ೩೩ ಕೋಟಿ ದೇವತೆಗಳಿದ್ದರೂ ಶಕ್ತಿ ಒಂದೇ. ಪರಮಾತ್ಮನ ಸತ್ಯ ಪರಿಚಯ ಆದಾಗ ದೇವರ ಶಕ್ತಿಯ ಬಗ್ಗೆ ಗೊಂದಲ ಬರುವುದಿಲ್ಲ. ಪರಮಾತ್ಮ ಪರಮಜ್ಯೋತಿ ಸ್ವರೂಪ ಎಂದು ಮಂಗಳೂರು ಬ್ರಹ್ಮಕುಮಾರೀಸ್ ಇದರ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ನುಡಿದರು.
ಅವರು ಮೇ14ರಿಂದ ಮೊದಲ್ಗೊಂಡು 25ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮಾಣಿಲ ಶ್ರೀಧಾಮ ಶೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ಉತ್ಕೃಷ್ಠವಾದ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಪರಂಪರೆ ಇಂದು ವಿಶ್ವವ್ಯಾಪಿಯಾಗಲು ಅದಕ್ಕೆ ವ್ಯಾಕುಲತೆ ನೀಡಿದ ತಾಯಿಯೇ ಕಾರಣ. ಜಗತ್ತಿನಲ್ಲಿ ಮಾತೃಶಕ್ತಿಗೆ ಗೌರಯುತವಾದ ಸ್ಥಾನವಿದ್ದು, ತಾಯಿಯ ಒಂದೊಂದು ಹೆಜ್ಜೆಯ ಹಿಂದೆ ತ್ಯಾಗ, ಕರುಣೆ, ಪ್ರೀತಿ ಅಡಗಿದೆ ಎಂದರು.
ಮಂಗಳೂರು ಅಮೃತಾನಂದಮಯಿ ಮಠದ ಶ್ರೀ ಮಾತಾ ಸಂಪೂಜ್ಯ ಸ್ವಾಮಿನಿ ಆಶೀರ್ವಚನ ನೀಡಿ, ಮನಸ್ಸನ್ನು ತಂಪಾಗಿರಿಸುವ ಶಕ್ತಿ ಆದ್ಯಾತ್ಮಕ್ಕಿದೆ ಎಂದರು. ಬಿಜೆಪಿ ಪ್ರಧಾನ ಕಾಯದರ್ಶಿ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಮೆಸ್ಕಾಂನ ಮುಖ್ಯ ಅಭಿಯಂತರೆ ಪುಷ್ಪಾ, ಪೊಲೀಸ್ ಉಪನಿರೀಕ್ಷಕಿ ಭಾರತಿ ಜಿ., ಮನಪಾ ಸದಸ್ಯೆಯರಾದ ಕಾವ್ಯ ನಟರಾಜ್ ಆಳ್ವ, ವನಿತಾ ಪ್ರಸಾದ್, ಶಕಿಲಾ ಕಾವ, ಲೀಲಾವತಿ ಪ್ರಕಾಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರೂಪಾ ಡಿ. ಬಂಗೇರ, ಕಮಲಾಕ್ಷಿ ವಿ. ಕುಲಾಲ್ ವರ್ಕಾಡಿ, ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಿ., ಮಮತಾ ಗುಜರನ್, ಮುಂಡ್ಕೂರು ದೇವಸ್ಥಾನದ ಆಡಳಿತ ಮೊಕ್ತೇಸರಿ ಹರ್ಷಿಣಿ ಗೋಪಾಲ ಮೂಲ್ಯ, ಉದ್ಯಮಿ ಜ್ಯೋತ್ಸ್ನಾ ಗೋಪಾಲ್, ಸುಲೋಚನಾ ಕೋಡಿಕಲ್, ಡಾ| ಕಾಜಲ್, ಸಾವಿತ್ರಿ ಎಂ. ಹಾಂಡ, ಮಾತೃಸಂಘದ ರೇಖಾ ಸಂಜೀವ, ಉಮಾ ಚಂದ್ರಶೇಖರ್, ಮಂಗಳೂರು ದೇವಿ ದೇವಸ್ಥಾನದ ಅಧ್ಯಕ್ಷೆ ರೂಪಾ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ರಕ್ಷಾ ಎಸ್. ಕುಲಾಲ್ ಪ್ರಾರ್ಥಿಸಿ, ಶ್ರೀ ವೀರನಾರಾಯಣ ಮಾತೃಮಂಡಳಿ ಅಧ್ಯಕ್ಷೆ ಗೀತಾ ಮನೋಜ್ ಸ್ವಾಗತಿಸಿ, ಡಾ| ನಮೃತಾ ಎನ್. ಕುಲಾಲ್ ನಿರೂಪಿಸಿದರು.
ಬೆಳಿಗ್ಗೆ ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ, ಸಂಜೆ ಶ್ರೀದುರ್ಗಾನಮಸ್ಕಾರ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ನೃತ್ಯ ವೈಭವ ಸಂಜೆ ನೃತ್ಯ ಸಂಗೀತ ವೈಭವ ಜರಗಿತು.
ಇಂದಿನ ಕಾರ್ಯಕ್ರಮ
ಮೇ 20ರ ಸಂಜೆಯ ಧಾರ್ಮಿಕಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಭಾಶಂಸನೆಗೈಯ್ಯಲಿದ್ದು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮೆಸ್ಕಾಂ ಆಡಳಿತ ನಿರ್ದೇಶಕ ಮಂಜಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಶಾಸಕ ರಾಜೇಶ್ ನಾಕ್, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮನುಷ್ಯ ಕೇವಲ ಸಂಸ್ಕಾರಯುತವಾಗಿ ಬೆಳೆಯುವುದಲ್ಲ. ಜತೆಗೆ ಸಮಾಜಮುಖಿಯಾಗಿ ಬೆಳೆಯಬೇಕು. ಧರ್ಮ ಇದ್ದಲ್ಲಿ ಭಗವತ್ ಸಾನಿಧ್ಯ ಬೆಳೆಯುತ್ತದೆ. ಸತ್ಯ, ದಾರ್ಶನಿಕ, ಸಂತ, ಧರ್ಮ ಪರಂಪರೆ ಹೊಂದಿರುವ ನಾಡುವ ನಮ್ಮದು. ದೇಶದಲ್ಲಿರುವಷ್ಟು ಆದ್ಮಾತ್ಮ, ಬಂಧುತ್ವ, ಮಮಕಾರ ಬೇರೆಲ್ಲೂ ಇಲ್ಲ. ಹುಟ್ಟು ಮುಖ್ಯವಲ್ಲ. ಮಾಡಿದ ಸಿದ್ದಿಸಾಧನೆಯಿಂದ ವ್ಯಕ್ತಿತ್ವ ಮೇಲೆ ಬರುತ್ತದೆ. ಇಂತಹ ದೈವೀ ಕಾರ್ಯದ ಮೂಲಕ ಸಜ್ಜನರು ಒಂದೇ ಕಡೆ ಸೇರಿದಾಗ ಅಲ್ಲಿ ಪಾವಿತ್ರತ್ಯತೆ ನೆಲೆಯಾಗುತ್ತದೆ ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ