ಜಾತಿ-ಧರ್ಮ- ರಾಜಕೀಯಗಳ ಮಿಶ್ರಣ ಎಷ್ಟು ಅಪಾಯಕಾರಿ...

Upayuktha
0

ಈ ಜಾತಿ ಧಮ೯ ರಾಜಕೀಯ ಅನ್ನುವ ಮೂರು ಸಾಮಾಜಿಕ ಧಾಮಿ೯ಕ ರಾಜಕೀಯ ಕಟ್ಟು ಪಾಡುಗಳು ಅವುಗಳ ಪರಿಧಿಯಲ್ಲಿಯೇ ಕಾರ್ಯ ನಿವ೯ಹಿಸಿದರೆ ದೇಶಕ್ಕೂ ಹಿತ ಸಮಾಜಕ್ಕೂ ಹಿತ; ಮಾತ್ರವಲ್ಲ ಈ ಮೂರು ವ್ಯವಸ್ಥೆಗಳು ಸ್ವತಂತ್ರವಾಗಿ ಆರೇೂಗ್ಯ ಪೂಣವಾಗಿ ಬೆಳೆಯಲು ಸಾಧ್ಯ. ಒಂದು ವೇಳೆ ಈ ಮೂರು ಸಂಸ್ಥೆಗಳು ಒಂದರ ಮೇಲ್ಲೊಂದು ಪ್ರಭಾವ ಬೀರಲು ಹೊರಟರೆ ಈ ಮೂರು ಸಂಸ್ಥೆಗಳು ಅವನತಿ ಕಾಣ ಬೇಕಾಗುತ್ತದೆ ಮಾತ್ರವಲ್ಲ ಅರಾಜಕತೆಯನ್ನು ಸೃಷ್ಟಿವುದಂತು ಶತ ಸಿದ್ಧ ಅನ್ನುವುದನ್ನು ನಮ್ಮ ಇತಿಹಾಸವೇ ಹೇಳಿದ ಸತ್ಯದ ಮಾತು.ಈ ವಾಸ್ತವಿಕತೆಯ ಪರಿಚಯ ನಿಧಾನವಾಗಿ ನಮ್ಮ ಗಮನಕ್ಕೂ ಬರಲು ಶುರುವಾಗಿದೆ.


ಧಮ೯ ಜಾತಿ ಸಂಸ್ಥೆಗಳು ಅಂದಾಗ ಅದಕ್ಕೆ ಅದರದ್ದೆ ಆದ ಧ್ಯೇಯ ಉದ್ದೇಶ ಗುರಿಗಳಿರುತ್ತದೆ.ಇದಕ್ಕೆ ಪೂರಕವಾಗಿ ಕಾರ್ಯ ನಿವ೯ಹಿಸುವ ಸಂಘ ಸಂಸ್ಥೆಗಳನ್ನು ರೂಪಿಸಿಕೆುಾಂಡಿರುತ್ತವೆ.ಇದರಿಂದಾಗಿ ನಮ್ಮ ಧಾಮಿ೯ಕ ಜಾತಿ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಅದೇ ರೀತಿಯಲ್ಲಿ ನಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ರಾಜಕೀಯ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿರುತ್ತವೆ.ಅವುಗಳು ಕೂಡಾ ತಮ್ಮದೆಯಾದ ಪರಿಧಿಯಲ್ಲಿ ಧ್ಯೇಯ ಉದ್ದೇಶ ಗುರಿಗಳನ್ನು ಹಿಡಿದುಕೊಂಡು ಕಾರ್ಯ ನಿವ೯ಹಿಸಬೇಕು. ಇದು ಆರೇೂಗ್ಯ ಪೂಣ೯ ಸಮಾಜದ ಲಕ್ಷಣ. ಆದರೆ ಇತ್ತೀಚಿನ ಕಾಲಮಾನದಲ್ಲಿ ಈ ಮೂರು ಸಂಸ್ಥೆಗಳು ಒಂದರ ಮೇಲೊಂದು ಇನ್ನೊಂದು ಸವಾರಿ ಮಾಡಿ ತನ್ನ ಹಿಡಿತಕ್ಕೆ ತೆಗೆದು ಕೊಳ್ಳುವ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು ನಿಜಕ್ಕೂ ರಾಜಕೀಯ ವ್ಯವಸ್ಥೆಗೂ ಅಪಾಯಕಾರಿ ಮಾತ್ರವಲ್ಲ ಧಮ೯ ಜಾತಿ ಕಟ್ಟು ಪಾಡುಗಳ ಅಸ್ತಿತ್ವಕ್ಕೂ ಕಂಟಕಪ್ರಾಯ.


ಹಾಗಾಗಿ ಇಂದು ಧಮ೯ ಜಾತಿ ರಾಜಕೀಯ ಸಂಘಟನೆಗಳ ನಡುವೆ ಸಂಘಷ೯ಕ್ಕೆ ಕಾರಣವಾಗುತ್ತಿರುವುದಂತೂ ಸತ್ಯ.ಈ ಧಮ೯ ಜಾತಿ ಸಂಘ ಸಂಸ್ಥೆಗಳು ರಾಜಕೀಯದ ಹಿಡಿತದಿಂದ ಸಂಪೂರ್ಣವಾಗಿ ಹೊರಗಿದ್ದು ನಮ್ಮ ರಾಜಕೀಯ ವ್ಯವಸ್ಥೆಯ ಹುಳುಕನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿಯನ್ನು  ಮಾಡಬೇಕೇ ಹೊರತು ರಾಜಕೀಯ ಪಕ್ಷಗಳು ಮಾಡ ಬೇಕಾದ ಕೆಲಸದಲ್ಲಿ ನೇರವಾಗಿ ನಾವು ಭಾಗಿಗಳು ಆಗುವುದಲ್ಲ. ಇದರಿಂದಾಗಿ ರಾಜಕೀಯ ಪಕ್ಷಗಳು ಮಾತ್ರ ಹಾಳಾಗುವುದಲ್ಲ. ಬದಲಾಗಿ ಧಮ೯ ಜಾತಿ ವ್ಯವಸ್ಥೆಗಳು ಕೂಡಾ ದಿಕ್ಕು ತಪ್ಪಿ ನಮ್ಮ ನಡುವೆ ಸಂಘಷ೯ದ ಬದುಕಿಗೆನಾವೇ ಕಾರಣೀಕತ೯ರಾಗುತ್ತಿರುವುದು ವಿಷಾದನೀಯ ಸ್ಥಿತಿ. ಒಂದು ವೇಳೆ ನಮಗೆ ಈ ಜಾತಿಧಮ೯ ಸಂಸ್ಥೆಗಳ ಒಳಗೆ ಕೂತು ವ್ಯಹಹರಿಸಲು ಸಾಧ್ಯವಿಲ್ಲ ಅನ್ನುವುದಾದರೆ ನಾವು ನೇರವಾಗಿ ಈ ಸಂಕೇೂಲೆಯಿಂದ ಹೊರಗೆ ಬಂದು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ಸವ೯ರಿಗೂ ಹಿತ. ಆದರೆ ಧಮ೯ ಜಾತಿ ರಾಜಕೀಯ ಎಂಬ ಮೂರು ದೇೂಣಿಯಲ್ಲಿ ಕೂತು ಈ ದೇಶವನ್ನು ಉದ್ದರಿಸುತ್ತೇನೆ ಅನ್ನುವ ಮುಖವಾಡ ಹಾಕಿ ಕೊಳ್ಳುವುದುಖಂಡಿತವಾಗಿಯೂ ಈ ಮೂರು ಕ್ಷೇತ್ರಗಳಿಗೆ ನಾವು ಮಾಡುವುದು ತೀರ ಅನ್ಯಾಯದ ಕೆಲಸ ಅನ್ನುವುದು ನನ್ನ ಅಭಿಮತ.

-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ. ಉಡುಪಿ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top