ಆರೋಗ್ಯ: ಹಾರ್ಟ್ ಪಾಲ್ಪಿತೇಶನ್ಸ್ (Heart palpitations)- ಹಾಗಂದರೇನು?

Upayuktha
0

ಹಾರ್ಟ್ ಪಾಲ್ಪಿಟೇಶನ್ಸ್‌ ಎಂದರೆ ಹೃದಯ ಬಡಿತ ವೇಗವಾಗುವ ಭಾವನೆಯನ್ನು (fast pounding or flip flopping heart beat) ಸೂಚಿಸುತ್ತದೆ. ಇದಕ್ಕೆ ಸಾಮಾನ್ಯ ಕಾರಣವೆಂದರೆ ಆತಂಕ (anxiety). ಇದು ಹಗಲು ಅಥವಾ ರಾತ್ರಿ ಕಾಣಸಿಕೊಳ್ಳಬಹುದು. ರಾತ್ರಿಯ ಸಮಯದಲ್ಲಿ ಹೃದಯ ಬಡಿತವು ಜಾಸ್ತಿ ಆದರೆ ಭಯ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.


ವಯಸ್ಕರಲ್ಲಿ ಸಾಮಾನ್ಯ ಹೃದಯ ಬಡಿತವು ನಿಮಿಷಕ್ಕೆ 60 ರಿಂದ 100 ಬಡಿತಗಳ ನಡುವೆ ಇರುತ್ತದೆ. ಸಾಮಾನ್ಯವಾಗಿ ನಾವು ವಿಶ್ರಾಂತಿ ಪಡೆಯುತ್ತಿರುವಾಗಲೂ ಹೃದಯ ಬಡಿತಗಳು ಸ್ಪಷ್ಟವಾಗಿ ಅನುಭವಿಸಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ವೇಗವಾಗಿ ನಿರಂತರವಾಗಿ ಎದೆ ಬಡಿತವನ್ನು ಅನುಭವಿಸಿರಬಹುದು ಹಠಾತ್ತಾಗಿ ಕೆಲವು ಸೆಕೆಂಡುಗಳ ಕಾಲ. ಇದು ಯಾವುದೇ ಹೃದಯದ ಸಮಸ್ಯೆಯ ಬಗ್ಗೆ ಯೋಚಿಸುವಂತೆ ಮಾಡಿ ಭಯ ಮತ್ತು ಗಾಬರಿ ಉಂಟು ಮಾಡಬಹುದು.


ಹಾರ್ಟ್ ಪಾಲ್ಪಿತೇಶನ್ಸ್‌ಗೆ ಕಾರಣಗಳು-


ಆತಂಕ

ಭಯ (fear/panic)

ಗರ್ಭಾವಸ್ಥೆಯಲ್ಲಿ ಹೆಚ್ಚಿದ ಕೆಫೀನ್ ಸೇವನೆ

ಮದ್ಯ (alcohol intake)

ಮಸಾಲೆ ಆಹಾರ

ನಿರ್ಜಲೀಕರಣ

ಕಡಿಮೆ ನೀರಿನ ಬಳಕೆ

ಒತ್ತಡ

ಕಡಿಮೆ ಎಲೆಕ್ಟ್ರೋಲೈಟ್ ಸಮತೋಲನ

ಹೆಚ್ಚಿದ ಅಥವಾ ಕಡಿಮೆ ರಕ್ತದೊತ್ತಡ

ಯಾವುದೇ ಹೃದಯರಕ್ತನಾಳದ ಕಾಯಿಲೆಗಳು

ಕೆಲವು ಔಷಧಗಳು

ಜ್ವರ

ಶೀತ ಅಥವಾ ಕೆಮ್ಮು ಸಿರಪ್

ವಿಪರೀತ ಬೆವರುವುದು

ರಕ್ತಹೀನತೆ

ಕಡಿಮೆ ವ್ಯಾಯಾಮ

ಥೈರಾಯ್ಡ್ ಸಮಸ್ಯೆ

ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿದ್ಧರೆ

ದೇಹದಲ್ಲಿ ಆಮ್ಲಜನಕದ ಮಟ್ಟದಲ್ಲಿ ಇಳಿಕೆ

ಋತುಬಂಧ ಸಮಯದಲ್ಲಿ (menopause) ಹಾರ್ಮೋನುಗಳ ಬದಲಾವಣೆಗಳು


ದೇಹವು ನಿರ್ಜಲೀಕರಣಗೊಂಡರೆ ಹೃದಯವು ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ. ಇದು ಜಾಸ್ತಿ ಹೃದಯ ಬಡಿತವನ್ನು ಉಂಟುಮಾಡಬಹುದು. ಇದು ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಇರುತ್ತದೆ ಮತ್ತು ಅದು ಇದ್ದಕ್ಕಿದ್ದಂತೆ ಎದೆಯಲ್ಲಿ ವೇಗವಾಗಿ ಬಡಿತವನ್ನು ಅನುಭವಿಸಬಹುದು. ಇದು ಸಾಮಾನ್ಯವಾಗಿ ಕಡಿಮೆ ಅವಧಿಯನ್ನು ಹೊಂದಿರುತ್ತದೆ . ತಾನಾಗಿಯೇ ಕಡಿಮೆಯಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಅಥವಾ ಮಲಗಿರುವಾಗ ಸಂಭವಿಸಬಹುದು.ಗರ್ಭಾವಸ್ಥೆಯಲ್ಲಿ, ಮಗುವನ್ನು ಬೆಂಬಲಿಸಲು ರಕ್ತ ಪರಿಚಲನೆಯು ಹೆಚ್ಚಾಗುತ್ತದೆ ಆದ್ದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ.ಆದ್ದರಿಂದ ಇದನ್ನು ಅನೇಕ ಕಾರಣಗಳಿಂದ ಕಾಣಬಹುದು.


ಹೃದಯ ಬಡಿತದ ನಿರ್ವಹಣೆ


ನೀವು ಯಾವುದೇ ಒತ್ತಡ ಅಥವಾ ಆತಂಕವನ್ನು ಹೊಂದಿದ್ದರೆ, ಯೋಗ ಧ್ಯಾನ, ಸಾವಧಾನತೆ ವ್ಯಾಯಾಮದಂತಹ (mindfulness exercise and meditation) ಶಾಂತಗೊಳಿಸುವ ಚಟುವಟಿಕೆಗಳು ಮುಖ್ಯವಾಗಿದೆ. ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು ಹೃದಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಫೀನ್ ಹೊಂದಿರುವ ಪಾನೀಯಗಳು ಅಥವಾ ಕಾಫಿಯ ಸೇವನೆಯನ್ನು ಕಡಿಮೆ ಮಾಡಿ ಮತ್ತು ಆಹಾರದ ಬದಲಾವಣೆಗಳನ್ನು ಆಗತ್ಯ. ಉತ್ತೇಜಕಗಳು (food stimulants or triggers) ವಿಶೇಷವಾಗಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಮಾಡಬೇಕು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬೇಕು. ನಿಯಂತ್ರಣ, ನಿಯಮಿತ ವ್ಯಾಯಾಮ, ವಿಶ್ರಾಂತಿ ತಂತ್ರಗಳನ್ನು (relaxation techniques) ಅಭ್ಯಾಸ ಮಾಡುವುದು, ದೀರ್ಘ ಉಸಿರಾಟದ ವ್ಯಾಯಾಮಗಳು, ಸಾಕಷ್ಟು ನೀರಿನ ಸೇವನೆ, ರಕ್ತಹೀನತೆಯನ್ನು ತಪ್ಪಿಸಲು ತಾಜಾ ಹಣ್ಣುಗಳ ತರಕಾರಿಗಳು ಮತ್ತು ಬೀಜಗಳನ್ನು ತಿನ್ನುವುದು, ಸರಿಯಾದ ವಿಶ್ರಾಂತಿ ಮತ್ತು ನಿದ್ರೆ. ಪದೇ ಪದೇ ಹಾರ್ಟ್ ಪಾಲ್ಪಿತೇಶನ್ಸ್ ಅನುಭವ ಆದರೆ ಯಾವುದೇ ಹೃದ್ರೋಗ ಸಮಸ್ಯೆಗಳಿದ್ದಲ್ಲಿ ಹೃದ್ರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸರಳ ಕ್ರಮಗಳನ್ನು ತೆಗೆದುಕೊಂಡ ನಂತರವೂ ಕಡಿಮೆಯಾಗದಿದ್ದರೆ ತಪಾಸಣೆಯ ಅಗತ್ಯವಿರುತ್ತದೆ.

-ಡಾ. ರಶ್ಮಿ ಭಟ್, ಸುಳ್ಯ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top