ದಕ್ಷಿಣ ಕನ್ನಡ: ಜಿಲ್ಲಾ ಗೃಹರಕ್ಷಕದಳದ ವಿಟ್ಲ ಘಟಕದ ಗೃಹರಕ್ಷಕರಾಗಿದ್ದ ಪ್ರಕಾಶ್ ಮೆ.ನಂ 410 ಇವರು ದಿನಾಂಕ 04-02-2022 ರಂದು ಬಂಟ್ವಾಳ ಆರ್.ಟಿ.ಓ ಕರ್ತವ್ಯದಲ್ಲಿರುವಾಗ ಅಪಘಾತದಿಂದ ಮೃತಹೊಂದಿರುತ್ತಾರೆ. ಇವರ ಕುಟುಂಬಕ್ಕೆ ಸರಕಾರದಿಂದ ಕೇಂದ್ರ ಕಛೇರಿಯ ಮುಖಾಂತರ 5 ಲಕ್ಷ ರೂ. ಪರಿಹಾರಧನ ಮಂಜುರಾಗಿದ್ದು, ಮಂಜೂರಾತಿ ಪತ್ರವನ್ನು ದಿನಾಂಕ 23-05-2023 ನೇ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್ , ಮಂಗಳೂರು ಇಲ್ಲಿ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ದಿ|| ಪ್ರಕಾಶ್ ಅವರ ಪತ್ನಿ ಶ್ರೀಮತಿ ಸೌಮ್ಯ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಛೇರಿಯ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಮೀನಾಕ್ಷಿ, ಗೃಹರಕ್ಷಕರಾದ ದಿವಾಕರ್, ಗಿರೀಶ್, ಸುಲೋಚನ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ