ಮೇ 26, 27, 28: ಉಡುಪಿಯಲ್ಲಿ ಪ್ರವೀಣಾ ಮೋಹನ್ ಅವರ ಕಲಾಕೃತಿಗಳ ಪ್ರದರ್ಶನ

Upayuktha
0

ಉಡುಪಿ: ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ವಿವಿಧ ಬಗೆಯ ವರ್ಣಚಿತ್ರಗಳ ಕಲಾವಿದೆ ವೀಣಾ ಮೋಹನ್ ಅವರ ಕಲಾಕೃತಿಗಳ ಪ್ರದರ್ಶನ ಅದಿತಿ ಗ್ಯಾಲರಿಯಲ್ಲಿ ಗುರುವಾರ ಸಂಜೆ (ಮೇ 25) 5:15ಕ್ಕೆ ಉದ್ಘಾಟನೆಗೊಳ್ಳಲಿದೆ. ಮೂಡುಬಿದಿರೆಯ ಆಳ್ವಾಸ್‌ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.


ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಮತ್ತು ಮಂಗಳೂರಿನ ಲ್ಯಾಮಿನ್ ಫ್ರೇಮ್ ಗ್ಯಾಲರಿಯ ಮಾಲೀಕ ಕೆ. ನರೇಂದ್ರ ಶೆಣೈ ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲಿದ್ದಾರೆ ಎಂದು ಅದಿತಿ ಟ್ರಸ್ಟ್‌ನ ಮುಖ್ಯಸ್ಥರಾದ ಡಾ. ಕಿರಣ್ ಆಚಾರ್ಯ ತಿಳಿಸಿದ್ದಾರೆ.


ಈ ಕಲಾಕೃತಿಗಳ ಪ್ರದರ್ಶನ ಮೇ 26, 27 ಮತ್ತು 28ರಂದು ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ಕುಂಜಿಬೆಟ್ಟುವಿನ ಬಿ.ಎಡ್ ಕಾಲೇಜಿನ ಅದಿತಿ ಗ್ಯಾಲರಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ.


ಕಲಾವಿದೆ ಪ್ರವೀಣಾ ಮೋಹನ್ ಅವರು ಖ್ಯಾತ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಅವರ ಪತ್ನಿ. ಇದೀಗ ಮೂರು ವರ್ಷಗಳ ಅಂತರದ ಬಳಿಕ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.


ಈ ಪ್ರದರ್ಶನದ ಥೀಮ್‌- 'ದೇವತಾ'. ಸಾಂಪ್ರದಾಯಿಕ ಶೈಲಿಯಲ್ಲಿ ದೇವರು ಮತ್ತು ದೇವತೆಗಳು - ಅಕ್ರಿಲಿಕ್ ಬಣ್ಣಗಳೊಂದಿಗೆ ಕ್ಯಾನ್ವಾಸ್‌ನಲ್ಲಿ ಚಿತ್ರಿಸಲಾಗಿದೆ.


ಪ್ರವೀಣಾ ಮೋಹನ್ ಅವರ ಬಗ್ಗೆ:

ಸಾ೦ಪ್ರದಾಯಿಕ ಚಿತ್ರಗಳಿಗೆ ಆಧುನಿಕ ಸ್ಪರ್ಶ:

ರೇಖಾಚಿತ್ರ, ಜಲವರ್ಣ, ಚಾರ್ಕೋಲ್‌ , ಫ್ಯಾಬ್ರಿಕ್‌ , ಪಾಟ್‌ ಪೇ೦ಟಿಂಗ್‌, ಚುಕ್ಕೆ ಚಿತ್ರ, ಎಕ್ರಲಿಕ್‌, ಲೋಹ ಉಬ್ಬುಶಿಲ್ಪ ಹೀಗೆ ಹಲವು ಮಾಧ್ಯಮಗಳಲ್ಲಿ ಪರಿಣತಿ ಪಡೆದಿದ್ದಾರೆ. ಇವರು ಪ್ರಬುದ್ಧ ಭರತನಾಟ್ಯ ಕಲಾವಿದೆಯೂ ಹೌದು. ರಾಜ್ಯದ ವಿವಿಧ ಕಲಾ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಮದುವೆಯ ಬಳಿಕ ಭರತನಾಟ್ಯದಲ್ಲಿ ವಿದುಷಿ ಪದವಿ ಪ್ರಾಪ್ತಿಸಿಕೊ೦ಡ ಸಾಧಕಿ. ನೃತ್ಯ ಮತ್ತು ಚಿತ್ರಕಲೆಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದುಕೊಡುತ್ತಿರುವ ಕಲಾ ಶಿಕ್ಷಕಿಯೂ ಹೌದು. ಕ್ಯಾಮ್ಲಿನ್‌ ಕಂಪೆನಿಗೆ ಕಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಕಲಾ ಪ್ರದರ್ಶನವನ್ನು ನಡೆಸಿರುವ ಇವರ ಕಲಾಕೃತಿಗಳು ದೇಶ- ವಿದೇಶಗಳ ಕಲಾರಸಿಕರ ಸಂಗ್ರಹದಲ್ಲಿವೆ.


ಉಡುಪಿ ಎ೦.ಜಿ.ಎ೦ ಕಾಲೀಜಿನ ಸ್ವರ್ಣ ಮಹೋತ್ಸವದ ಲಾ೦ಛನ ನಿರ್ಮಾಣ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಕಲಿಕೆಗೆ ವಯೋಮಿತಿ ಇಲ್ಲವೆ೦ಬ ಮಾತನ್ನು ಎತ್ತಿ ಹಿಡಿದ ಪ್ರವೀಣಾ ಮೋಹನ್‌ ಪರ್ಷಿಯನ್‌ ಮತ್ತು ತ೦ಜಾವೂರು ಕಲಾ ರಚನೆಯ ಸೂಕ್ಷ್ಮಗಳನ್ನು ಕಲಿತು ಈಗಾಗಲೇ ತನ್ನ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ನೀಡುತ್ತಿದ್ದಾರೆ. ಉಪಾಧ್ಯಾಯ ಸಮ್ಮಾನ್‌ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ-ಸಮ್ಮಾನಗಳ ಪುರಸ್ಕೃತರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top