3 ಡಿಸ್ಟಿಂಕ್ಷನ್, 24 ಪ್ರಥಮ ಶ್ರೇಣಿ- ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ
ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಾಸರಿ 75.6 ಶೇಕಡ ಫಲಿತಾಂಶ ಪಡೆದಿದ್ದು, ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಬಹುಪಾಲು ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಸರಾಸರಿ ಅಂಕಗಳನ್ನು ಪಡೆದಿರುವುದು ಗಮನಾರ್ಹವಾಗಿದೆ.
ಪರೀಕ್ಷೆಗೆ ಹಾಜರಾದ 49 ಮಂದಿ ವಿದ್ಯಾರ್ಥಿಗಳಲ್ಲಿ 37 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 3 ಮಂದಿ ಡಿಸ್ಟಿಂಕ್ಷನ್, 24 ಮಂದಿ ಪ್ರಥಮ ಶ್ರೇಣಿ ಪಡೆದಿರುವುದು ವಿಶೇಷ. ಮಹಮ್ಮದ್ ಸಿನಾನ್ 572 ಅಂಕ (91.52 ಶೇ) ಗಳಿಸುವುದರೊಂದಿಗೆ ಎ+ ಗ್ರೇಡ್ ಪಡೆದು ಶಾಲೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾನೆ. ರೇಷ್ಮ 557 ಅಂಕ (89.12 ಶೇ), ಸ್ವಾತಿ 537 ಅಂಕ (85.92 ಶೇ), ಜುಲೈಕಾ 530 ಅಂಕ (84.8 ಶೇ), ಸಿ. ಸ್ವಾತಿ 526 ಅಂಕ (84.16 ಶೇ), ಮೊಹಮ್ಮದ್ ಆಶಿಕ್ ಕೆ 501 ಅಂಕ (80.16 ಶೇ) ಇವರೆಲ್ಲರೂ ಎ ಗ್ರೇಡ್ ಪಡೆದಿರುತ್ತಾರೆ. ಸಿ. ಸ್ವಾತಿ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125 ಅಂಕ ಪಡೆದಿರುತ್ತಾಳೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ