ಟಾರ್ಗೆಟ್ ನೀಟ್ 2024 ತರಗತಿಗಳಿಗೆ ದಾಖಲಾತಿ ಆರಂಭ

Upayuktha
0

ಅಂಬಿಕಾ ನೀಟ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ನೀಟ್ ಅಕಾಡೆಮಿ ವತಿಯಿಂದ ಟಾರ್ಗೆಟ್ ನೀಟ್ 2024 ತರಗತಿಗಳನ್ನು ಜೂನ್ 12ರಿಂದ ಆರಂಭಿಸಲಾಗುತ್ತಿದೆ. 20022-23ರ ನೀಟ್ ಪರೀಕ್ಷೆಯಲ್ಲಿ ಉದ್ದೇಶಿತ ಅಂಕಗಳನ್ನು ದಾಖಲಿಸಲು ವಿಫಲವಾದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ಸುವರ್ಣಾವಕಾಶ ಪುತ್ತೂರಿನಲ್ಲಿ ದೊರಕುತ್ತಿದೆ. ಪ್ರಸ್ತುತ ವರ್ಷದಿಂದ ಅಂಬಿಕಾ ನೀಟ್ ಅಕಾಡೆಮಿ ಪಿಯು ವಿದ್ಯಾರ್ಥಿಗಳ ಮೆಡಿಕಲ್ ಕನಸನ್ನು ಈಡೇರಿಸುವಲ್ಲಿ ಸಹಕಾರಿಯೆನಿಸಲಿದೆ.


ರಾಜ್ಯದ ತಜ್ಞ ಉಪನ್ಯಾಸಕ ವೃಂದ ಅಂಬಿಕಾ ನೀಟ್ ಅಕಾಡೆಮಿಯಲ್ಲಿ ತರಗತಿ ನಡೆಸಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೆಡೆಗೂ ಪರಿಪೂರ್ಣ ಗಮನ ಹರಿಸುವ ಬದ್ಧತೆಯನ್ನು ಸಂಸ್ಥೆ ಒಡಮೂಡಿಸಿಕೊಂಡಿದೆ. ಪ್ರತೀ ವಾರ ನೀಟ್ ಮಾದರಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ. ನೀಟ್ ಪರೀಕ್ಷೆಯ ಸಿಲೆಬಸ್‍ಗೆ ಸಂಬಂಧಿಸಿದಂತೆ ಪ್ರತಿಯೊಂದು ವಿಷಯಗಳಿಗೂ ನೋಟ್ಸ್ ಒದಗಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಸಂಪೂರ್ಣ ಮಾರ್ಗದರ್ಶನ ನೀಡಲಾಗುತ್ತದೆ. ಹುಡುಗರಿಗೆ ಹಾಗೂ ಹುಡುಗಿಯರಿಗೆ ಅತ್ಯುತ್ತಮ ಹಾಸ್ಟೆಲ್ ವ್ಯವಸ್ಥೆಯನ್ನು ಒದಗಿಸಿಕೊಡಲಾಗುತ್ತದೆ ಹಾಗೂ ಉಪನ್ಯಾಸಕ ಸಹಿತವಾದ ಅಧ್ಯಯನ ಅವಧಿಯನ್ನು ಕಲ್ಪಿಸಿಕೊಡಲಾಗುತ್ತದೆ. ಇದರಿಂದ ಅಧ್ಯಯನ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಷಯಾವಾರು ಸಂದೇಹಗಳನ್ನು ಪರಿಹರಿಸಲು ಸಾಧ್ಯವಾಗಲಿದೆ. 


ಇಷ್ಟಲ್ಲದೆ ಈ ಹಿಂದಿನ ನೀಟ್ ಪರೀಕ್ಷೆಗಳ ಆಧಾರದಲ್ಲಿ 75ಕ್ಕೂ ಅಧಿಕ ಮಾದರಿ ನೀಟ್ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. 


ದಾಖಲಾತಿ ಆರಂಭ: ಟಾರ್ಗೆಟ್ ನೀಟ್ 2024 ತರಗತಿಗಳಿಗೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು ಅನೇಕ ಮಂದಿ ವಿದ್ಯಾಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನು ಕೆಲವು ಅವಕಾಶಗಳು ಲಭ್ಯವಿದ್ದು, ಆಸಕ್ತರು ತಕ್ಷಣ ಹೆಸರು ನೋಂದಾಯಿಸುವಂತೆ ತಿಳಿಸಲಾಗಿದೆ.


ಶುಲ್ಕ ರಿಯಾಯಿತಿ: 2022-23ರ ನೀಟ್ ಫಲಿತಾಂಶದಲ್ಲಿ 500ರಿಂದ ಅಧಿಕ ಅಂಕ ದಾಖಲಿಸಿದವರಿಗೆ  ಒಟ್ಟು ಶುಲ್ಕದಲ್ಲಿ ಐವತ್ತು ಶೇಕಡಾ ರಿಯಾಯಿತಿ ದೊರಕಲಿದೆ. 450ರಿಂದ 499ರ ಮಧ್ಯೆ ಅಂಕ ದಾಖಲಿಸಿದ ವಿದ್ಯಾರ್ಥಿಗಳಿಗೆ ಒಟ್ಟು ಶುಲ್ಕದ ಇಪ್ಪತ್ತೈದು ಶೇಕಡಾ ರಿಯಾಯಿತಿ, 400 ಅಂಕದಿಂದ 449ರ ಮಧ್ಯೆ ಅಂಕ ದಾಖಲಿಸಿದ ವಿದ್ಯಾರ್ಥಿಗಳಿಗೆ ಹದಿನೈದು ಶೇಕಡಾ ರಿಯಾಯಿತಿ ದೊರಕಲಿದೆ.

ಸಂಪರ್ಕಕ್ಕೆ: 9448835488, 9741481600, 8431285970

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top