ವೃತ್ತಿಪರತೆ ಹೆಚ್ಚಿಸುವಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಅನನ್ಯ: ಡಾ.ಕುಮಾರ ಹೆಗ್ಡೆ ಬಿ.ಎ

Upayuktha
0

ಉಜಿರೆ: ಸಂಖ್ಯಾಶಾಸ್ತ್ರವು ವಿವಿಧ ಕ್ಷೇತ್ರಗಳ ವೃತ್ತಿಪರತೆಯನ್ನು ಹೆಚ್ಚಿಸುವ ನೆಲೆಗಟ್ಟಿನಲ್ಲಿತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಎಸ್.ಡಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು.


ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ವಿಭಾಗವು ಆಯೋಜಿಸಿದ 'ಸ್ಟ್ಯಾಟ್‍ಟೆಕ್ -2023' ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಖಾಸಗಿ  ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸಂಖ್ಯಾಶಾಸ್ತ್ರದ ಪಾಲು ದೊಡ್ಡದಾಗಿದೆ. ಮಾರುಕಟ್ಟೆ ವಿಶ್ಲೇಷಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮನಶಾಸ್ತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನಇರುವಿಕೆಯನ್ನು ಗುರುತಿಸಿಕೊಂಡಿದೆ, ಈ ಮೂಲಕ ಹಲವಾರು ವಿಷಯಗಳೊಂದಿಗೆ ಬೆರೆತುಕೊಂಡಂತಾಗಿದೆ, ಔದ್ಯೋಗಿಕ ತೃಪ್ತಿಗೆ ಸಂಬಂಧಿಸಿದ ಹಲವಾರು ಸಂಶೋಧನೆಗಳಿಗೂ ಸಂಖ್ಯಾಶಾಸ್ತ್ರ ಸಹಾಯಕಾರಿ ಎಂದರು.


ಈ ರೀತಿಯ ಕಾರ್ಯಕ್ರಮಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಿದ್ಯಾರ್ಥಿಗಳ ಕೌಶಲಗಳ ಅಭಿವೃದ್ಧಿಯೊಂದಿಗೆ ತಳಕು ಹಾಕಿಕೊಂಡಿವೆ.


ಕಾರ್ಯಕ್ರಮದ ಪ್ರತಿ ಹಂತಗಳಲ್ಲಿಯೂ ಭಾಗಿಯಾಗುವುದರಿಂದ ನಾಯಕತ್ವದ ಹಲವಾರು ಮಜಲುಗಳನ್ನು ಅರಿಯಲು ಸಾಧ್ಯ ಎಂದರು.ವಿಷಯದ ಕುರಿತಾದ ಆಳವಾದ ಅಧ್ಯಯನ, ಸಂಶೋಧನಾಧಾರಿತ ಕೌಶಲ್ಯ, ವ್ಯಕ್ತಿಯ ನಡುವಳಿಕೆಗಳು ಯಶಸ್ಸಿನ ಗುಟ್ಟುಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಸ್ನಾತಕೊತ್ತರ ವಿಭಾಗದ ಡೀನ್‍ ಡಾ. ವಿಶ್ವನಾಥ್ ಪಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ರೀತಿಯ ಸ್ಪರ್ಧೆಗಳು ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಹೊಸ ಚೈತನ್ಯವನ್ನು ನೀಡುತ್ತವೆ. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಬಂದು ಭಾಗವಹಿಸುವುದರಿಂದ ಸಮಾಜದೊಂದಿಗೆ ಒಡನಾಟ ಹೆಚ್ಚಾಗುವುದಲ್ಲದೆ, ಮಾಹಿತಿಗಳು ವಿನಿಮಯಗೊಳ್ಳುತ್ತವೆ ಎಂದರು.


ಸ್ಪರ್ಧೆಗಳಲ್ಲಿ 7 ಕಾಲೇಜುಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದು, ಕಾರ್ಯಕ್ರಮವನ್ನು ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಾಂತಿಪ್ರಕಾಶ್ ಸ್ವಾಗತಿಸಿ, ನಿತ್ಯಶ್ರೀ ವಂದಿಸಿ, ದೀಪಾ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತಾಕುಮಾರಿ, ಶ್ವೇತಾಕುಮಾರಿ, ಸುಪ್ರಿಯಾಎಸ್.ಪಿ, ಪ್ರದೀಪ್ ಕೆ. ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top