ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಘಟಕ 1&2 ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇದರ ವತಿಯಿಂದ ಬುಧವಾರ (ಮೇ 31) ಎನ್ಎಸ್ಎಸ್ ನ ಎಲ್ಲಾ ಸ್ವಯಂಸೇವಕರಿಗೆ ಸೃಜನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎನ್ಎಸ್ಎಸ್ ನ ಯೋಜನಾಧಿಕಾರಿಯಾದ ಪ್ರೋ.ಸಂತೋಷ್ ಪ್ರಭುರವರು ಪ್ರಾಸ್ತಾವಿಕ ಮಾತಿನ ಮೂಲಕ ಸ್ವಯಂ ಸೇವಕರಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರ ವ್ಯಕ್ತಿತ್ವ ವಿಶ್ಲೇಷಣೆ, ಪ್ರಕೃತಿ ಸ್ನೇಹಿ ಮಾದರಿ ತಯಾರಿಕೆ, ಭಿತ್ತಿ ಪತ್ರ ತಯಾರಿಕೆ, ಕಿರು ಚಿತ್ರ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ವಯಂಸೇವಕರನ್ನು ಏಳು ತಂಡಗಳಾಗಿ ವಿಭಾಗಿಸಿ, ಎಲ್ಲರೂ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವಕಾಶ ಕಲ್ಪಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಕದಂಬ ತಂಡದ ಸದಸ್ಯರು ಸಮಗ್ರ ಪ್ರಶಸ್ತಿಯ ವಿಜೇತರಾದರು. ಲಘು ಉಪಹಾರವನ್ನು ಸ್ವಯಂಸೇವಕರೇ ತಯಾರಿಸಿ ಉಣಬಡಿಸುವ ಮೂಲಕ ತಮ್ಮ ಪಾಕ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದರು.
ಎನ್ಎಸ್ಎಸ್ ಯೋಜನಾಧಿಕಾರಿಗಳು ಮತ್ತು ಬೋಧಕ-ಬೋಧಕೇತರ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾ ಸೇ ಯೋ.2022-23ರ ಪದಾಧಿಕಾರಿಗಳು ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ