ಮೇ 23: ಪ್ರಧಾನಿ ಮೋದಿ ಸಿಡ್ನಿಗೆ; ಮಂಗಳೂರಿನ ಅನಿಶಾ ಪೂಜಾರಿ ಅವರಿಂದ ಸ್ವಾಗತ ನೃತ್ಯ

Upayuktha
0

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ಮಂಗಳವಾರ ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯ ವಿಶ್ವ ನಾಯಕ ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಲಿದೆ. ಈ ಕಾರ್ಯಕ್ರಮದಲ್ಲಿ ಅಲ್ಲಿನ ಪ್ರಧಾನಿ ಆಂಟನಿ ಅಲ್ಬಾನೀಸ್ ಕೂಡ ಭಾಗಿಯಾಗಲಿದ್ದಾರೆ.


ಆಸ್ಟ್ರೇಲಿಯಾ ಪ್ರಧಾನಿ ಜತೆ ದ್ವಿಪಕ್ಷೀಯ ಸಭೆಯ ಬಳಿಕ ಈ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಜೈ ಕಾಪಿಕಾಡ್‌ ನಿವಾಸಿ ಅನಿಶಾ ಪೂಜಾರಿ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅನಿಶಾ ಅವರನ್ನೊಳಗೊಂಡ 'ನಾಟ್ಯೋಕ್ತಿ' ನೃತ್ಯ ತಂಡವು ತುಳು ಜಾನಪದ ಹಾಡುಗಳು ಮತ್ತು ಕಾಂತಾರ ಚಿತ್ರದ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಲಿದೆ.


ಪದ್ಮನಾಭ ಪೂಜಾರಿ ಮತ್ತು ರೂಪಾ ಪದ್ಮನಾಭ್ ದಂಪತಿಗಳ ಪುತ್ರಿಯಾಗಿರುವ ಅನಿಶಾ ಪೂಜಾರಿ (32) ಅವರು ಸಿಡ್ನಿಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿಯಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರು ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿಬಿಎಂ ಮತ್ತು ಎಂಬಿಎ ಅಧ್ಯಯನ ಮಾಡಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
To Top