ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ ಮಿಷನ್ ನಗರ 2.0 ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಅತ್ಯಂತ ಪರಿಣಾಮ ಬೀರುವ ಅಭಿಯಾನ ಆರಂಭಿಸಿದೆ.
ನವೀಕರಿಸಿ ಮರು ಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಹಾಗೂ ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಮುಖ ಉದ್ದೇಶದಿಂದ "ನನ್ನ ಲೈಫ್ ನನ್ನ ಸ್ವಚ್ಛ ನಗರ ಯೋಜನೆ” ಕಾರ್ಯಕ್ರಮದಡಿ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಣ ತ್ಯಾಜ್ಯ ಸಂಗ್ರಹಣಾಕೇಂದ್ರ ಅಥವಾ ಗುರುತಿಸಲಾದ ಮೆಟೀರಿಯಲ್‍ರಿ ಕವರಿ ಫೆಸಿಲಿಟಿ (ಎಂಆರ್‍ಎಫ್) ಗಳಲ್ಲಿ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಬಳಸಿದ ಹಳೆ ವಸ್ತುಗಳನ್ನು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು ಬಳಸಿ ನನ್ನ ಲೈಫ್ ನನ್ನ ಸ್ಪಚ್ಛ ನಗರಯೋಜನೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ತೀರ್ಮಾನಿಸಿದೆ.
ಅದರ ಹಿನ್ನಲೆಯಲ್ಲಿ ಇದೇ ಮೇ.20ರಿಂದ ಜೂನ್ 5ರ ವರೆಗೆ ನಗರದ ಹಲವೆಡೆ ಹಳೆ ವಸ್ತುಗಳನ್ನು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಲಾಗಿದೆ.
ಕೇಂದ್ರಗಳ ವಿವರ:
ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯಕಚೇರಿ, ಲಾಲ್ ಭಾಗ್‍ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡ ಹಾಗೂ ವೆಲೆನ್ಸಿಯಾ ವಾರ್ಡ್‍ಕಚೇರಿ, ಕಾವೂರು ಮಾರುಕಟ್ಟೆ, ಹಂಪನಕಟ್ಟೆಯ ಕುದ್ಮಲ್ ರಂಗರಾವ್ ಪುರಭವನ ಹಾಗೂ ಸುರತ್ಕಲ್‍ನ ಮಾಧವನಗರ, ಜಜಾಲ್ ಹಾಗೂ ಕಾವೂರಿನ ಒಣ ತ್ಯಾಜ್ಯ ಸಂಗ್ರಹಕೇಂದ್ರ, ತಣ್ಣೀರುಬಾವಿ ಬೀಚ್‍ನಲ್ಲಿ ಮರು ಬಳಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ಈ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಹಳೆಯ ಆಟಿಕೆ ವಸ್ತುಗಳನ್ನು, ಬಳಸಿದ ಬಟ್ಟೆ ಹಾಗೂ ಚಪ್ಪಲಿಗಳು, ದಿನಪತ್ರಿಕೆಗಳನ್ನು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ವಿವಿಧ ಬಗೆಯ ನವೀಕರಿಸಿ ಮರುಬಳಸಬಹುದಾದ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಿ ಕಾರ್ಯಕ್ರಮದ ಉಪಯೋಗ ಪಡೆಯುವಂತೆ ಹಾಗೂ ಸುಸ್ಥಿರ ಜೀವನ ಪದ್ದತಿಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಮುಖ ಉದ್ದೇಶವನ್ನು ಮನಗಂಡು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ