ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿಬಿಎ- ಬಂದರು, ಶಿಪ್ಪಿಂಗ್ ಮ್ಯಾನೇಜ್ಮೆಂಟ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ 4 ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಬ್ಯಾಚ್ ಅಧ್ಯಾಪಕರಾದ ಪ್ರೊ. ಮೇಘಶ್ರೀ ಮತ್ತು ಪ್ರೊ. ಭವ್ಯ ಕೃಷ್ಣ ಅವರೊಂದಿಗೆ ಮಂಗಳೂರಿನ KIOCL ಲಿಮಿಟೆಡ್, ಪಣಂಬೂರಿಗೆ ಭೇಟಿ ನೀಡಿದರು.
ಈ ಭೇಟಿಯನ್ನು ಪರಸ್ಪರ ಸಂವಾದ, ಕೆಲಸದ ವಿಧಾನಗಳು ಮತ್ತು ಉದ್ಯೋಗದ ಅಭ್ಯಾಸಗಳ ಮೂಲಕ ಪ್ರಾಯೋಗಿಕ ಕಲಿಕೆಗೆಗಾಗಿ ಆಯೋಜಿಸಲಾಗಿತ್ತು. ಇದು ವಿದ್ಯಾರ್ಥಿಗಳು ತಮ್ಮ ಕಾಲೇಜು ತರಗತಿಗಳಲ್ಲಿ ಕಲಿಸುವ ಪಠ್ಯದ ಜ್ಞಾನದ ಜತೆಗೆ ಪ್ರಸ್ತುತ ಕೆಲಸದ ವಿಧಾನಗಳಿಗೆ ತೆರೆದುಕೊಳ್ಳುವ ಅವಕಾಶ ಕಲ್ಪಿಸುತ್ತದೆ.
ವಿದ್ಯಾರ್ಥಿಗಳು ಮೊದಲು KIOCL ಲಿಮಿಟೆಡ್‌ನಲ್ಲಿ ತರಬೇತಿ ವಿಭಾಗಕ್ಕೆ ಭೇಟಿ ನೀಡಿದರು. ತರಬೇತಿ ಮತ್ತು ಸುರಕ್ಷತಾ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶ್ರೀ ಶಿವರಾಜು ಅವರು ಕಂಪನಿಯ ಬಗ್ಗೆ ಮಾಹಿತಿ ನೀಡಿದರು.
ನಂತರ ವಿದ್ಯಾರ್ಥಿಗಳು ಅದಿರು ಸಂಗ್ರಹಣಾ ಕೇಂದ್ರ, ಕ್ಯಾಪ್ಟಿವ್ ಪವರ್ ಪ್ಲಾಂಟ್, ಪ್ಯಾಲೆಟ್ ಪ್ಲಾಂಟ್, ಬಾಲ್ ಮಿಲ್, ಫಿಲ್ಟರೇಶನ್ ಯುನಿಟ್, ವ್ಯಾಕ್ಯೂಮ್ ಫಿಲ್ಟರ್‌ಗಳು ಮತ್ತು ಬ್ಲಾಸ್ಟ್ ಫರ್ನೇಸ್‌ಗೆ ಭೇಟಿ ನೀಡಿದರು.
• ಈ ಕೈಗಾರಿಕಾ ಭೇಟಿಯ ಮೂಲಕ ವಿದ್ಯಾರ್ಥಿಗಳು ಕಬ್ಬಿಣದ ಅದಿರು ಉತ್ಪಾದನಾ ಪ್ರಕ್ರಿಯೆಯ ಮಾಹಿತಿಯನ್ನು ಪಡೆದುಕೊಂಡರು.
• ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಮತ್ತು ನಿಜ ಜೀವನದ ಸನ್ನಿವೇಶದಲ್ಲಿ ಕೆಲಸ ಮಾಡುವ ರೀತಿಯಲ್ಲಿ ಒಳನೋಟವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.
• ಉದ್ಯಮದಲ್ಲಿ ಎದುರಿಸುತ್ತಿರುವ ತೊಂದರೆಗಳು ಮತ್ತು ಈ ತೊಂದರೆಗಳನ್ನು ನಿವಾರಿಸಲು ಸಾಧ್ಯವಿರುವ ಪರಿಹಾರಗಳ ಕುರಿತು ಚರ್ಚೆ ನಡೆಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ