ಸುರತ್ಕಲ್: ಸೃಹದಯರ ಮನ ತಣಿಸುವ ಸಂಗೀತದ ಉಪಾಸನೆ ನಿರಂತರವಾಗಬೇಕು. ಯುವ ಶಾಸ್ತ್ರೀಯ ಸಂಗೀತದ ಕಲಾವಿದರಿಗೆ ಅವಕಾಶಗಳು ಲಭ್ಯವಾಗುತ್ತಿರುವುದು ಸ್ವಾಗತಾರ್ಹ ಎಂದು ಎಂ.ಆರ್.ಪಿ.ಎಲ್ ಸಂಸ್ಥೆಯ ಅಧಿಕಾರಿ ರೊ.ಮುರಳೀಧರ ಅಡಕೋಳಿ ನುಡಿದರು.
ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ನಡೆಯುತ್ತಿರುವ ಉದಯರಾಗ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ–43ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅನ್ವಿತಾ, ತಲ್ಪಣಾಜೆ ಅವರಿಂದ ಹಾಡುಗಾರಿಕೆ ನಡೆಯಿತು. ಸುನಾದ ಪಿ ಎಸ್ ಮಾವೆ ವಯಲಿನ್ ನಲ್ಲಿ ಶಾಶ್ವತ್, ಕಂಬಾರ ಮೃದಂಗದಲ್ಲಿ ಸಹಕರಿಸಿದರು.
ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಕೆ. ರಾಜಮೋಹನ್‍ರಾವ್, ಸಂಗೀತ ಗುರುಗಳಾದ ಗೀತಾ ಸಾರಡ್ಕ, ಉಡುಪಿ ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಶ್ರೀ ನಾಟ್ಯಾಂಜಲಿ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಕೆ.ಚಂದ್ರಶೇಖರ ನಾವಡ, ಕೃಷ್ಣಕುಮಾರಿ ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ(ರಿ) ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ